Connect with us
Loading...
Loading...

ಪ್ರಚಲಿತ

ಇವರು ನಮ್ಮನಗಲಿ‌ ಇಂದಿಗೆ ಎರಡು ವರ್ಷ!! ಇವರ ಬಗ್ಗೆ ನಿಮಗೆ ನೆನಪಿದೆಯಾ?

Published

on

 • 6
 •  
 •  
 •  
 •  
 •  
 •  
 •  
  6
  Shares

ಅದು ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್. ಮೈ ಕೊರೆಯುವ ಮೈನಸ್ ಡಗ್ರಿಯಲ್ಲಿನ ಚಳಿ, ಅಂತಹ ಪ್ರತಿಕೂಲ ವಾತಾವರಣದಲ್ಲಿ ನಮ್ಮ ಸೈನಿಕರು ದೇಶವನ್ನ‌ ಕಾಯಲು ಸಿಯಾಚಿನ್ ನಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮ ರಕ್ಷಣೆ ಮಾಡಲು ನಿರತರಾಗಿರುತ್ತಾರೆ.

ಅದು 2016 ರ ಫೆಬ್ರುವರಿ 5 ನೇ ತಾರೀಖು, ಸಿಯಾಚಿನ್ ನಂತಹ ಹಿಮನರಕದಲ್ಲಿ ಹಿಮಪಾತವಾಗಿಬಿಟ್ಟಿತ್ತು. ಭಾರತೀಯ ಯೋಧರು ದೇಶ ಕಾಯುವಲ್ಲಿ ನಿರತರಾಗಿದ್ದರೆ ಜವರಾಯ ಮಾತ್ರ ಭಾರತೀಯ ಸೈನಿಕರ ಮಗ್ಗುಲಿಗೆ ಬಂದು ನಿಂತು ಬಿಟ್ಟಿದ್ದ.

ಸಿಯಾಚಿನ್ ನಲ್ಲಿ ಹಿಮಪಾತ ಆರಂಭವಾಗಿಬಿಟ್ಟಿತ್ತು. ನೋಡ ನೋಡುತ್ತಿದ್ದಂತೆಯೇ ದೇಶ ಕಾಯುತ್ತಿದ್ದ ವೀರ ಯೋಧರ ಮೇಲೆ ಶತ್ರುಗಳ ಗುಂಡಿನ ಸುರಿಮಳೆಯಲ್ಲ ಜವರಾಯನಿಂದ ಹಿಮಪಾತದ ಸುರಿಮಳೆ ಆರಂಭವಾಗಿತ್ತು.

ಕೆಲವು ಸೈನಿಕರು ಪಾರಾದರು ಆದರೆ ಹಲವರು ಹಿಮಪಾತದಲ್ಲಿ ಸಿಲುಕಿಕೊಂಡರು. ಅದರಲ್ಲಿ ಒಬ್ಬ ವೀರ ಯೋಧ ನಮ್ಮ ನಾಡಿನ ಧಾರವಾಡ ಜಿಲ್ಲೆಯ ಬೆಟದೂರಿನ ಹುಲಿ ಹನುಮಂತಪ್ಪ ಕೊಪ್ಪದ್ ಕೂಡ ಒಬ್ಬರಾಗಿದ್ದರು.

ಬರೋಬ್ಬರಿ 35 ಅಡಿಯಷ್ಟು ಹಿಮದ ಕೆಳಗೆ ಆರು ದಿನಗಳ ಕಾಲ ಸೆಣಸಾಡಿ ಜೀವ ಉಳಿಸಿಕೊಂಡಿದ್ದ ಧಾರವಾಡ ಮೂಲದ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ರನ್ನ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು.

ಪವಾಡ ಸದೃಶದಂತೆ 6 ದಿನಗಳ ಕಾಲ ಹಿಮದಡಿ ಸಿಲುಕಿದ್ದರೂ ಬದುಕಿ ಬಂದಿದ್ದ ವೀರನನ್ನ ಕಂಡು ಇಡೀ ದೇಶವೇ ಚಕಿತಗೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನುಮಂತಪ್ಪ ಕೊಪ್ಪದ್ ರವರು ಸುರಕ್ಷಿತವಾಗಿ ಬದಕುಳಿದು ಬರಲಿ ಎಂದು ದೇಶದ ಜನತೆ ಪೂಜೆ ಪುನಸ್ಕಾರ ಹರಕೆಯಂತೆಲ್ಲಾ ಮಾಡಿದರು. ಪ್ರಧಾನಿ ಮೋದಿ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಹನುಮಂತಪ್ಪ ಕೊಪ್ಪದರ ಆರೋಗ್ಯದ ಬಗ್ಗೆ ವಿಚಾರಿಸಿ ಬಂದಿದ್ದರು.

ಈ ವೀರ ಯೋಧ ಬದುಕುಳಿಯುವಬೇಕು, ಎಷ್ಟೇ ಖರ್ಚಾಗಲಿ, ಯಾವ ಆಧುನಿಕ ಟೆಕ್ನಾಲಾಜಿಯನ್ನಾದರೂ ಬಳಸಿ ಆದರೆ ಯೋಧ ಮಾತ್ರ ಗುಣಮುಖರಾಗಿ ಬರಬೇಕು ಅಂತ ಪ್ರಧಾನಿ ಮೋದಿ ವೈದ್ಯರಿಗೆ ಸೂಚಿಸಿದ್ದರು.

ಆದರೆ ಭಗವಂತನ ಇಚ್ಛೆ ಬೇರೆಯದ್ದೇ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 11.45ಕ್ಕೆ ಹನುಮಂತಪ್ಪ ಕೊಪ್ಪದ್ ವಿಧಿವಶರಾದರು. ಆರು ದಿನಗಳ ಕಾಲ ಹಿಮದಡಿಯಲ್ಲಿ ಸಿಲುಕಿದ್ದ ಕೊಪ್ಪದ್ ರವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ್ದು, ತೀವ್ರ ಕೋಮಾಸ್ಥಿತಿಗೆ ಜಾರಿದ್ದರು.

ಮದ್ರಾಸ್ ರೆಜಿಮೆಂಟಿನಲ್ಲಿ ಯೋಧನಾಗಿದ್ದ ಕೊಪ್ಪದ್ ವಿಧಿವಶರಾಗಿರುವುದಾಗಿ ಆರ್ ಆರ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದಾಗ ಇಡೀ ದೇಶವೇ ಕಂಬನಿ‌ ಮಿಡಿದಿತ್ತು. ಹನುಮಂತಪ್ಪ ಕೊಪ್ಪದರ ಕುಟುಂಬವಂತೂ ಶೋಕ ಸಾಗರದಲ್ಲಿ ಮುಳುಗಿಬಿಟ್ಟಿತು.

ಆರು ದಿನಗಳ ಕಾಲ ಹಿಮದಡಿಯಲ್ಲಿ ಸಿಲುಕಿಯೂ ಬದುಕಿ ಬಂದ ನನ್ನ ಮಗ ಅಂತ ಕೊಪ್ಪದರವರ ತಾಯಿ ಸಂತಸಗೊಂಡಿದ್ದರು ಆದರೆ ಆ ಖುಷಿ ಬಹಳ ಹೊತ್ತು ಉಳಿಯಲಿಲ್ಲ.

ಹನುಮಂತಪ್ಪ ಕೊಪ್ಪದ್ ಆರೋಗ್ಯದ ಚೇತರಿಕೆಗಾಗಿ ದೇಶಾದ್ಯಂತ ಪ್ರಾರ್ಥನೆ, ಪೂಜೆ, ಹವನ ನಡೆಯುತ್ತಿದ್ದವು. ಆದರೆ ಕೊಪ್ಪದ್ ಬಹುಅಂಗಾಂಗ ವೈಫಲ್ಯದಿಂದ ಆರೋಗ್ಯ ತುಂಬಾ ಕ್ಷೀಣಿಸಿದ್ದು ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದರು. ಸುಮಾರು 3 ದಿನಗಳ ಕಾಲ ಕೊಪ್ಪದ್ ಕೋಮಾ ಸ್ಥಿತಿಯಲ್ಲೇ ಇದ್ದರು.

ಡಯಾಲಿಸಿಸ್ ಮಾಡಿದರೂ ಕೂಡಾ ಎರಡೂ ಕಿಡ್ನಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಯೋಧ ಹನುಮಂತಪ್ಪ ತೀವ್ರ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಆಗ ಹನುಮಂತಪ್ಪ ಜೀವರಕ್ಷಕ ಸಾಧನಗಳ ನೆರವಿನಲ್ಲಿ ಉಸಿರಾಡುತ್ತಿರುವುದಾಗಿ ಆರ್ ಆರ್ ಆಸ್ಪತ್ರೆ ಬಿಡುಗಡೆ ಮಾಡಿರುವ ಮೆಡಿಕಲ್ ಬುಲೆಟಿನ್ ನಲ್ಲಿ ತಿಳಿಸಲಾಗಿತ್ತು.

ಕೊನೆಗೂ ಹನುಮಂತಪ್ಪ ಕೊಪ್ಪದ್ ನಮ್ಮನ್ನೆಲ್ಲಾ ಅಗಲಿ ಸ್ವರ್ಗಾಧೀನರಾಗಿಬಿಟ್ಟಿದ್ದರು.

2016 ರ ಫೆಬ್ರುವರಿ 11 ರ ರಾತ್ರಿ 9.30ಕ್ಕೆ ಹುಬ್ಬಳ್ಳಿಗೆ ಪಾರ್ಥಿವ ಶರೀರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರ ತಲುಪಿತ್ತು.

ಸಂಜೆ 7 ಗಂಟೆಗೆ ದೆಹಲಿಯಿಂದ ಸೇನಾ ವಿಮಾನದಲ್ಲಿ ಪಾಲಂ ಟೆಕ್ನಿಕಲ್ ಏರ್ ಪೋರ್ಟ್ ನಿಂದ ಕೊಪ್ಪದ್ ಮನೆಯವರು, ಸೇನಾ ಅಧಿಕಾರಿಗಳು ನಿರ್ಗಮಿಸಿದ್ದರು.

ದೆಹಲಿಯಿಂದ ಹೊರಟು ರಾತ್ರಿ 9.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿmತ್ತು. ಹನುಮಂತಪ್ಪ ಕೊಪ್ಪದ್ ರವರ ಹುಟ್ಟೂರು ಬೆಟದೂರು ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.

ಧಾರವಾಡ ಜಿಲ್ಲೆ ಕುಂದಗೋಳದ ಬೆಟದೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿ ಹುಟ್ಟೂರಿನಲ್ಲೇ ಹುತಾತ್ಮ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆ ನಡೆಸಲಾಗಿತ್ತು.

ಇಂದಿಗೆ ಆ ವೀರ ಯೋಧ ನಮ್ಮನ್ನಗಲಿ ಬರೋಬ್ಬರಿ ಎರಡು ವರ್ಷಗಳು ಕಳೆದಿವೆ. ಕುಟುಂಬದ ಆತ್ಮಸ್ಥೈರ್ಯ ಇನ್ನೂ ಕುಂದಿಲ್ಲ. ಕೊಪ್ಪದ್ ರವರ ಮಗಳು ಇನ್ನೂ ಚಿಕ್ಕ ಮಗು, ಆ ಮಗುವನ್ನೂ ಸೇನೆಗೇ ಸೇರಿಸುತ್ತೇನೆ ಅಂತ ಕೊಪ್ಪದ್ ರವರ ಪತ್ನಿ ಹೇಳಿದಾಗ ಕಣ್ಣಂಚಿನಿಂದ ನೀರು ನಮಗೆ ಗೊತ್ತಿರದ ಹಾಗೆಯೇ ಜಿನುಗಿದ್ದಂತೂ ಸುಳ್ಳಲ್ಲ.

ಆ ವೀರ ಯೋಧ ಮತ್ತೆ ಹುಟ್ಟಿ ಬರಲಿ!!

– Team Nationalist Views

©2018 Copyrights Reserved

 •  
  6
  Shares
 • 6
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com