Connect with us
Loading...
Loading...

ಅಂಕಣ

ಬಿಗ್ ಬ್ರೇಕಿಂಗ್: ಹರಿಯಾಣಾದ ಮಸ್ಜಿದ್ ಅಷ್ಟೇ ಅಲ್ಲ ದೇಶದ ಹಲವಾರು ಮಸ್ಜಿದ್ ಗಳ ಬಗ್ಗೆ ಸ್ಪೋಟಕ ಮಾಹಿತಿ ಹೊರಗೆಡವಿದ NIA; ಅದೇನಂತ ಗೊತ್ತಾದರೆ ನೀವು ಬೆಚ್ಚಿ ಬೀಳ್ತೀರ

Published

on

 • 2.2K
 •  
 •  
 •  
 •  
 •  
 •  
 •  
  2.2K
  Shares

ಕಳೆದ ವಾರವಷ್ಟೇ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯು ಭಾರತದಲ್ಲಿನ ಹರಿಯಾಣಾ ರಾಜ್ಯದ ಪಲವಲ್ ನ ಮಸೀದಿ ನಿರ್ಮಾಣ ಕಾರ್ಯದಲ್ಲಿ ಫಂಡಿಂಗ್ ಮಾಡಲಾಗಿದೆ ಎಂಬ ಆಘಾತಕಾರಿ ವಿಷಯವನ್ನ ರಾಷ್ಟ್ರೀಯ ತನಿಖಾದಳ ಸಂಸ್ಥೆ NIA ಬಯಲು ಮಾಡಿತ್ತು. ಇದೀಗ NIA ದೇಶದ ಮೂಲೆ ಮೂಲೆಗಳಲ್ಲಿರುವ ಮಸ್ಜಿದ್ ಗಳ ಹಾಗು ಭಯೋತ್ಪಾದಕ ಸಂಘಟನೆಯ ಕನೆಕ್ಷನ್ ಇರುವುದರ ಕುರಿತು ತನಿಖೆ ನಡೆಸಲು ಮುಂದಾಗಿದೆ.

ರಾಷ್ಟ್ರೀಯ ತನಿಖಾ ದಳ ಹಾಗು ದೇಶದ ಗುಪ್ತಚರ ಇಲಾಖೆಯ ಅನುಮಾನದ ಪ್ರಕಾರ ದೇಶದ ಹಲವು ಭಾಗಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮೂಲಕ ದೇಶದೊಳಗಡೆ ಉಪಯೋಗಿಸಿ ಮಸೀದಿಗಳ ಮೂಲಕ ನೆಟವರ್ಕ್ ಒಂದನ್ನ ಕ್ರಿಯೇಟ್ ಮಾಡಲು ಭಾರೀ ಸಂಚು ನಡೆಸಲಾಗುತ್ತಿದೆ. ಹರಿಯಾಣಾದ ಪಲವಲ್ ನ ಮಸ್ಜಿದ್ ನಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ, ಪಾಕಿಸ್ತಾನದ ಭಯೋತ್ಪಾದಕ ಹಫೀಜ್ ಸಯಿದ್ ನ ಭಯೋತ್ಪಾದಕ ಸಂಘಟನೆಯಿಂದ ಹಣ ಹರಿದು ಬಂದಿದೆ ಎಂಬ ಸ್ಪೋಟಕ ಮಾಹಿತಿಯನ್ನ NIA ಬಯಲು ಮಾಡಿತ್ತು.

ಇದರ ಬಳಿಕ ಇದೀಗ NIA ತನ್ನ ತನಿಖೆಯ ಕಬಂಧಬಾಹುವನ್ನ ಮತ್ತಷ್ಟು ವಿಸ್ತರಿಸಲು ಮುಂದಾಗಿದೆ.‌ NIA ಮೂಲಗಳ ಪ್ರಕಾರ ತಿಳಿದು ಬಂದಿರುವ ವಿಷಯವೇನೆಂದರೆ ಹರಿಯಾಣಾದ ಮಸ್ಜಿದ್ ನಿರ್ಮಾಣದಲ್ಲಿ ಮಾತ್ರವೇ ಈ ಪ್ರಕರಣದ ಸಂಬಂಧವಲ್ಲದೆ ಇದು ದೇಶದ ಇತರ ರಾಜ್ಯಗಳ ಹಲವು ಭಾಗಗಳಿಗೂ ಹರಡಿಕೊಂಡಿದೆ. ರಾಷ್ಟ್ರೀಯ ತನಿಖಾ ದಳದ ಇನ್ವೆಸ್ಟಿಗೇಷನ್ ನಲ್ಲಿ ಇದೀಗ ಪಶ್ಚಿಮಿ ಉತ್ತರಪ್ರದೇಶದ ಕೆಲ ಜಿಲ್ಲೆಗಳಲ್ಲಿನ ಮಸ್ಜಿದ್ ಗಳ ಹೆಸರುಗಳೂ ಬೆಳಕಿಗೆ ಬಂದಿವೆ.

ಈ ಮುಂಚೆಯೇ ಭಯೋತ್ಪಾದಕರಿಂದ ಫಂಡಿಂಗ್ ವಿಚಾರವಾಗಿ‌ ತನಿಖಾ ದಳದಿಂದ ಹಲವರ ಬಂಧನವಾಗಿದ್ದವು. ಹರಿಯಾಣಾದ ಪಲವಲ್ ನಲ್ಲಿ ಭಯೋತ್ಪಾದಕ ಸಂಘಟನೆಯಿಂದ ಮಸ್ಜಿದ್ ನಿರ್ಮಾಣ ಕಾರ್ಯದಲ್ಲಿ ಫಂಡಿಂಗ್ ನಡೆದಿದೆ ಎಂದು NIA ಅರೆಸ್ಟ್ ಮಾಡಿದ್ದ ಸಲ್ಮಾನ್ ನ ಸಂಪರ್ಕದಲ್ಲಿ ಪಶ್ಚಿಮಿ ಉತ್ತರಪ್ರದೇಶದ ಹಲವು ಜಿಲ್ಲೆಗಳ ಜನರೂ ಇದ್ದವು.

NIA ಅಧಿಕಾರಿಗಳು ಹೇಳುವಂತೆ ಪಶ್ಚಿಮಿ ಉತ್ತರಪ್ರದೇಶವಷ್ಟೇ ಅಲ್ಲದೆ ಈ ಭಯೋತ್ಪಾದಕರ ನೆಟವರ್ಕ್ ಬಿಹಾರ್, ಉತ್ತರಾಖಂಡ, ಜಮ್ಮು ಕಾಶ್ಮೀರ ಹಾಗು ಕೇರಳದಲ್ಲೂ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಬಲವಾದ ಕಾರಣೆಂದರೆ ಈ ರಾಜ್ಯಗಳಲ್ಲೆಲ್ಲಾ ತನಿಖಾ ತಂಡಗಳಿಂದ ಹಲವಾರು ಬಾರಿ ಅರೆಸ್ಟ್ ಗಳಾಗಿವೆ. ಭಾರತೀಯ ಗಡಿಗಳು ಮೊದಲಿನಿಂತಿಲ್ಲ, ಭಾರತೀಯ ಸೇನೆ ಗಡಿಯನ್ನ ಕಟ್ಟೆಚ್ಚರದಿಂದ ಸಂರಕ್ಷಿಸುತ್ತಿರುವುದರಿಂದ ಭಾರತದೊಳಗೆ ನುಗ್ಗಿ ವಿಧ್ವಂಸಕ ಕೃತ್ಯವೆಸಗಲು ಭಯೋತ್ಪಾದಕರಿಗೆ ಆಗುತ್ತಿಲ್ಲ ಹಾಗಾಗಿ ಉಗ್ರರು ಭಾರತದಲ್ಲಿ ತಮ್ಮ ಪ್ಲ್ಯಾನ್ ಬದಲಿಸಿದ್ದು ತಮ್ಮ ಹೊಸ ಟೆರರ್ ಮಾಡೆಲ್ ಗೆ ಸ್ಕೆಚ್ ಹಾಕಿದ್ದಾರೆ.

ತಾವಂತೂ ಗಡಿ ನುಸುಳಿ ಒಳ ಬರಲಾಗದಿರುವುದಕ್ಕೆ ಇದೀಗ ಉಗ್ರರು ಹಣದ ಮೂಲಕ ಅಂದರೆ ಫಂಡಿಂಗ್ ಮೂಲಕ ಭಯೋತ್ಪಾದನಾ ನೆಟವರ್ಕ್ ಕ್ರಿಯೇಟ್ ಮಾಡಲು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ಇದಕ್ಕಾಗಿ ಹವಾಲಾ ಮೂಲಕ ದೇಶದಲ್ಲಿ ಹಣವನ್ನ ತರಿಸಲಾಗುತ್ತಿದೆ ಹಾಗು ಹರಿದು ಬರುತ್ತಿದ್ದು ಆ ಹಣದಿಂದಲೇ ಬೃಹತ್ ಮಸ್ಜಿದ್‌ಗಳು ಹಾಗು ಭವ್ಯ ಇಸ್ಲಾಮಿಕ್ ಬಿಲ್ಡಿಂಗ್‌ಗಳ ನಿರ್ಮಾಣವಾಗುತ್ತಿವೆ.

ಕಳೆದ ಕೆಲ ವರ್ಷಗಳಲ್ಲಿ ದೇಶದ ಹಲವಾರು ಜಾಗಗಳಲ್ಲಿ ಸಡನ್ ಆಗಿ ದೊಡ್ಡ ದೊಡ್ಡ ಮಸ್ಜಿದನುಮಾ ಕಟ್ಟಡಗಳಾಗಲಿ ಅಥವ ಮದರಸಾಗಳಾಗಲಿ ಕಟ್ಟಲ್ಪಡುತ್ತಿರೋದನ್ನ ನಾವು ಕಾಣಬಹುದಾಗಿದೆ.

ಎಲ್ಲಾ ಮಸ್ಜಿದ್ ಅಥವ ಮದರಸಾ ಗಳ ಕನೆಕ್ಷನ್ ಭಯೋತ್ಪಾದಕ ಸಂಘಟನೆಗಳ ಜೊತೆಗಿಲ್ಲದಿರಬಹುದು ಆದರೆ ಸಡನ್ ಆಗಿ ಕೆಲವೇ ವರ್ಷಗಳಲ್ಲಿ ಆಗಸದೆತ್ತರದಂತಹ ಮಸ್ಜಿದ್, ಮದರಸಾಗಳ ನಿರ್ಮಾಣ ಹೇಗಾಯ್ತು? ಅನ್ನೋ ಸಂಶಯವಂತೂ ಕಾಡದೆ ಇರದು. ಇದೇ ಸಂಶಯಕ್ಕಾಗಿ ಇದೀಗ ಗುಪ್ತಚರ ಇಲಾಖೆಯು ಇಂಥಾ ಕಟ್ಟಡಗಳಿಗಾಗಿ ವಿನಿಯೋಗಿಸಲಾದ ಫಂಡಿಂಗ್ ಕುರಿತಾಗಿ ತನಿಖೆಯನ್ನ ಆರಂಭಿಸಿದೆ‌.

ಇದರ ಹೊರತಾಗಿ ಎದೆ ಝಲ್ಲೆನಿಸುವ ಮತ್ತೊಂದು ವಿಷಯವೇನೆಂದರೆ ಭಯೋತ್ಪಾದಕರು ತಮ್ಮ ಸಂಘಟನೆಯನ್ನ ಭಾರತದ ಗ್ರೌಂಡ್ ಲೆವೆಲ್ ನಲ್ಲಿ ಮತ್ತಷ್ಟು ಬಲಿಷ್ಟವಾಗಿಸಲು ಸೋಶಿಯಲ್ ಮೀಡಿಯಾ ಮೂಲಕವೂ ಜಿಹಾದಿ ತತ್ವಗಳನ್ನ ಪಸರಿಸುತ್ತಿವೆ.

ಇದಕ್ಕಾಗಿಯೂ ಹವಾಲಾ ಹಣದ ಮೂಲಕ ಫಂಡಿಂಗ್ ಮಾಡಕಾಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಇದೀಗ ತನಿಖಾಧಿಕಾರಿಗಳ ಮೂಲಗಳು ಬಯಲು ಮಾಡಿವೆ.

Source: Sudarshan News

– Team Nationalist Views

Nationalist Views ©2018 Copyrights Reserved

 •  
  2.2K
  Shares
 • 2.2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com