Connect with us
Loading...
Loading...

ಪ್ರಚಲಿತ

ತಾಜಮಹಲ್ ನಲ್ಲಿ ಮೊಳಗಲಿದೆ ರಾಮನಾಮ ಜಪ!! ದಶಕಗಳ ತಾಜ್ ಕಳಂಕ ಅಳಿಸಿಹೋಗುವ ಕಾಲ ಸನ್ನಿಹಿತ?

Published

on

 • 665
 •  
 •  
 •  
 •  
 •  
 •  
 •  
  665
  Shares

ಜಗತ್ತು ತಾನು ಏನೆಂದು ತಿಳಿಯುವ ಹೊತ್ತಿಗೆ, ಭಾರತ ನಾಗರಿಕತೆಯಲ್ಲಿ ಅತೀ ಎತ್ತರದ ಸ್ಥಾನದಲ್ಲಿತ್ತು. ಜಗತ್ತು ಯೋಚನೆ ಮಾಡುವ ಮುನ್ನವೇ ಆ ಯೋಚನೆಯ ವಸ್ತು ಆಗಿ ಹೋಗಿರುತ್ತಿತ್ತು. ಜಗತ್ತು ತನ್ನ ಸ್ಥಾನ ಮಾನವನ್ನು ಅರಿಯುವ ಮುಂಚೆಯೇ ಭಾರತದಲ್ಲಿ ವೇದದ ಅಧ್ಯಯನ, ಉಪನಿಷತ್, ಶಸ್ತ್ರ ಚಿಕಿತ್ಸೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾವು ಅಂದರೆ ಭಾರತೀಯರು ಉತ್ತುಂಗದಲ್ಲಿದ್ದೆವು, ಇವುಗಳ ಹೊರತಾಗಿ ಅತೀ ಶ್ರೀಮಂತರಾಗಿದ್ದೆವು. ಬರೀ ಶ್ರೀಮತಿಕೆಯಷ್ಟೇ ಅಲ್ಲ.

ಭಾರತ ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನ, ಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು ಹೀಗೆ ಹಲವಾರು ಕ್ಷೇತ್ರದಲ್ಲಿ ಉತ್ತುಂಗದಲ್ಲಿತ್ತು. ಶಾಂತವಾಗಿ, ಸದಾ ಸಂತುಷ್ಟವಾಗಿ ಎಲ್ಲರನ್ನು ಪ್ರೀತಿಸುತ್ತ ಸಂಪದ್ಭರಿತ ರಾಷ್ಟ್ರವಾಗಿ ಭಾರತ ಮಿಂಚುತ್ತಿತ್ತು.

ಆಗಲೇ ವಿದೇಶಿ ಆಕ್ರಮಣಕಾರರ ಕಣ್ಣು ಭಾರತದ ಮೇಲೆ ಬಿದ್ದದ್ದು. ಭಾರತದ ಮೇಲೆ ಘಜ್ನಿ, ಘೋರಿಯರೆಂಬ ರಕ್ತ ಪಿಪಾಶು ಇಸ್ಲಾಂ ಮೂಲಭೂತಚಾದಿ ದಾಳಿಕೋರರು ದಾಳಿ ಮಾಡಿದರು. ಉದ್ದೇಶ ಲೂಟಿಗೈಯ್ಯುವುದೇ ಆಗಿತ್ತು. ಆದರೆ ಅವರು ಅಷ್ಟಕ್ಕೆ ತೃಪ್ತರಾಗದೆ ಮಹಿಳೆಯರ ಮೇಲೆ ಹೀನಾತಿತವಾಗಿ ಅತ್ಯಾಚಾರ ನಡೆಸಿದರು. ಮಂದಿರ, ಮೂರ್ತಿಗಳನ್ನು ಒಡೆದು ನಾಶಗೈದರು.

ಹಿಂದೂ ಧರ್ಮದೆಡೆಗಿನ ತಮ್ಮ ಅಸಹಿಷ್ಣುತೆಯನ್ನು ಚೆನ್ನಾಗಿಯೇ ಪ್ರದರ್ಶಿಸಿದರು. ನಳಂದಾದಂತಹ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿ, ಸಾಹಿತ್ಯವನ್ನು ನಾಶ ಮಾಡಿದರು, ಬೌದ್ಧಿಕ ಸಂಪತ್ತನ್ನು ಸೂರೆಗೈದರು. ಹಿಂದುವಾಗಿ ಹುಟ್ಟಿದ್ದಕ್ಕೆ ತೆರಿಗೆ ಕಟ್ಟಿ ಬದುಕಬೇಕೆಂಬ ವಾತಾವರಣವನ್ನು ಸೃಷ್ಟಿ ಮಾಡಿದರು.

ಮುಸಲ್ಮಾನ ಆಕ್ರಮಣಕಾರರು ಭಾರತದ ಬಹುತೇಕ ಎಲ್ಲಾ ದೇವಸ್ಥಾನಗಳನ್ನೂ ಲೂಟಿ ಮಾಡಿ, ವಿಗ್ರಹಗಳನ್ನು ನಾಶ ಮಾಡಿದ್ದರು. ದಾಳಿ ಮಾಡಲು ಬಂದಾಗ ಅವರ ಉದ್ದೇಶ ದಾಳಿಯಷ್ಟೇ ಆಗಿತ್ತು. ದಾಳಿ ಮಾಡಿದ ಮೇಲೆ ಅವರು ಅಷ್ಟಕ್ಕೇ ಸಂತುಷ್ಟರಾಗದೇ ನಮ್ಮ ಸನಾತನ ಸಂಸ್ಕೃತಿಯ ಮೇಲೆ ಕಣ್ಣು ಹಾಕಿದರು‌. ಅವರ ತಲೆಯಲ್ಲಿ ಮತಾಂಧತೆಯ ಭೂತ ಆವರಿಸಿತು. ಹಾಗಾಗಿಯೇ ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸುವ ಕೆಟ್ಟ ಕೆಲಸಕ್ಕೆ ಅಣಿಯಾದರು.

ಸನಾತನ ಸಂಸ್ಕೃತಿಯ ವಾರಸುದಾರರಾದ ಹಿಂದುಗಳನ್ನು ಮತಾಂತರಿಸಬೇಕಾದರೆ ಹಿಂದುಗಳ ಶ್ರದ್ಧಾ ಬಿಂದುಗಳಾಗಿದ್ದ ದೇವಾಲಯಗಳನ್ನು ನಾಶಪಡಿಸಬೇಕೆಂದುಕೊಂಡು ಮುಸಲ್ಮಾನ ಆಕ್ರಮಣಕಾರರು ಭಾರತದ ಬಹುತೇಕ ಎಲ್ಲಾ ದೇವಸ್ಥಾನಗಳನ್ನೂ ಲೂಟಿ ಮಾಡಿ, ವಿಗ್ರಹಗಳನ್ನು ನಾಶ ಮಾಡಿದ್ದರು.

ದೇವಸ್ಥಾನಗಳು ನಾಶವಾದರೆ ಹಿಂದೂ ಧರ್ಮವೇ ನಾಶವಾಗುತ್ತದೆಂದು ಭಾರತದಲ್ಲಿರುವ ಹಿಂದೂ ದೇವಾಲಯಗಳನ್ನು ನಾಶ ಮಾಡಿದ್ದರು. ಆಗಲೇ ನೋಡಿ ಪ್ರಭು ಶ್ರೀರಾಮ ಚಂದ್ರನ ಮಂದಿರ ಬಾಬರಿ ಮಸೀದಿಯಾಗಿದ್ದು, ಆಗಲೇ ಭದ್ರಕಾಳಿ ದೇವಾಲಯ ಜಾಮಾ ಮಸೀದಿಯಾಗಿದ್ದು, ಅಗಲೇ ಅಟಲಾ ದೇವಿಯ ದೇವಸ್ಥಾನ ಜುಮ್ಮಾ ಮಸೀದಿಯಾಗಿದ್ದು, ಆಗಲೇ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗ್ಯಾನ್ ವ್ಯಾಪಿ ಮಸೀದಿ ನಿರ್ಮಾಣವಾಗಿದ್ದು.

ಭಾರತದ ಮೇಲೆ ದಾಳಿ ಮಾಡಿ ಭಾರತವನ್ನು ಕೊಳ್ಳೆ ಹೊಡೆದು ನಮ್ಮ ಸನಾತನ ಸಂಸ್ಕೃತಿಗೆ ಸಾಕಷ್ಟು ಹಾನಿ ಮಾಡಿದ್ದ ಮೊಘಲರ ಹೆಸರನ್ನು ಹಲವಾರು ಊರುಗಳಿಗೆ ನಾಮಕರಣ ಮಾಡಿದ್ದರು. ಆಗಲೇ ಭಾಗ್ಯ ನಗರ ಹೈದರಾವಾದ್ ಆಗಿದ್ದು, ಆಗಲೇ ಕರ್ಣಾವತಿ ಅಹಮಾದಾಬಾದ್ ಆಗಿದ್ದು,  ಆಗಲೇ ಸಂಭಾಜಿ ನಗರ ಔರಾಂಗಾಬಾದ್ ಆಗಿದ್ದು. ಹೀಗೆ ಹೇಳುತ್ತಾ ಹೋದರೆ ಮುಗಿಯದ ಕಥೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿ ಯೋಗಿ ಆದಿತ್ಯನಾಥ್ ರು ಅಧಿಕಾರ ವಹಿಸಿಕೊಂಡ ನಂತರ ಮೊಘಲರ ಹೆಸರಲ್ಲಿದ್ದ ಹಲವಾರು ಊರುಗಳ ಹೆಸರನ್ನು ನಮ್ಮ ದೇಶದ ಸಂಸ್ಕೃತಿಗೆ ತಕ್ಕಂತೆ ಮರುನಾಮಕರಣ ಮಾಡಿ ಜನಮಚ್ಚುಗೆಗೆ ಪಾತ್ರರಾಗಿದ್ದರು.

ಈಗ ಇಂತಹದ್ದೇ ವಿಚಾರದಲ್ಲಿ ಸಿಹಿಸುದ್ದಿಯೊಂದು ಉತ್ತರ ಪ್ರದೇಶದಿಂದ ಬಂದಿದೆ. ತಾಜ್ ಮಹಲ್ ಆವರಣದಲ್ಲಿ ಪ್ರತಿ ವರ್ಷ ತಾಜ್ ಮಹೋತ್ಸವ ಎಂಬ ಉತ್ಸವವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿಯೂ ಈ ಉತ್ಸವ ಫೆಬ್ರವರಿ 18 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ.

ಹಿಂದೆ ಒಂದು ಸಲ ತಾಜ್ ಮಹಲ್ ನ ಬಗೆಗೆ ಒಂದಷ್ಟು ನಿರ್ಧಾರಗಳನ್ನು ಯೋಗೀಜಿ ನೇತೃತ್ವದ ಸರ್ಕಾರ ತೆಗೆದುಕೊಂಡಿತ್ತು. ತಾಜ್ ಮಹಲ್ ನ್ನು ಉತ್ತರ ಪ್ರದೇಶದ ಸರ್ಕಾರ ಪ್ರವಾಸೋಧ್ಯಮ ಇಲಾಖೆಯಿಂದ ಕೈಬಿಟ್ಟಿತ್ತು. ಕಾರಷವಿಷ್ಟೇ ಅದೊಂದು ದಾಸ್ಯದ ಕುರುಹು ಆಗಿತ್ತು. ಯೋಗಿಯವರು ಅದರ ಕುರಿತಂತೆ ಖಾವಾಗಿಯೇ ಹೇಳಿದ್ದರು.

ಅಷ್ಟಕ್ಕೂ ತಾಜ್ ಆವರಣದಲ್ಲಿ ಪ್ರತಿ ವರ್ಷ ತಾಜ್ ಮಹೋತ್ಸವ ಎಂಬ ಉತ್ಸವವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿಯೂ ಈ ಉತ್ಸವ ಫೆಬ್ರವರಿ 18 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ. ಆದರೆ ಈ ಬಾರಿ ಯೋಗಿ ಆದಿತ್ಯಾನಾಥರ ಸಾರಥ್ಯದಲ್ಲಿ ನಡೆಯಲಿದೆ. ಅಂದಮೇಲೆ ಏನಾದರೂ ವಿಶೇಷ ಇರಲೇಬೇಕಲ್ಲ. ಹೌದು ಖಂಡಿತವಾಗಿಯೂ ಇದೆ.

ಈ ಬಾರಿಯ ತಾಜ್ ಮಹೋತ್ಸವವು ಪ್ರಭು ಶ್ರೀ ರಾಮನ ನಾಮ ಸ್ಮರಣೆಯಿಂದ ಆರಂಭವಾಗಲಿದೆ. ಇದು ಹಿಂದುಗಳಿಗೆ ಖುಷಿಯ ವಿಚಾರ. ತಾಜ್ ಮಹಲ್ ನಲ್ಲಿ ಇಷ್ಟು ದಿನ ನಮಾಜ್ ಮಾತ್ರ ನಡೆಯುತ್ತದೆ ಅನ್ನೋದನ್ನ ಮಾತ್ರ ಕೇಳಿದ್ವಿ. ಆದರೆ ಈಗ ಯೋಗಿ ಆದಿತ್ಯನಾಥರಿಂದ ರಾಮನಾಮ ಸ್ಮರಣೆಯಾಗಲಿದೆ.

ಅಷ್ಟಕ್ಕೂ ತಾಜ್ ಮಹಲ್ ಆವರಣದಲ್ಲಿ ಇದ್ಯಾಕೆ ಗೊತ್ತಾ? ತಾಜ್ ಮಹಲ್ ಮೂಲತಃ ಹಿಂದೂ ದೇವಾಲಯ.ತಾಜದ ಮಹಲ್ ತೇಜೋಮಹಾಲಯವಾಗಿತ್ತು ಅನ್ನೋಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಅನೇಕ ಸಂಶೋಧಕರು ತಾಜ್ ಮಹಲ್ ನ ರಹಸ್ಯವನ್ನು ಬೇಧಿಸಿದ್ದಾರೆ. ಕೆಲವರು ತಾಜ್ ಮಹಲ್ ನ್ನು ಷಹಜಾನ್ ತನ್ನ ಹೆಂಡತಿಗಾಗಿ ಕಟ್ಟಿಸಿದ್ದಾನೆ ಅಂತಾರೆ. ಹಾಗೂ ತಾಜ್ ಮಹಲ್ ಮುಮ್ತಾಜಳ ಗೋರಿಯಂತಲೂ ಹೇಳುತ್ತಾರೆ. ಹೀಗಾಗಿಯೇ ತಾಜ್ ಮಹಲ್ ಎಂಬ ಹೆಸರು ಬಂತು ಅಂತ ಹೇಳುತ್ತಾರೆ.

ಕೆಲ ಡೋಂಗಿ ತಿಹಾಸಕಾರರು ನಮ್ಮ ಇತಿಹಾಸಕ್ಕೆ ತಿಪ್ಪೆ ಸವರಿ ಕುಳಿತಿದ್ದಾರೆ. ಅದನ್ನು ಬೇಧಿಸುವ ಪ್ರಯತ್ನ ಮಾಡಿದಾಗ ಮಾತ್ರ ಸತ್ಯ ತಿಳಿಯುತ್ತದೆ. ಭಾರತದ ಐತಿಹಾಸಿಕ ಮಸೀದಿಗಳ ಸುತ್ತ ಉತ್ಖನನ ನಡೆಸಿದರೆ, ಭಾರತದ ಇತಿಹಾಸವನ್ನು ಮತ್ತೊಮ್ಮೆ ಬರೆಯಬಹುದು. ಅಂದರೆ ಐತಿಹಾಸಿಕ ಮಸೀದಿಗಳ ಉತ್ಖನನ ಮಾಡಿದರೆ ಅಲ್ಲಿ ದೇವಸ್ಥಾನಗಳ ಕುರುಹು ಸಿಗುತ್ತವೆ. ದೇವಸ್ಥಾನಗಳನ್ನು ನಾಶ ಮಾಡಿ ಮಸೀದಿಗಳನ್ನು ಕಟ್ಟಿಸಿರುವ ಸತ್ಯ ಹೊರಬರುತ್ತದೆ.

ಸಂಶೋಧಕರ ಸಂಶೋಧನೆಯಿಂದ ತಾಜ್ ಮಹಲ್ ತೇಜೋಮಹಲಾಯ ಆಗಿತ್ತು ಅಲ್ಲಿ ಶಿವನನ್ನು ಆರಾಧಿಸುತ್ತಿದ್ದರು ಎನ್ನುವ ಅನೇಕ ಪುರಾವೆಗಳು ದೊರೆತಿವೆ. ಸಂಶೋಧಕರು ಹೇಳುವ ಪ್ರಕಾರ ತೇಜೋ ಮಹಲ್ ನ್ನು ಅಂದಿನ ಜೈಪುರದ ರಾಜ ಜೈ ಸಿಂಗನಿಂದ ಮತಾಂಧ ಷಹಜಾನ್ ಕಸಿದುಕೊಂಡಿದ್ದ. ಅನಂತರ ಅದನ್ನ ತಾಜ್ ಮಹಲ್ ಆಗಿ ಮಾಡಿದ. ಇದರ ಕುರಿತಾದ ಅನೇಕ ಪುರಾವೆಗಳಿವೆ.

ಇವೆಲ್ಲವುದರ ಅರಿವಿರುವ ಸಹೃದಯಿ ಸಂತ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥರು ಪ್ರತಿ ವರ್ಷದಂತೆ ಈ ವರ್ಷವೂ ತಾಜ್ ಮಹೋತ್ಸವ ಎಂಬ ಉತ್ಸವವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಣೆ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥರ ನೇತೃತ್ವ ಇರುವುದರಿಂದ ಈ ಬಾರಿಯ ತಾಜ್ ಮಹೋತ್ಸವವು ಪ್ರಭು ಶ್ರೀ ರಾಮನ ನಾಮ ಸ್ಮರಣೆಯಿಂದ ಆರಂಭವಾಗಲಿದೆ. ದಾಸ್ಯದ ಕುರುಹಾಗಿದ್ದ ಮೊಘಲ ದರ್ಬಾರಿಗೆ ಯೋಗಿ ಆದಿತ್ಯನಾಥರು ಸೆಡ್ಡು ಹೊಡೆದಂತಿದೆ.

ರಾಮನಾಮ ಸ್ಮರಣೆಯ ನಂತರ ತಾಜ್ ಮಹೋತ್ಸವ ಉದ್ಘಾಟನೆಯಾಗುತ್ತೆ. ಅದನ್ನು ಉದ್ಘಾಟಿಸುವವರು ಉತ್ತರ ಪ್ರದೇಶದ ರಾಜ್ಯಪಾಲರಾದ ರಾಮ್ ನಾಯ್ಕ್ ಹಾಗೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರು. ಉದ್ಘಾಟನೆಯ ನಂತರ
ರಾಮಾಯಣ ಕುರಿತಾದ ನೃತ್ಯದ ಮೂಲಕ ಆರಂಭಗೊಳ್ಳುತ್ತದೆ.

ಒಟ್ಟಿನಲ್ಲಿ ಈ ಬಾರಿಯ ತಾಜ್ ಮಹೋತ್ಸವ ಇತಿಹಾಸದ ಮೈಲುಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಲಿವೆ. ಯಾಕೆ ಗೊತ್ತಾ? ಮೊಗಲರ ಸಂಸ್ಕೃತಿಗೆ ಕೊಳ್ಳಿ ಇಟ್ಟು, ಈ ಬಾರಿ ರಾಮನಾಮ ಸ್ಮರಣೆಯಾಗಲಿದೆ. ಅದು ಕೂಡಾ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥರಿಂದ.

ಜೈ ಶ್ರೀರಾಮ್!!

– Team Nationalist Views
(2018 Copyrights Reserved)

 •  
  665
  Shares
 • 665
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com