Connect with us
Loading...
Loading...

ಪ್ರಚಲಿತ

Shocking: “ಎನ್ಕೌಂಟರ್ ಮೂಲಕ ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ‌”, ಹಿಂದೂ ಹೃದಯ ಸಾಮ್ರಾಟ್ ಪ್ರವೀಣ್ ಭಾಯ್ ತೊಗಾಡಿಯಾ!!

Published

on

  • 1
  •  
  •  
  •  
  •  
  •  
  •  
  •  
    1
    Share

ಕಟ್ಟರ್ ಹಿಂದೂವಾದಿ, ಹಿಂದೂ ಹೃದಯ ಸಾಮ್ರಾಟ್ ಎಂದೇ ಹಿಂದುಗಳ ಹೃದಯದಲ್ಲಿ ಹೆಸರಾಗಿರುವವರು ಪ್ರವೀಣ್ ಭಾಯ್ ತೊಗಾಡಿಯಾ. ತನ್ನೆಲ್ಲಾ ಸ್ವಾರ್ಥಗಳನ್ನು ಬದಿಗೊತ್ತಿ ಹಿಂದೂ ಧರ್ಮದ ಕಾರ್ಯಕ್ಕೆ ಧುಮುಕಿದವರು ಪ್ರವೀಣ್ ಭಾಯ್ ತೊಗಾಡಿಯಾ.

ಭಾರತದ ಪ್ರಸಿದ್ದ 10 ಶಸ್ತ್ರ ಚಿಕಿತ್ಸೆಯ( Surgeon) ಡಾಕ್ಟರ್ ಗಳಲ್ಲಿ ಪ್ರವೀಣ್ ಭಾಯ್ ತೊಗೊಡಿಯಾ ಒಬ್ಬರು. ಪ್ರಸಿದ್ಧ surgeon ಆಗಿರುವ ಇವರು ಅದನ್ನೆಲ್ಲಾ ಬದಿಗೊತ್ತಿ ಹಿಂದೂ ಧರ್ಮದ ಕಾರ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.

ಹಿಂದೂವಾದಿ ಎಂದಾಕ್ಷಣ ಅವರ ಮೇಲೆ ಅನೇಕರ ಕಣ್ಣು ಬಿದ್ದಿರುತ್ತದೆ. ಅದರಂತೆ ಪ್ರವೀಣ್ ಭಾಯ್ ತೊಗಾಡಿಯಾ ಅವರ ಮೇಲೆಯೂ ಅನೇಕರ ಕೆಂಗಣ್ಣು ಬಿದ್ದಿತ್ತು. ಏನಾದರೂ ಇರಲಿ ಹಿಂದೂತ್ವವಾದಿಗಳ ಮೇಲೆ ಅದೇಕೋ ಏನೋ ತುಂಬಾ ಜನರ ಕಣ್ಣಂತು ಬಿದ್ದಿರುತ್ತದೆ.

ನಿನ್ನೆ ಬೆಳಿಗ್ಗೆ ಹಿಂದೂ ಸಮಾಜಕ್ಕೆ ಆಘಾತವನ್ನುಂಟು ಮಾಡುವ ಘಟನೆ ನಡೆದಿತ್ತು. ಅದೇನು ಗೊತ್ತಾ? ವಿಶ್ವ ಹಿಂದೂ ಪರಿಷತ್ತಿನ ಪ್ರವೀಣ್ ಬಾಯ್ ತೊಗಾಡಿಯಾ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ. ಇಡೀ ಹಿಂದೂ ಸಮಾಜ ಬೆಚ್ಚಿಬಿದ್ದಿತ್ತು. ಅದೆಷ್ಟೇ ಹುಡುಕಿದರೂ ಪ್ರವೀಣ್ ಭಾಯ್ ತೊಗಾಡಿಯಾ ಅವರ ಸುಳಿವೇ ಸಿಕ್ಕಿರಲಿಲ್ಲ.

ತತಕ್ಷಣ ಕಾರ್ಯಪ್ರವೃತ್ತರಾದ ಪೋಲಿಸರು 4 ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಿದ್ದರು. ಉಗ್ರರ ಬೆದರಿಕೆ ಎದುರಿಸುತ್ತಿರುವ ಪ್ರವೀಣ್ ಬಾಯ್ ತೊಗಾಡಿಯಾ ಉಗ್ರರ ಕೈಚಳಕ ಏನಾದರೂ ಕೆಲಸ ಮಾಡಿದೆಯಾ ಎನ್ನುವ ಪ್ರಶ್ನೆ ಮೂಡಿತ್ತು. 4 ತಂಡಗಳನ್ನು ರಚಿಸಿದ ಪೋಲಿಸರು ಹುಡುಕಾಟ ನಡೆಸಿ ರಾತ್ರಿಯ ಹೊತ್ತಿಗೆ ಹಿಂದೂ ಹೃದಯ ಸಾಮ್ರಾಟ್ ಪ್ರವೀಣ್ ಭಾಯದ ತೊಗಾಡಿಯಾ ಅವರನ್ನು ಪತ್ತೆ ಹಚ್ಚಿದ್ದರು. ಆದರೆ ಪ್ರವೀಣ್ ಭಾಯ್ ತೊಗಾಡಿಯಾ ಅವರು ಪ್ರಜ್ನಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇನ್ನೂ ಪ್ರಜ್ನೆ ಬಾರದ ಸ್ಥಿತಿಯಲ್ಲಿರುವ ತೊಗಾಡಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಜ್ಞೆ ಬಂದ ಬಳಿಕ ಪ್ರವೀಣ್ ತೊಗಾಡಿಯಾ ಆಸ್ಪತ್ರೆಯಲ್ಲಿಯೇ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಅದೇನು ಗೊತ್ತಾ?

ನನ್ನ ಸದ್ದಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ನನ್ನನ್ನು ಟಾರ್ಗೆಟ್ ಮಾಡಿ, ಕೊಲ್ಲಲು ಯತ್ನಿಸಿದ್ದರು. ನನ್ನ ಹತ್ಯೆ ಮಾಡಲು ಒಳಸಂಚು ನಡೆಸಿದಿದೆ ಎಂದು ಪ್ರವೀಣ್ ತೊಗಾಡಿಯಾ ಹೇಳಿ ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಇದರಿಂದ ಹಿಂದೂ ಕಾರ್ಯಕರ್ತರು ಬೆಚ್ಚಿಬಿದ್ದಿದ್ದಾರೆ.

ಅಷ್ಟಕ್ಕೂ ಆ ಸಿದ್ದಿಗೋಷ್ಠಿಯಲ್ಲಿ ಪ್ರವೀಣ್ ಭಾಯ್ ತೊಗಾಡಿಯಾ ಅವರು ಹೇಳಿದ್ದೇನು ಗೊತ್ತಾ?

ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಆ ಸುಳ್ಳು ಪ್ರಕರಣಗಳ ಮೂಲಕ ಎನ್ಕೌಂಟರ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸುಮಾರು 8-10 ವರ್ಷಗಳ ಹಿಂದಿನ ಪ್ರಕರಣಕ್ಕೆ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ರಾಜಸ್ಥಾನದ ಪೋಲಿಸರು ನನ್ನನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರವೀಣ್ ಭಾಯ್ ತೊಗೊಡಿಯಾ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಇದನ್ನೆಲ್ಲಾ ಗಮನಿಸಿದರೆ ಹಿಂದೂ ಕಾರ್ಯಕರ್ತರಿಗೆ ತಾನು ಹಿಂದೂವಾಗಿ ಹುಟ್ಟಿದ್ದೇ ತಪ್ಪಾ ಎಂದೆನಿಸದೇ ಇರೋದಿಲ್ಲ. ಮೊದಲೇ ಹಿಂದೂವಾದಿಗಳ ಮೇಲೆ ಉಗ್ರರ ಕಣ್ಣಿರುತ್ತದೆ. ಈಗ ಪ್ರವೀಣ್ ಭಾಯ್ ತೊಗಾಡಿಯಾ ಅವರು ಆರೋಪ ಮಾಡಿದ್ದನ್ನ ಗಮನಿಸಿದರೆ, ಪೋಲಿಸರ ಕಣ್ಣೂ ಬಿದ್ದಿದೆ ಅಂತ ಅನಿಸುತ್ತದೆ.

  •  
    1
    Share
  • 1
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com