Connect with us
Loading...
Loading...

ಪ್ರಚಲಿತ

ಶ್ರೀಲಂಕಾದ ಪಂಚತಾರಾ ಹೋಟೆಲ್ ನಲ್ಲಿ ಭಾರೀ ಬಾಂಬ್ ಸ್ಪೋಟ; 129 ಸಾವು; ಕಾರಣ ತಿಳಿದರೆ ಬೆಚ್ಚಿ ಬೀಳುವಿರಿ

Published

on

 •  
 •  
 •  
 •  
 •  
 •  
 •  
 •  

ಶ್ರೀಲಂಕಾದ ಕೊಲಂಬೋ ನಲ್ಲಿ ಈಸ್ಟರ್ ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸೀರಿಯಲ್ ಬಾಂಬ್ ಬ್ಲ್ಯಾಸ್ಟ್ ಆದ ಕಾರಣ 129 ಜನ ಮೃತರಾಗಿದ್ದು 300 ಕ್ಕೂ ಅಧಿಕ ಜನ ಗಂಭೀರ ಗಾಯಾಳುಗಳಾಗಿದ್ದಾರೆ.

ಶ್ರೀಲಂಕಾದ ಕೊಲಂಬೋ ನಗರದಲ್ಲಿನ ಮೂರು ಚರ್ಚ್ ಹಾಗು 3 ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಸೀರಿಯಲ್ ಬಾಂಬ್ ಬ್ಲ್ಯಾಸ್ಟ್ ನಡೆದಿದ್ದು ನೂರಾರು ಜನ‌ ಅಸುನೀಗಿದ್ದು ಮುನ್ನೂರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಕೊಲಂಬೋದ ಸೇಂಟ್ ಆ್ಯಂಥೋನಿ ಚರ್ಚ್, ನೌಗೊಂಬೋ ನಲ್ಲಿನ ಸೇಂಟ್ ಸೆಬಾಸ್ಟಿಯನ್ ಚರ್ಚ್ ಹಾಗು ಬಟ್ಟಿಕಲೋಬಾ ದಲ್ಲಿನ ಮತ್ತೊಂದು ಚರ್ಚ್ ಗಳನ್ನ ಭಯೋತ್ಪಾದಕರು ಟಾರ್ಗೇಟ್ ಮಾಡಿದ್ದಾರೆ. ಇದರ ಹೊರತಾಗಿ ಕೊಲಂಬೋದ ಹೋಟೆಲ್ ಶಾಂಗ್ರೀಲಾ, ಸಿನಮೋನ್ ಗ್ರ್ಯಾಂಡ್ ಹಾಗು ಔರರ್ ಕಿಂಗ್ಸ್‌ಬರಿ ನಲ್ಲೂ ಕೂಡ ಬಾಂಬ್ ಸ್ಪೋಟಗಳಾಗಿವೆ.

ಈವರೆಗು ಕೊಲಂಬೋದಲ್ಲಿ 40, ನೌಗೊಂಬೋ ನಲ್ಲಿ 62 ಹಾಗು ಬಟ್ಟಿಕಲೋಬಾ ನಲ್ಲಿ 27 ಜನ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಭದ್ರತಾ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡುತ್ತ ಈ ದಾಳಿ ಭಯೋತ್ಪಾದಕ ಆತ್ಮಾಹುತಿ ದಾಳಿಯಾಗಿದ್ದು ದಾಳಿಕೋರರು ಚರ್ಚ್‌ನ್ನ ಟಾರ್ಗೇಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಈ ದಾಳಿಯ ಬಳಿಕ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.

ಶ್ರೀಲಂಕಾ ಪ್ರಧಾನೊ ರನಿಲ್ ವಿಕ್ರಮಸಿಂಘೆ ಶ್ರೀಲಂಕಾದಲ್ಲಿ ನಡೆದಿರುವ ಸೀರಿಯಲ್ ಬ್ಲ್ಯಾಸ್ಟ್ ಘಟನೆಯ ಬಳಿಕ ತುರ್ತು ಸಭೆಯನ್ನ ಕರೆದಿದ್ದಾರೆ. ಶ್ರೀಲಂಕಾದ ಎಕಾನಾಮಿಕ್ ರಿಫಾರ್ಮ್ಸ್ ಆ್ಯಂಡ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಮಿನಿಸ್ಟರ್ ಹರ್ಷಾ ಡಿಸಿಲ್ವಾ ಘಟನೆಯ ಗಂಭೀರತೆಯ ಬಗ್ಗೆ ತಿಳಿಸಿದ್ದಾರೆ. ರಕ್ಷಣಾ ಬಲಗಳು ಸದ್ಯ ಘಟನಾ ಸ್ಥಳವನ್ನ ಘೇರಾವ್ ಹಾಕಿದ್ದು ತನಿಖೆ ನಡೆಸುತ್ತಿವೆ.

ಶ್ರೀಲಂಕಾ ದಲ್ಲಿ ನಡೆದಿರುವ ಈ ಭಯೋತ್ಪಾದನಾ ದಾಳಿಯ ಬಗ್ಗೆ ಸೋಶಿಯಲ್ ಮೀಡಿಯಾನಲ್ಲಿ ಹಲವರು ತಮ್ಮ ಪ್ರತಿಕ್ರಿಯೆ ನೀಡುತ್ತ ಇದು ನ್ಯೂಜಿಲೆಂಡ್ ನಲ್ಲಿ ನಡೆದ ದಾಳಿಯ ಪ್ರತೀಕಾರ ಎಂದು ಹೇಳುತ್ತಿದ್ದಾರೆ. ಶ್ರೀಲಂಕಾದ ರಾಷ್ಟ್ರಪತಿ ಮೈತ್ರಿಪಾಲಾ ಸಿರಿಸೇನಾ ದೇಶದ ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಷ್ಟ್ರಪತಿಯವರು ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸುವಂತೆ ಹಾಗು ಭಯೋತ್ಪಾದಕರನ್ನ ಹೆಕ್ಕಿ ತೆಗೆಯಲು ಆದೇಶ ನೀಡಿದ್ದಾರೆ. ಭಾರತೀಯ ರಾಯಭಾರಿ ಕಛೇರಿಯ ವತಿಯಿಂದ ನಾಗರಿಕರಿಗಾಗಿ +94777902082 +94772234176 ಹೆಲ್ಪಲೈನ್ ನಂಬರ್ ಗಳನ್ನ ಜಾರಿಗೊಳಿಸಲಾಗಿದೆ

– Team Nationalist Views

 •  
 •  
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com