Connect with us
Loading...
Loading...

ಅಂಕಣ

ಪ್ರಧಾನಿ ಮೋದಿಯನ್ನ ಕಂಡ್ರೆ ವಿರೋಧಿಗಳ್ಯಾಕೆ ಉರ್ಕೊಂತಾರೆ ಗೊತ್ತಾ?

Published

on

  • 1.3K
  •  
  •  
  •  
  •  
  •  
  •  
  •  
    1.3K
    Shares

ಪ್ರಧಾನಿ ಮೋದಿ ಎಂದರೆ ಕೆಲವರು ಅದ್ಯಾಕೆ ಅಷ್ಟೊಂದು ಹೊಟ್ಟೆಗೆ ಬೆಂಕಿ ಬಿದ್ದಂತೆ ಆಡ್ತಾರೆ ಗೊತ್ತಾ?

ಇಡೀ ಜಗತ್ತೇ “ಮೋದಿ ಮೋದಿ” ಅಂತ ಗುಣಗಾನ ಮಾಡುತ್ತಿರಬೇಕಾದರೆ ನಮ ದೇಶದವರೇ ಯಾಕೆ ಮೋದಿಯನ್ನ ವಿರೋಧ ಮಾಡಲು ತುದಿಗಾಲಮೇಲೆ ನಿಂತಿರುತ್ತಾರೆ ಗೊತ್ತಾ?

ಅದಕ್ಕೆ ಕಾರಣಗಳಿವೆ ಸ್ನೇಹಿತರೇ, ಕಾರಣಗಳಿಲ್ಲದೇನೆ ಮೋದಿಯನ್ನ ವಿರೋಧಿಸಲು ಅವರಿಗೇನು ತಲೆ ಕೆಟ್ಟಿಲ್ಲ ಆದರೆ ಹೊಟ್ಟೆಗೆ ಬೆಂಕಿ ಬಿದ್ದಿದೆ ಪಾಪ!!

ಅದ್ಯಾಕ್ ಹಂಗೆ ಅನ್ನೋದನ್ನ ನೋಡೋಣ ಬನ್ನಿ

* ಆಧಾರ್ ಕಾರ್ಡ್ ಕಡ್ಡಾಯವಾಗಿ ಬ್ಯಾಂಕ್ ಅಕೌಂಟ್ ಜೊತೆ ಲಿಂಕ್ ಮಾಡಬೇಕು ಅಂತ ಮೋದಿ ಹೇಳದ್ರು, ಹಾಗ್ ಮಾಡಿದ ತಕ್ಷಣ ಮಹಾರಾಷ್ಟ್ರದಲ್ಲಿನ 1 ಮಿಲಿಯನ್ ಅಂದ್ರೆ 10 ಲಕ್ಷ ಜನ ಫೇಕ್ ಬಡವರು ಮಾಯವಾಗಿ ಹೋದ್ರು.

ಇದರರ್ಥ ಅಷ್ಟೂ ಫೇಕ್ ಬಡವರ ಹೆಸರ ಮೇಲೆ ಇಷ್ಟು ವರ್ಷಗಳ ಕಾಲ ಭ್ರಷ್ಟ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದುದನ್ನ ಮೋದಿ ಬಂದ್ ಮಾಡಿಬಿಟ್ಟಿದ್ದಾರಲ್ವ ಹಾಗಾಗಿ ಮೋದಿಯನ್ನ ಭ್ರಷ್ಟ ಅಧಿಕಾರಿಗಳು ವಿರೋಧಿಸ್ತಾರೆ.

* ಅದೇ ಆಧಾರ್ ಕಾರ್ಡ್ ಕಡ್ಡಾಯ ಯೋಜನೆಯಿಂದ 30 ಮಿಲಿಯನ್(30,000,000) ಫೇಕ್ LPG ಕನೆಕ್ಷನ್ ಇದ್ದವರು ಮಾಯವಾದರು.

ಇದರಿಂದ ಫೇಕ್ LPG ತಗೊಂಡು ಸರ್ಕಾರದ ಬೊಕ್ಕಸಕ್ಕೆ ಕೈ ಹಾಕಿ ಲೂಟಿ ಮಾಡ್ತಿದ್ದ ಭ್ರಷ್ಟರು ಮೋದಿಯನ್ನ ವಿರೋಧಿಸದೆ ಮತ್ತೇನ್ ಮಾಡ್ತಾರೆ?

* ಸ್ಕಾಲರಶಿಪ್ ಪಡೀಬೇಕಾದ್ರೆ ನಿಮ್ ಹುಡುಗರ ಆಧಾರ್ ಕಾರ್ಡನ್ನ ಕಡ್ಡಾಯವಾಗಿ ಲಿಂಕ್ ಮಾಡ್ಸಿ ಅಂತ ಮದರಸಾಗಳಿಗೆ ಮೋದಿ ಹೇಳಿದ ತಕ್ಷಣ ಸುಮಾರು ಎರಡು ಲಕ್ಷ ಜನ ಫೇಕ್ ವಿದ್ಯಾರ್ಥಿಗಳು ಅದೂ ಉತ್ತರಾಖಂಡ್ ಒಂದೇ ರಾಜ್ಯದ ಮದರಸಾಗಳಿಂದ ಕಾಣೆಯಾಗಿಬಿಟ್ರಲ್ಲ, ಮದರಸಾ ಹೆಸರ ಮೇಲೆ,‌ ಮದರಸಾ ವಿದ್ಯಾರ್ಥಿಗಳ ಹೆಸರಮೇಲೆ ಲೂಟಿ ಮಾಡ್ತಿದ್ದೋರು ಮೋದಿಯನ್ನ ವಿರೋಧ ಮಾಡದೇ ಮತ್ತಿನ್ನೇನ್ ಮಾಡ್ತಾರೆ ಸ್ವಾಮಿ?

* ಮತ್ತದೇ ಆಧಾರ್ ಕಾರ್ಡ್ ಲಿಂಕನಿಂದಾಗಿ ಸುಮಾರು 15 ಲಕ್ಷ ಜನ ಫೇಕ್ ರೇಷನ್ ಕಾರ್ಡ್ ಹೊಂದಿರುವವರು ನಾಪತ್ತೆಯಾಗ್ತಾರೆ ಅಂದ್ರೆ ಆ ರೇಷನ್ ಕಾರ್ಡಗಳ ಮೂಲಕ ಸರ್ಕಾರಕ್ಕೆ ಪಂಗನಾಮ ಹಾಕಿ ಲೂಟಿ ಹೊಡ್ದೋರಿಗೆ ಇನ್ನು ಮುಂದೆ ತಮ್ಮ ಆಟ ಇನ್ಮುಂದೆ ನಡಿಯಲ್ಲ ಅಂತ ಮೋದಿ ಮೇಲೆ ಕೋಪ ಮಾಡ್ಕೊಳ್ತಾರೋ ಇಲ್ವೋ?

ಯಾಕಿಷ್ಟು ಜನ ನಾಪತ್ತೆಯಾಗ್ತಿದಾರೆ?

ಬ್ಲ್ಯಾಕ್ ಮಾರ್ಕೆಟ್ ನ ಕಳ್ಳರ ದಂಧೆಯನ್ನೆಲ್ಲಾ ಮೋದಿ ಆಧಾರ್ ಕಾರ್ಡ್ ಅನ್ನೋ ಒಂದೇ ಅಸ್ತ್ರದಿಂದ ಒಂದೊಂದಾಗಿ ತಮ್ಮ ಆಟ ಬಂದ್ ಮಾಡ್ತಿರೋದ್ರಿಂದ ‘ನಾಪತ್ತೆ’ ಪ್ರಕರಣಗಳು ಹೆಚ್ಚಾಗ್ತಿವೆ ಅಷ್ಟೇ!

ಈಗ ಈ ಕಳ್ಳರೆಲ್ಲಾ ಸೇರ್ಕೊಂಡು ಸುಪ್ರಿಂಕೋರ್ಟ್ ಬಾಗಿಲು ಬಡಿದು ಆಧಾರ್ ಕಾರ್ಡ್ ಕಡ್ಡಾಯ ಅನ್ನೋದನ್ನ ಬದಲಿಸಿ, ಅದರದ ನಮ್ ಪ್ರೈವಸಿಗೆ ಧಕ್ಕೆ ಆಗ್ತಿದೆ ಅನ್ನೋ ಪಿಟಿಷನ್ ಫೈಲ್ ಮಾಡ್ತಾ ಓಡಾಡ್ತಿದಾರೆ. ಇದರಲ್ಲಿ ಕೆಲ ರಾಜ್ಯಗಳ ಮುಖ್ಯಮಂತ್ರಿಗಳೂ ಇದಾರೆ ಮಾರಾಯ್ರೆ.

ಬರೀ ಆಧಾರ್ ಕಾರ್ಡ್ ನಿಂದಲೇ ಇಷ್ಟು ಜನರ ನಿದ್ದೆಗೆಟ್ಟಿದೆ, ಇನ್ನೂ ಹಲವು ಖದೀಮರ ಮುಖವಾಡ ಮೋದಿ ಕಳಚಿದಾರೆ. ಅವುಗಳ್ಯಾವುವಂತ ನೋಡಣ ಬನ್ನಿ

1) ಸರಿಸುಮಾರು ಮೂರು ಲಕ್ಷ ಫೇಕ್ ಕಂಪೆನಿಗಳನ್ನ ಮೋದಿ ಬಂದ್ ಮಾಡಿಸಿದಾರೆ.

ಸಹಜವಾಗಿಯೇ ಈ ಫೇಕ್ ಕಂಪೆನಿಗಳ ಮಾಲೀಕರು ಮೋದಿ ವಿರುದ್ಧವೇ ಮಾತಾಡ್ಬೇಕಲ್ವ?

2) ಫೇಕ್ ರೇಷನ್ ಕಾರ್ಡ್ ಹೊಂದಿರೋರು ಮಾಯವಾಗಿರೋದ್ರಿಂದ ರೇಷನ್ ಕಾರ್ಡ್ ಡೀಲರ್ ಗಳು ಮೋದಿ ವಿರುದ್ಧ ಗರಂ ಆಗಿದಾರೆ.

3) ಪ್ರಾಪರ್ಟಿ ಡೀಲರ್ ಗಳು ಮೋದಿ ವಿರುದ್ದ ರೊಚ್ಚಿಗೆದ್ದಿದಾರೆ, ಕಾರಣ ಒನ್ ಟು ಡಬಲ್ ಮಾಡದಹಾಗೆ ಮೋದಿ ಟೈಟ್ ರೂಲ್ಸ್ ಮಾಡಿದಾರೆ.

4) ಎಲ್ಲ ಇಲಾಖೆ, ಸಾರ್ವಜನಿಕ ಸ್ಥಳಗಳಲ್ಲೂ ಆನಲೈನ್ ಬಳಕೆಯನ್ನ ಮೋದಿ ತಂದಿರೋದ್ರಿಂದ ಮಧ್ಯವರ್ತಿಗಳು I mean Brokers ಮೋದಿ ವಿರುದ್ಧ ಅಸಮಾಧಾನ ಆಗಿದಾರೆ.

5) ಸುಮಾರು ನಲವತ್ತು ಸಾವಿರ(40,000) ಫೇಕ್ NGO ಗಳನ್ನ ಮೋದಿ ಬಂದ್ ಮಾಡ್ಸಿದಾರೆ, ಸೋ ಈ ಫೇಕ್ NGO ಗಳ ಮಾಲೀಕರು ಮೋದಿ ವಿರುದ್ಧ ಗರಂ ಆಗ್ಲೇಬೇಕಲ್ವ?

ಈ NGO ಗಳಲ್ಲಿ ಬಹುತೇಕ NGO ಗಳು ಕ್ರಿಶ್ಚಿಯನ್ ಮಿಷನರಿಗಳದ್ದೂ ಇವೆ, ಮಿಷನರಿಗಳು ತಮ್ಮ ನರಿ ಬುದ್ದಿ ಉಪಯೋಗಿಸಿ ಮೋದಿಯನ್ನ ಕೆಳಗಿಳಿಸೋಕೆ ಪ್ರಯತ್ನಪಡದೇ ಇರುತ್ವಾ?

6) ಆಡಳಿತದಲ್ಲಿ, ನಿಮ್ಮ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನ ಅಳವಡಿಸಿಕೊಳ್ಳಿ ಅಂತ ಮೋದಿ ಹೇಳಿದ್ದಕ್ಕೆ 2 ನಂಬರ್ ದಂಧೆ ಮೂಲಕ ಪ್ರಾಪರ್ಟಿ ಖರೀದಿಸಿರೋ ಖದೀಮರು ಮೋದಿ ವಿರುದ್ಧವಾಗಿದಾರೆ.

7) ಟೆಂಡರ್ ಗಳನ್ನ ತಮಗೆ ಬೇಕಾದವರಿಗೆ ಹಂಚಿ ಹಣ ಪೀಕೋದನ್ನ ಕಡಿವಾಣ ಹಾಕೋಕೆ ಇ-ಟೆಂಡರಿಂಗ್ ಜಾರಿಗೆ ತಂದಿದ್ರಿಂದ ಕೆಲ ಭ್ರಷ್ಟ ಕಾಂಟ್ರಾಕ್ಟರ್ ಗಳು ಮೋದಿಯನ್ನ ವಿರೋಧ ಮಾಡದೆ ಮತ್ತೇನ್ ಮಾಡ್ತಾರೆ?

8) ಗ್ಯಾಸ್ ಕಂಪೆನಿಗಳು ಮೋದಿ ವಿರುದ್ಧ

9) ಸುಮಾರು 12 ಮಿಲಿಯನ್ ಜನ ಟ್ಯಾಕ್ಸ್ ಕಟ್ತಿಲ್ಲ ಅಂತ ಮೋದಿ ಸರ್ಕಾರದ ರಡಾರ್ ಮೇಲೆ ಬಂದಿರೋದ್ರಿಂದ ಅವರೆಲ್ಲಾ ಮೋದಿ ವಿರುದ್ಧವೇ ನಿಲ್ಲೋದ್ ಸಹಜ ಅಲ್ವಾ?

10) GST ಜಾರಿಗೊಳ್ಸಿದ್ರಿಂದ ಟ್ಯಾಕ್ಸ್ ಕಳ್ಳತನ ಮಾಡಿ ಸರ್ಕಾರಕ್ಕೆ ಮೋಸ ಮಾಡಬಹುದು ಅನ್ನೋ ಆಲೋಚನೆನೇ ಕೈಬಿಟ್ಟು ಒಲ್ಲದ ಮನಸ್ಸಿನಿಂದ ಆಟೋಮೇಟಿಕ್ ಟ್ಯಾಕ್ಸ್ ಪೇಮೆಂಟ್ ಮಾಡ್ತಿರೋರು ಮೋದಿ ವಿರುದ್ಧ

11) 2 ನಂಬರ್ ದಂಧೆ ಮಾಡೋರು ಮೋದಿ ವಿರುದ್ಧ

12) ಬ್ಲ್ಯಾಕ್ ಇರೋದನ್ನ ವೈಟ್ ಮಾಡಿಕೊಳ್ಳೋದನ್ನ ತಡೆದಿರೋ ಮೋದಿ ವಿರುದ್ಧ ಕಪ್ಪು ಕುಳುಗಳು ಸಹಜವಾಗಿಯೇ ಆಕ್ರೋಶಗೊಂಡಿರ್ತಾರೆ

13) ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಿದ್ದು ಜನರ ಕಷ್ಟ ಪರಿಹರಿಸಬೇಕು ಅಂತ ಮೋದಿ ಕಟ್ಟಪ್ಪಣೆ ಮಾಡಿರೋದ್ರಿಂದ ಮೈಗಳ್ಳ ಸರ್ಕಾರಿ ಅಧಿಕಾರಿಗಳು ಮೋದಿ ವಿರುದ್ಧ ಕೆಂಡಾಮಂಡಲವಾಗಿದಾರೆ

14) ಕೆಲಸ ಮಾಡೋದ್ ಯಾವನಿಗ್ ಬೇಕ್ರಿ ಗಿಂಬಳ ಬರುತ್ತಲ್ಲ ಅಷ್ಟೇ ಸಾಕು ಅನ್ಮೋರಿಗೆ ಮೋದಿನ್ ಕಂಡ್ರೆ ಉರಿ ಅಲ್ದೆ ಮತ್ತಿನ್ನೇನು?

15) ರಸಗೊಬ್ಬರಕ್ಕೆ ನೀಮ್ ಕೋಟಿಂಗ್ ಮಾಡಿ ಆ ಗೊಬ್ಬರ ಕೃಷಿಗೆ ಬಿಟ್ಟು ಬೇರೆ ಯಾವ ಕೆಲಸಕ್ಕೂ ಉಪಯೋಗಕ್ಕೆ ಬಾರದೆ ಇರೋ ಹಾಗೆ ಮಾಡಿ ರೈತರ ರಸಗೊಬ್ಬರ ಸಮಸ್ಯೆ ನೀಗಿಸಿದ್ದಕ್ಕೆ ರಸಗೊಬ್ಬರ ಹೆಸರಲ್ಲಿ ಲೂಟಿ ಹೊಡೆಯೋದು ನಿಂತು ಹೋಯ್ತಲ್ಲ ಅಂತ ಭ್ರಷ್ಟರು ಮೋದಿ ಮೇಲೆ ಅದೆಷ್ಟು ಉರ್ಕೊಂಡಿರ್ತಾರೋ!!!

ಇವುಗಳು ಕೆಲವೇ ಕೆಲವು ಉದಾಹರಣೆಗಳಷ್ಟೇ, ಇವುಗಳಷ್ಟಕ್ಕೇ ಮೋದಿ ವಿರೋಧಿಗಳು ಇಷ್ಟು ಉರ್ಕೊಂತಿದಾರಂದ್ರೆ ಇನ್ನೂ ಮೋದಿಜೀಯ ಎಲ್ಲಾ ಯೋಜನೆಗಳನ್ನ ತೆಗೆದು ನೋಡದ್ರೆ ಮೋದಿಜೀಗೆ ಅದೆಷ್ಟು ವಿರೋಧಿಗಳು ಹುಟ್ಕೊಂಡಿರಬಹುದು ಅಂತ ಲೆಕ್ಕ ಹಾಕ್ ನೋಡಿ.

ಇಂಥಾ ಸಂದರ್ಭದಲ್ಲಿ ಆ ವ್ಯಕ್ತಿ ಜೊತೆ ನಾವಲ್ದೇ ಮತ್ಯಾರ್ ನಿಲ್ಬೇಕ್ ಹೇಳಿ?

ನಾವು ಅವರ ಜೊತೆ ಇದೀವಿ,‌ ನೀವು?

– Team Nationalist Views
(2018 Copyrights Reserved)

  •  
    1.3K
    Shares
  • 1.3K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com