Connect with us
Loading...
Loading...

ಸಿನೆಮಾ

ಕನ್ನಡದ ಬಗ್ಗೆ ಅವಹೇಳನಕಾರಿ ಮಾತನಾಡಿದ ರಷ್ಮಿಕಾ ಮಂದಣ್ಣ; ಕನ್ನಡಿಗರು ರೊಚ್ಚಿಗೇಳಲು ಕಾರಣವೇನು ಗೊತ್ತಾ.?

Published

on

  •  
  •  
  •  
  •  
  •  
  •  
  •  
  •  

ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲೆಡೆ ಹೆಸರುವಾಸಿಯಾಗುರುವ ನಟಿ ರಷ್ಮಿಕಾ ಮಂದಣ್ಣ ತನ್ನ ಚಿಚ್ಚಲ ಸಿನೆಮಾ ಕನ್ನಡದಲ್ಲೆ ಮಾಡಿದ್ದರಿಂದ ಪರ ಭಾಷೆಯ ಚಿತ್ರಗಳಿಗೆ ಮಣೆ ಹಾಕಿವೆ ಎಂದು ಹೇಳಬಹುದು ಹೌದು ಕಿರಿಕ್ ಪಾರ್ಟಿ ಎಂಬ ಕನ್ನಡ ಚಲನಚಿತ್ರದಲ್ಲಿ ಅದ್ಭುತ ನಟನೆ ಮಾಡಿದ ರಷ್ಮಿಕಾ ಇದೀಗ ಕನ್ನಡದ ಬಗ್ಗೆ ತಿರಸ್ಕಾರದ ಮಾತುಗಳನ್ನಾಡಿದ್ದಾರೆ.

ಕಿರಿಕ್​ ಪಾರ್ಟಿ ಯಶಸ್ಸಿನ ನಂತರ ರಶ್ಮಿಕಾಗೆ ಪರಭಾಷೆಯಿಂದ ಆಫರ್​ಗಳು ಬರಲು ಆರಂಭವಾದವು. ಅದನ್ನು ಅವರು ಒಪ್ಪಿಕೊಂಡರು ಕೂಡ. ತೆಲುಗಿನ ‘ಚಲೋ’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್​ ಅಂಗಳದಲ್ಲೂ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡರು ರಶ್ಮಿಕಾ. ಕನ್ನಡತಿಯೊಬ್ಬರು ಇಷ್ಟು ದೊಡ್ಡ ಮಟ್ಟದ ಹೆಸರು ಮಾಡಿದ್ದು ಕರ್ನಾಟಕದವರ ಪಾಲಿಗೆ ಹೆಮ್ಮೆ ಎಂದು ಅನೇಕ ಕನ್ನಡಿಗರು ಭಾವಿಸಿದ್ದರು.

ಆದರೆ ರಷ್ಮಿಕಾ ಅವರ ಈ ನಡೆ ಎಲ್ಲರಿಗೂ ಸಿಟ್ಟು ತರಿಸಿದೆ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ರಶ್ಮಿಕಾ ಆಂಗ್ಲ ಭಾಷೆ  ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಆದರೆ, ಟಾಲಿವುಡ್​ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲುಗು ಮಾತನಾಡಲು ಆರಂಭಿಸಿದ್ದರು.

ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಕನ್ನಡ ವಿರೋಧಿ ಎಂದು ಅನೇಕರು ಹೇಳಿಕೊಂಡಿದ್ದರು ಆದರೆ ಈಗ ರಶ್ಮಿಕಾ ಕನ್ನಡ ಮಾತನಾಡುತ್ತಾರೆ. ಅವರ ಮುಂಬರುವ ‘ಡಿಯರ್ ಕಾಮ್ರೇಡ್​’ ಚಿತ್ರದ ಕನ್ನಡ ಅವತರಣಿಕೆಗೆ ರಶ್ಮಿಕಾ ಅವರೇ ಡಬ್​ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲವಂತೆ. ಈ ಬಗ್ಗೆ ತಮಿಳು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಡಿಯರ್​ ಕಾಮ್ರೇಡ್​ ಕನ್ನಡ ಅವತರಣಿಕೆ ವಿಚಾರ ಬಂದಾಗ “ನನಗೆ ಕನ್ನಡ ಕೂಡ ಕಷ್ಟ. ನಿಜ ಹೇಳಬೇಕೆಂದರೆ ನನಗೆ ಕನ್ನಡ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ,” ಎಂದು ತಮಿಳಿನಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದಿಮನದಲೇ ಚಿತ್ರಲೋಕದ ಜಗತ್ತಿಗೆ ಪಾದಾರ್ಪಣೆ ಮಾಡಿದ ರಷ್ಮಿಕಾ ಇದೀಗ ಕನ್ನಡ ಬರಲ್ಲ, ಕನ್ನಡ ಮಾತನಾಡೋಕೆ ಕಷ್ಟ ಎಂದು ಹೇಳುತ್ತಿರುವುದನ್ನು ನೋಡಿದರೆ ಇದು ಪ್ರಚಾರದ ತೆವಲೋ ಅಥವಾ ಸೆಲೆಬ್ರಿಟಿ ಎಂಬ ಅಹಂ ಎನ್ನುವುದೇ ಅರ್ಥವಾಗುತ್ತಿಲ್ಲ, ಒಟ್ಟಿನಲ್ಲಿ ಕನ್ನಡಿಗರ ಟೀಕಾ ಪ್ರಹಾರಗಳಂತು ವ್ಯಾಪಕವಾಗ್ತಿವೆ.

-Team Nationalist Views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com