Connect with us
Loading...
Loading...

ಪ್ರಚಲಿತ

ರಾಜ್ಯದ ಜನತೆಯ ತಲೆ ಮೇಲೆ ‘ಕೈ’ ಎಳೆದ ಸಿದ್ದರಾಮಯ್ಯ!! ನಿಮಗಾಗಿ ಹೊಚ್ಚ ಹೊಸ ಭಾಗ್ಯ ಬಂದಿದೆ. ಏನದು ಗೊತ್ತಾ?

Published

on

 • 29
 •  
 •  
 •  
 •  
 •  
 •  
 •  
  29
  Shares

ಸಿದ್ದರಾಮಯ್ಯನವರು ನಮಗೆ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ, ಆ ಭಾಗ್ಯ ಈ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಕೊಟ್ಟರು. ನಾವದನ್ನು ತೆಗೆದುಕೊಂಡು ಕೂತುಬಿಟ್ಟೆವು. ಆದರೆ ಅದರ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ವಿಚಾರಿಸುವ ಗೋಜಿಗೆ ನಾವು ಹೋಗಲೇ ಇಲ್ಲ. ದೇಶದ ಬಗ್ಗೆ, ರಾಜ್ಯದ ಬಗ್ಗೆ ಜಾಗೃತಿ ಇರುವವರು ಯಾವತ್ತೂ ಸುಮ್ಮನೆ ಕೂರಬಾರದು. ಆ ಭಾಗ್ಯ, ಈ ಭಾಗ್ಯ ಅಂತ ಉಚಿತವಾಗಿ ಕೊಡ್ತಿದ್ದಾರಲ್ಲ ಇದರ ಹಿಂದೆ ಏನೆಲ್ಲ ನಡೆಯುತ್ತಿದೆ ಏನಿಲ್ಲ ಅಂತ ನಾವು ವಿಚಾರ ಮಾಡಲೇಬೇಕಿತ್ತು. ಆದರೆ ಮಾಡಲೇ ಇಲ್ಲ. ಅದರ ಪರಿಣಾಮ ಈಗ ಏನಾಗಿದೆ ಗೊತ್ತಾ? ಸಿದ್ದರಾಮಯ್ಯನವರು ಸರಣಿ ಮೇಲೆ ಸರಣಿ ಭಾಗ್ಯಗಳನ್ನು ಕೊಟ್ಟು ಕರ್ನಾಟಕವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದ್ದಾರೆ.

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಇದ್ದದ್ದು 1.12 ಲಕ್ಷ ಕೋಟಿ ರೂ ಸಾಲ! ಆದರೆ ಈಗ 2.42 ಲಕ್ಷ ಕೋಟಿ ರೂ ಗಳನ್ನು ತಲುಪುತ್ತಿದೆ. ಬೇಡವಾದದ್ದನ್ನೆಲ್ಲಾ ಮಾಡಿ ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ಬೇಡವಾದದ್ದು ಯವುದೆಂದರೆ ಟಿಪ್ಪು ಜಯಂತಿ. ಖಂಡಿತವಾಗಿಯೂ ಟಿಪ್ಪು ಜಯಂತಿಯ ಅವಶ್ಯಕತೆಯೇ ಇರಲಿಲ್ಲ. ಅದು ಮುಸಲ್ಮಾನರಿಗೂ ಬೇಕಾಗಿರಲಿಲ್ಲ.

ಯಾಕಂದ್ರೆ ಇಸ್ಲಾಂ ಧರ್ಮದಲ್ಲಿ ಹುಟ್ಟಿದ ದಿನವನ್ನು ಆಚರಣೆ ಮಾಡುವುದು ನಿಷಿದ್ಧ. ಆದರೂ ಸಿದ್ದರಾಮಯ್ಯನವರು ಹಟ ಮಾಡಿ ಬೇಕಾಬಿಟ್ಟಿ ಸರ್ಕಾರದ ಹಣವನ್ನು ಖರ್ಚು ಮಾಡಿ, ಮತಾಂಧ ಟಿಪ್ಪುವಿನ ಜಯಂತಿಯನ್ನು ಮಾಡಿಬಿಟ್ಟರು. ಹೋಗಲಿ ಅದು ಶಾಂತ ರೀತಿಯಲ್ಲ ಆಗಿದೆಯಾ? ಊಹೂ ಅದು ಇಲ್ಲ. ಅದರಿಂದ ಕೋಮು ಸಾಮರಸ್ಯ ಹಾಳಾಯಿತೇ ಹೊರತು ಏನೂ ಪ್ರಯೋಜನವಾಗಲಿಲ್ಲ. ಸಿದ್ದರಾಮಯ್ಯನವರಿಗೂ ಅದೇ ಬೇಕಾಗಿತ್ತೇನೋ? ಒಟ್ಟಿನಲ್ಲಿ ಬೇಡವಾದದ್ದನ್ನೆಲ್ಲಾ ಮಾಡಿ ನಮ್ಮ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ್ದಾರೆ.

ಜನಪ್ರಿಯತೆ ಗಳಿಸಬೇಕೆಂಬ ಭರದಲ್ಲಿ, ಜನಪರ ಯೋಜನೆಗಳನ್ನು ಮಿತಿ ಮೀರಿ ಜಾರಿಗೆ ತಂದು, ಅದರಲ್ಲಿಯೂ ಅಲ್ಪಸಂಖ್ಯಾತರ ಓಲೈಕೆಗೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿ, ಅತೀ ದೊಡ್ಡ ಸಾಧನೆ ಎಂಬಂತೆ ಅಚ್ಚರಿಯ ರೀತಿಯಲ್ಲಿ ಸರ್ಕಾರವನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ಹೋಗಲಿ ಇಷ್ಟೆಲ್ಲಾ ಸಾಲ ಆಗಿದೆಯಲ್ಲ ಇದರಿಂದ ಎಳ್ಳಷ್ಟಾದರೂ ಪ್ರಯೋಜನವಾಗಿದೆಯಾ? ಊಹೂ ಇಲ್ಲವೇ ಇಲ್ಲ. ಪ್ರಯೋಜನವಾಗಿದ್ದರೆ ದಾಖಲೆಯ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಲೆಕ್ಕವಿಲ್ಲದಷ್ಟು ರೈತರು ಸಿದ್ದರಾಮಯ್ಯನವರ ಆಢಳಿತಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದ್ರೆ ಸಿದ್ದರಾಮಯ್ಯನವರು ಸಾಲ ಮಾಡಿದ್ದು ಯಾರಿಗೂ ಪ್ರಯೋಜನವಾಗಲ್ಲ ಅಂತಲೇ ಅರ್ಥ.

ಈಗ ಸರಿಯಾಗಿ ಲೆಕ್ಕ ಹಾಕಿದರೆ ಕರ್ನಾಟಕದ ಪ್ರತಿ ಪ್ರಜೆಯ ಮೇಲೆ ಸುಮಾರು 38,000 ರೂ ಸಾಲವಿದೆ. ಹೌದು!! ಈಗಾಗಲೇ ಸರಕಾರದ ಮೇಲೆ 2 ಲಕ್ಷ ಕೋಟಿ ರೂ ಗಳ ಮೇಲೆ ಸಾಲವಿದೆ! ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ರೂ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ! ಆಗ, ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,470 ಕೋಟಿ ರೂ ತಲುಪಲಿದೆ! ಈ ನಿರೀಕ್ಷೆಯನ್ನೂ ಮೀರಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಾಲದ ಪ್ರಮಾಣ 2.50 ಲಕ್ಷ ಕೋಟಿ ರೂ ದಾಟಲಿದೆ! ಅಂದರೆ, ಪ್ರತಿ ಪ್ರಜೆಯ ಮೇಲೆ 38,000 ರೂ ಗಳಿಗೂ ಹೆಚ್ಚು ಸಾಲದ ಹೊರೆ!!

ಇತ್ತೀಚೆಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದರು. ರಾಜ್ಯದ ಖಜಾನೆಯನ್ನು ಸಿದ್ದರಾಮಯ್ಯನವರು ಲೂಟಿ ಮಾಡಿದ್ದಾರೆ. ಅದರ ಕುರಿತಾದ ವಿಷಯಗಳನ್ನು ದಾಖಲೆ ಸಮೇತ ಮಾತನಾಡುತ್ತೇನೆ. ಇನ್ನೇನು ನಿಮ್ಮ ಟೈಂ ಮುಗಿಯುತ್ತ ಬಂದಿದೆ. ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ಸಿದ್ದರಾಮಯ್ಯನಿಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಈಗ ಮುಖ್ಯಮಂತ್ರಿ ಆದ ಬಳಿಕ ಶ್ರವಣ ಬೆಳಗೊಳದ ಕಾರ್ಯಕ್ರಮದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸವಾಲು ಹಾಕಿದ್ದರು.

ದೇವೆಗೌಡರ ಮಾತನ್ನು ಕೇಳಿದರೆ ಈಗ ಸಿದ್ದರಾಮಯ್ಯನವರ ಸರ್ಕಾರದ ಸಾಲದಲ್ಲಿ ಮುಳಗಿದ್ದನ್ನು ಅವಲೋಕಿಸಿದರೆ ಸಿದ್ದರಾಮಯ್ಯನವರ ಮೇಲೆ ಅನುಮಾನ ಬರೋದಂತು ಖಚಿತ‌. ಯಾಕಂದ್ರೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸಿದ್ದರಾಮ್ಯನವರ ಕುರಿತಂತೆ ರಾಜ್ಯದ ಖಜಾನೆಯನ್ನು ಸಿದ್ದರಾಮಯ್ಯನವರು ಲೂಟಿ ಮಾಡಿದ್ದಾರೆ ಅಂತ ಆರೋಪ ಮಾಡಿದ್ದರು. ಅದು ಅಲ್ಲದೆ ಅದರ ಕುರಿತಂತೆ ದಾಖಲೆ ಸಮೇತ ಮಾತನಾಡುತ್ತೇನೆ ಅಂದಿದ್ದರು. ಇದನ್ನೆಲ್ಲಾ ನಾವು ಆಲೋಚಿಸಲೇಬೇಕು.

ಇನ್ಬೊಂದು ಇಲ್ಲಿ ಮುಖ್ಯ ವಿಷಯವನ್ನು ಹೇಳಲೇಬೇಕು. ಅನ್ನಭಾಗ್ತವನ್ನು ತಾವೇ ಕೊಡುತ್ತಿರುವುದು ಸಿದ್ದರಾಮಯ್ಯನವರು ಬೀಗುತ್ತಾ ಹೇಳುತ್ತಾರೆ. ಆದರೆ ಅಸಲಿಗೆ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅದೆಷ್ಟು ಅಕ್ಕಿ ಕೊಡುತ್ತದೆ ಗೊತ್ತಾ? ಕರ್ನಾಟಕ ಪ್ರತಿವರ್ಷ2,24,000 ಮೆಟ್ರಿಕ್ ಟನ್ ನಷ್ಟು ಪಡಿತರ ವಿತರಣೆ ಮಾಡ್ತಿದೆ ಇದರಲ್ಲಿ ಕೇಂದ್ರ ಸರ್ಕಾರ 2,17,403 ಟನ್ ನಷ್ಟು ಕೊಡುತ್ತದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಪಡಿತರ ವಿತರಣೆಯನ್ನು ತಾನೇ ಕೊಡುತ್ತದೆ ಎಂದು ಹೇಳುತ್ತದೆ.

ಸಿದ್ದರಾಮಯ್ಯನವರ ಸರ್ಕಾರ ಸರಿಯಾಗಿ ಕೊಟ್ಟ ಭಾಗ್ಯವೆಂದರೆ ಸರಣಿ ಹಿಂದೂ ಕಾರ್ಯಕರ್ತರ ಸಾವಿನ ಭಾಗ್ಯ. ಹೌದು ಸಿದ್ದರಾಮಯ್ಯನವರ ಆಢಳಿತಾವಧಿಯಲ್ಲಿ ಒಟ್ಟು 25 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿವೆ. ಇದೊಂದೆ ಸಿದ್ದರಾಮಯ್ಯನವರು ಸರಿಯಾಗಿ ಕೊಟ್ಟ ಭಾಗ್ಯ. ಸದಾ ಹಿಂದೂ ಕಾರ್ಯಕರ್ತರ ಹತ್ಯೆಗೆ ಕುಮ್ಮಕ್ಕು ಕೊಡಲು ಸಿದ್ಧವಿರುವ ಸರ್ಕಾರ‌. ಕೊಲೆ ಮಾಡಿದ ಮುಸಲ್ಮಾನರಿಗೆ ಬಿಡುಗಡೆಯ ಭಾಗ್ಯ. ಅಲ್ಪ ಸಂಖ್ಯಾತರ ಮೇಲಿನ ಕೇಸ್ ನ್ನು ವಜಾ ಮಾಡುವ ಭಾಗ್ಯ. ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ಭಾಗ್ಯ. ಉಗ್ರ ಸಂಘಟನೆಗಳ ಮೇಲಿನ ಕೇಸ್ ವಜಾ ಮಾಡುವ ಭಾಗ್ಯ. ಇವೆಲ್ಲಾ ಸಿದ್ದರಾಮಯ್ಯನವರು ಸರಿಯಾಗಿ ಕೊಟ್ಟ ಭಾಗ್ಯಗಳು. ಇವುಗಳೇ ಸಿದ್ದರಾಮಯ್ಯನವರ ಸರ್ಕಾರದ ಸಾಧನೆಗಳು.

ಅವರ

ಇನ್ನೊಂದಿಷ್ಟು ಭಾಗ್ಯಗಳನ್ನು ಮರೆತಿದ್ದೆ. ಅದಿಷ್ಟು ಹೇಳಿಬಿಡ್ತೀನಿ. ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ. ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದ ಡಿವೈಎಸ್ ಪಿ ಗಣಪತಿಯವರಿಗೆ ಸಾವಿನ ಭಾಗ್ಯ. ಗಣಪತಿಯವರ ಸಾವಿನ ಆರೋಪಿಗೆ ಕ್ಲೀನ್ ಚಿಟ್ ಭಾಗ್ಯ. 70ನೇ ವಯಸ್ಸಿನಲ್ಲಿ ಮೀಟಿದ ಮೇಟಿಗೆ ಕ್ಲೀನ್ ಚಿಟ್ ಭಾಗ್ಯ. ಬರೀ ಇಂತಹ ಸಾಧನೆಗಳೇ ಸಿದ್ದರಾಮಯ್ಯನವರ ಆಢಳಿತದ ಸಾಧನೆಗಳು.

ಇಂತಹ ಭಾಗ್ಯಗಳನ್ನು ಕೊಟ್ಟ ಸಲುವಾಗಿಯೇ ಇಂದು ಕರ್ನಾಟಕ ಸಾಲದಲ್ಲಿ ಮುಳುಗಿದೆ ಅನ್ನೋದಂತು ನಿಜ.

 •  
  29
  Shares
 • 29
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com