Connect with us
Loading...
Loading...

ಅಂಕಣ

ಅಯ್ಯಪ್ಪನ ಮಂದಿರಕ್ಕೆ ನುಗ್ಗಲು ಯತ್ನಿಸಿದ ರೆಹಾನಾ ಫಾತೀಮಾಗೆ ತಕ್ಕ ಶಾಸ್ತಿ ಮಾಡಿದ ಅಯ್ಯಪ್ಪ ಸ್ವಾಮಿ; ದೇವರನ್ನ ಎದುರು ಹಾಕಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಮತ್ತೆ ಸಾಬೀತಾಯ್ತು

Published

on

 • 10.7K
 •  
 •  
 •  
 •  
 •  
 •  
 •  
  10.7K
  Shares

ರೆಹಾನಾ ಫಾತಿಮಾ, ನೆನಪಿದೆಯಾ ಈ ಹೆಸರು? ತಾನು ಹುಟ್ಟಿದ ಇಸ್ಲಾಂ‌ ಧರ್ಮಕ್ಕೂ ಒಳ್ಳೆಯ ಹೆಸರು ತರಲಿಲ್ಲ, ಸಮಾಜದಲ್ಲಿ ಈಕೆಯ ಹೆಸರಂತೂ ಕೆಟ್ಟು ಕೆರ ಹಿಡಿದು ಹೋಗಿದೆ. ಇದೇ ರೆಹಾನಾ ಫಾತಿಮಾ ಈ ಹಿಂದೆ ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಷಡ್ಯಂತ್ರ ರೂಪಿಸಿ ಉಗಿಸಿಕೊಂಡಿದ್ದಳು. ಹೌದು ಈ ಹಿಂದೆ ಈಕೆ ಹೆಣ್ಣುಮಕ್ಕಳು ತಾಳಿ ಹಾಕಿಕೊಳ್ಳೋದ್ಯಾಕೆ? ಅದು ದಾಸ್ಯದ ಸಂಕೇತ ಮಣ್ಣು ಮಸಿ ಅಂತ ಹೇಳಿ ಕೊರಳಲ್ಲಿನ ತಾಳಿ ಕಿತ್ತು ಬಿಸಾಕಿ ಎಂಬ ಕ್ಯಾಂಪೇನ್ ಒಂದನ್ನ ನಡೆಸಿದ್ದಳು.

ಇದಾದ ಬಳಿಕ ಮೀಡಿಯಾ ಅಟೆನ್ಶನ್ ಪಡೆಯಲು ಈಕೆ ಆಯೋಜಿಸಿದ್ದ ಮತ್ತೊಂದು ಅಭಿಯಾನವೆಂದರೆ ಅದು ಕಿಸ್ ಆಫ್ ಲವ್, ಬೀದಿ ಬೀದಿಯಲ್ಲಿ ನಿಂತು ಕಂಡ ಕಂಡವರಿಗೆ ಮುತ್ತಿಕ್ಕುವುದು ಈ ಕ್ಯಾಂಪೇನ್ ನ ಭಾಗವಾಗಿತ್ತು. ಇದನ್ನ ಕೇರಳದಲ್ಲಷ್ಟೇ ಅಲ್ಲದೆ ದೇಶಾದ್ಯಂತ ಆಯೋಜನೆಯಾಗುವಂತೆ ಮಾಡಿದ್ದು ಇದೇ ರೆಹಾನಾ ಫಾತಿಮಾ. ‌ಮೂಲತಃ ಕೇರಳವಳಾದ ಈಕೆಯ ಚಾರಿತ್ರ್ಯವೇನೂ ಹೇಳಿಕೊಳ್ಳುವಂತಹದ್ದಲ್ಲ ಅನ್ನೋದನ್ನ ನೀವು ಮೇಲಿನ ಆಕೆಯ ಕೃತ್ಯಗಳಿಂದಲೇ ಅರ್ಥ ಮಾಡಿಕೊಳ್ಳಬಹುದು.

ಮಲಯಾಳಂ ನ ಹಲವು ಚಿತ್ರಗಳಲ್ಲಿ ಈಕೆ ಪೂರ್ಣ ಬೆತ್ತಲೆಯಾಗಿ ಫೋಟೋಶೂಟ್ ಮಾಡಿಕೊಂಡಿದ್ದ ಹಲವಾರು ಫೋಟೋಗಳು ನಿಮಗೆ ಇಂಟರ್ನೆಟ್ ನಲ್ಲಿ ಕಾಣಸಿಗುತ್ತವೆ. ಇಂಥಾ ರೆಹಾನಾ ಫಾತಿಮಾ ತನ್ನ ನೇಮ್,‌ ಫೇಮ್ ಡೌನ್ ಆಗುತ್ತಿದೆ ಏನ್ಮಾಡ್ಲಿ ಅಂತ ಕಾದು ಕುಳಿತಿದ್ದಾಗಲೇ ಈಕೆಗೆ ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ನ ತೀರ್ಪು ನೆನಪಿಗೆ ಬಂದಿತ್ತು. ಈ ವಿವಾದದ ಮೂಲಕ ಕಳೆದು ಹೋಗಿರುವ ಮೀಡಿಯಾ ಅಟೆನ್ಶನ್ ಪಡೆದುಕೊಳ್ಳಲು ರೆಹಾನಾ ಮುಂದಾಗಿದ್ದಳು.

ಇದಕ್ಕೆ ಆಕೆ ಆಯ್ದುಕೊಂಡ ಮಾರ್ಗವೆಂದರೆ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ತೆರಳುವುದಾಗಿತ್ತು‌. ಸುನ್ನಿ ಮುಸ್ಲೀಮಳಾದ ರೆಹಾನಾ ಹಿಂದೂ ದೇವಾಲಯವಾದ ಅಯ್ಯಪ್ಪನ ದೇವಸ್ಥಾನಕ್ಕೆ ಹೋಗುತ್ತೇನೆ ಅಂದಾಗ ಕೇರಳದ ಪೋಲಿಸರೂ ಕೂಡ ಈಕೆಗೆ ಸರಿಸುಮಾರು 300 ಕಮಾಂಡೋ ಹಾಗು ಪೋಲಿಸರ ರಕ್ಷಣೆಯಲ್ಲಿ ಅಯ್ಯಪ್ಪನ ಸನ್ನಿಧಾನಕ್ಕೆ ಕರೆದುಕೊಂಡು ಹೋಗುವ ವಿಫಲ ಯತ್ನಕ್ಕೆ ಕೈ ಹಾಕಿತ್ತು. ‌ಆದರೆ ಈಕೆಯ ಪ್ರಯತ್ನ ಕೈಗೂಡಲಿಲ್ಲ. ಪವಿತ್ರ ಇರುಮುಡಿಯನ್ನ ಹೊತ್ತು ಅಯ್ಯಪ್ಪ ಭಕ್ತರು ಮಂದಿರಕ್ಕೆ ತೆರಳಿದರೆ ಈಕೆ ಇರುಮುಡಿಯಲ್ಲಿ ಸ್ಯಾನಿಟರಿ ನ್ಯಾಪ್ಕೀನ್ ಇಟ್ಟುಕೊಂಡು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ್ದಳು.

ಈಕೆಯ ಪಾಪ ಈಗ ಈಕೆಗೆ ಮುಳುವಾಗಿ ಕಾಡುತ್ತಿದೆ. ಅಯ್ಯಪ್ಪ ಸ್ವಾಮಿ ತನ್ನ ಲೀಲೆಯನ್ನ ತೋರಿಸಿದ್ದಾನೆ ನೋಡಿ. ಅಕ್ಟೋಬರ್‌ 22 ರಂದು ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಈಕೆಯ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತ ರೆಹಾನಾ ಫಾತಿಮಾಳನನ್ನ ಕೊಚ್ಚಿಯ ರವೀಂದ್ರಪುರಂ ಶಾಖೆಗೆ ಎತ್ತಂಗಡಿ ಮಾಡಿದೆ. ಇದಷ್ಟೇ ಅಲ್ಲದೆ internal inquiry ಬಳಿಕ ಈಕೆಯ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿವುದು ಎಂದು BSNL ಮೂಲಗಳು ತಿಳಿಸಿವೆ.‌ ಸುದ್ದಿ ಮೂಲಗಳ ಪ್ರಕಾರ ಈಕೆ ಸದ್ಯ ಟ್ರಾನ್ಸಫರ್ ಆಗಿದ್ದು ಈಕೆ ನೇರವಾಗಿ ಯಾರನ್ನೂ ಭೇಟಿಯಾಗದ ಹಾಗು ಮಾತನಾಡದ ಡಿಪಾರ್ಟ್ಮೆಂಟ್ ವೊಂದಕ್ಕೆ ಈಕೆಯನ್ನ ಎತ್ತಂಗಡಿ ಮಾಡಲಾಗಿದೆ.

ಈಕೆ ಈ ಹಿಂದೆ BSNL ನ ಕೊಚ್ಚಿಯ ಬೋಟ್ ಜೆಟ್ಟಿ ಶಾಖೆಯಲ್ಲಿ ಟೆಲಿಫೋನ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆಯನ್ನು BSNL ಎತ್ತಂಗಡಿ ಮಾಡಿ ಶಿಸ್ತುಕ್ರಮ ಜರುಗಿಸಿದ ಬಳಿಕ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಬರೆದುಕೊಂಡಿರುವ ರೆಹಾನಾ “ನಾನು ಈ ಆರ್ಡರ್ ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ, ಈಗ ಅಯ್ಯಪ್ಪನ ಆಶೀರ್ವಾದದ ಫಲದಿಂದ ಸಡನ್ ಆಗಿ ನನಗೆ ಈ ಆರ್ಡರ್ ಸಿಕ್ಕಿದೆ” ಎಂದಿದ್ದಾಳೆ. ಒಳಗೆ ದುಃಖ ಮಡುಗಟ್ಟಿದ್ದರೂ ಅದರಲ್ಲೂ ಪ್ರಚಾರ ಪಡೆಯುವ ದುರುದ್ದೇಶ ಎಂಥದ್ದಿರಬಹುದು ನೋಡಿ.

ಅಯ್ಯಪ್ಪನ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದ ಈಕೆಯನ್ನ ಇತ್ತೀಚೆಗಷ್ಟೇ ಕೇರಳದ ಮುಸ್ಲಿಂ ಜಮಾತ್ ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ ಹಾಕದ್ದರು. ಶನಿವಾರದಂದು ಈಕೆಯನ್ನ ಮುಸ್ಲಿಂ ಸಮಾಜದಿಂದ ಹೊರ ಹಾಕಿದ್ದ ಮುಸ್ಲಿಂ ಜಮಾತ್ “ಈಕೆ ಲಕ್ಷಾಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾಳೆ” ಎಂದು ಈಕೆಗೆ ಬಹಿಷ್ಕಾರ ಹಾಕಿದ್ದರು. ಇದಾದ ಬಳಿಕ ರವಿವಾರದಂದು ಫೇಸ್ಬುಕ್ ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳನ್ನ ಬರೆದಿದ್ದಾಳೆಂದಯ ಈಕೆಯ ವಿರುದ್ಧ ಕೇರಳ ಪೋಲಿಸರು ಕೇಸ್ ದಾಖಲಿಸಿಕೊಂಡಿದ್ದರು.

ಈಕೆ ಶಬರಿಮಲೈ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ್ದಾಳೆಂದು ತಿಳಿಯುತ್ತಲೇ ಕೇರಳದ ಹಿಂದುಗಳು ಶುಕ್ರವಾರದಂದು ಈಕೆಯ ಮನೆಯನ್ನೇ ಧ್ವಂಸಗೊಳಿಸುತ್ತ ಒಬ್ಬ ಹಿಂದೂಯೇತರ ಮಹಿಳೆ ಅದ್ ಹೇಗೆ ಹಿಂದೂ ದೇವಸ್ಥಾನಕ್ಕೆ ನುಗ್ಗಿ ನಮ್ಮ ಭಾವನೆಗಳಿಗೆ ಧಕ್ಕೆ ತರ್ತಾಳೆ ಅಂತ ಈಕೆಯ ಮನೆಯನ್ನ ಪುಡಿ ಪುಡಿ ಮಾಡಿದ್ದರು‌. ರೆಹಾನಾ ಫಾತಿಮಾ ಅಯ್ಯಪ್ಪ ಮಾಲೆ ಧರಿಸಿ ಪವಿತ್ರ ಇರುಮುಡಿಯಲ್ಲಿ ಸ್ಯಾನಿಟರಿ ಪ್ಯಾಡ್ ಇಟ್ಟುಕೊಂಡು ಹೈದ್ರಾಬಾದ್ ಮೂಲದ ಪತ್ರಕರ್ತೆ ಕನ್ಸರ್ಟೆಡ್ ಕ್ರಿಶ್ಚಿಯನ್ ಕವಿತಾ ಜಕ್ಕಲ್ ಜೊತೆಗೆ ದೇವಸ್ಥಾನವನ್ನ ನುಗ್ಗೋಕೆ ಯತ್ನಿಸಿದ್ದಳು.

ಅಯ್ಯಪ್ಪನ ಸನ್ನಿಧಾನವನ್ನ ಅಪವಿತ್ರಗೊಳಿಸಲು ಹೊರಟಿದ್ದ ಈಕೆಗೆ ಅಯ್ಯಪ್ಪನೇ ತಕ್ಕ ಶಾಸ್ತಿ ಮಾಡಿದ್ದು, ಮನೆ ಧ್ವಂಸವಾಯ್ತು, ಕೆಲಸದಿಂದ ಎತ್ತಂಗಡಿ ಮಾಡಲಾಯ್ತು,‌ ಮುಸ್ಲಿಂ ಸಮುದಾಯದಿಂದ ಬಹಿಷ್ಕಾರವಾಯ್ತು ಹಾಗು ಅದರ ಜೊತೆ ಜೊತೆಗೆ ಪೋಲಿಸ್ ಕೇಸ್ ಕೂಡ ದಾಖಲಾಗಿದ್ದು ನೇಮ್ ಫೇಮ್ ಅಂತ ಹೊರಟಿದ್ದ ಈ ರೆಹಾನಾ ಫಾತಿಮಾ ಗೆ ತಕ್ಕ ಶಾಸ್ತಿಯೇ ಆಗಿದೆ. ಹುಲು ಮಾನವರನ್ನ ಎದುರು ಹಾಕಿಕೊಂಡು ಬದುಕ ಬಹುದು ಆದರೆ ದೇವರನ್ನ ಎದುರು ಹಾಕಿಕೊಂಡರೆ ಅದೂ ಅಯ್ಯಪ್ಪನನ್ನ ಎದುರು ಹಾಕಿಕೊಂಡರೆ ಇದೇ ಗತಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ನೋಡಿ.

ಸ್ವಾಮಿಯೇ ಶರಣಂ ಅಯ್ಯಪ್ಪ 🙏🚩

– Team Nationalist Views

Nationalist Views ©2018 Copyrights Reserved

 •  
  10.7K
  Shares
 • 10.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com