Connect with us
Loading...
Loading...

ಪ್ರಚಲಿತ

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ತಮಿಳು ನಟ ಸಿಂಬುರವರ ಕನ್ನಡಿಗರ ಕುರಿತಾದ ಮಾತುಗಳು!! ಕಾವೇರಿ ನೀರು ಹಾಗು ಕನ್ನಡಿಗರ ಬಗ್ಗೆ ಅವರು ಹೇಳಿದ್ದಾದರೂ ಏನು ಗೊತ್ತೆ?

Published

on

 • 1.9K
 •  
 •  
 •  
 •  
 •  
 •  
 •  
  1.9K
  Shares

ಕನ್ನಡಿಗರ ಬಗ್ಗೆ ಹೆಮ್ಮೆಯ ಮಾತನಾಡಿದ ತಮಿಳು ನಟ ಸಿಂಬು. . .! ಕಾವೇರಿ ವಿಚಾರವಾಗಿ ಸೌಹಾರ್ದ ಮಾತು. .!

ಕಾವೇರಿ ವಿಚಾರ ಬಂದಾಗಲ್ಲೆಲ್ಲ ಬರೀ ವಿವಾದಗಳೇ ಎದುರಾಗುತ್ತೆ. ನಮ್ಮ ಮತ್ತು ನೆರೆರಾಜ್ಯ ತಮಿಳುನಾಡು ನಡುವೆ ಹಲವು ವಾದ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ತಮಿಳುನಾಡಿನ ರಾಜಕಾರಣವೆಂದರೇ ಅದು ಕನ್ನಡ ನಾಡಿನ ವಿರೋಧಿ ದೋರಣೆ ಎಂಬಂತಾಗಿದೆ. ಅಲ್ಲಿನ ರಾಜಕಾರಣಿಗಳು ನಟರು ಸಂಘ ಸಂಸ್ಥೆಗಳು ಎಲ್ಲರೂ ಕನ್ನಡಿಗರನ್ನ ಸದಾ ದೂಷಿಸುವುದೇ ಕೆಲಸ.


ಆದರೇ ತಮಿಳುನಾಡಿನ ಇತ್ತೀಚಿನ ವಿವಾದದ ವಾತಾವರಣದಲ್ಲಿ ಅಪರೂಪಕ್ಕೆಂಬಂತೆ ಕನ್ನಡಿಗರಿಗೆ ಸಮಾಧಾನ ನೀಡುವ ತಂಗಾಳಿಯಂತಹ ಮಾತುಗಳು ಕೇಳಿ ಬಂದಿದೆ. ಅಂತಹಾ ಮಾತುಗಾರ ಬೇರ್ಯಾರೂ ಅಲ್ಲ ಅವರೇ ನಟ ಸಿಲಂಬರಸನ್ ಅಲಿಯಾಸ್ ಸಿಂಬು. . .! ಕಾವೇರಿ ಹೋರಾಟಗಳಲ್ಲಿ ಕನ್ನಡ ಮತ್ತು ತಮಿಳು ನಟರು ಅವರವರ ರಾಜ್ಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಎರಡು ಚಿತ್ರರಂಗದ ಅನೇಕ ದೊಡ್ಡ ದೊಡ್ಡ ಕಲಾವಿದರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಕೆಲವು ತಮಿಳು ನಟರು ತಾವೇ ಹೊಸ ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದೂ ಇದೆ. ಕೆಲವು ನಟರಂತೂ ಕರ್ನಾಟಕದಿಂದ ಹೆಸರು ಮಾಡಿ ತಮಿಳುನಾಡಿಗೆ ಹೋದರೂ, ಕಾವೇರಿ ವಿಷಯ ಬಂದಾಗ ಏನೂ ಮಾತನಾಡುವುದಿಲ್ಲ. ಆದರೆ, ಇದೀಗ ತಮಿಳಿನ ಖ್ಯಾತ ನಟ ಸಿಂಬು ಕಾವೇರಿ ಹೋರಾಟದ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.


ಇದು ಗಾಂಧಿ ಹುಟ್ಟಿದ ಭೂಮಿ ಅಹಿಂಸಾ ಹೋರಾಟವೇ ಸರಿಯಾದ ಮಾರ್ಗ. ಕಾವೇರಿ ಹೋರಾಟ ನಡೆಯುತ್ತಲೇ ಇದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಕ್ಕೆ ಸಾಧ್ಯ. ನಾವು ಯಾರೊಂದಿಗೂ ಜಗಳ ಮಾಡಬಾರದು. “ಕರ್ನಾಟಕದವರೇನಾದರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ದಾರಾ?” ಎಂದು ಸಿಂಬು ಹೇಳಿದ್ದಾರೆ. ಸಿಂಬು ತಮ್ಮ ಮಾತನ್ನು ಮುಂದುವರೆಸುತ್ತಾ “ನಾನು ಹೆತ್ತ ಮಗ ಅಲ್ಲದೇ ಇದ್ರೂ, ಕರ್ನಾಟಕದಲ್ಲಿರುವಂತ ತಾಯಿಗೆ ಕೇಳ್ತಾ ಇದ್ದೀನಿ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮಗೆ ಕೊಡ್ತೀರಾ ಅಮ್ಮ, ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ಕೊಡಿ”


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಬು, ನಾನು ಇಲ್ಲಿ ಪ್ರತಿಭಟನೆ ಮಾಡಲೋ, ಇನ್ನೊಬ್ಬರನ್ನು ದೂಷಿಸಲೋ ಅಥವಾ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಒತ್ತಾಯಿಸಿಯೋ ಬಂದವನಲ್ಲ. ನಾನು ಇಲ್ಲಿ ನಿಂತು ವಿನಮ್ರತೆಯಿಂದ ಪ್ರತಿಯೋರ್ವ ಕನ್ನಡ ತಾಯಂದಿರಲ್ಲಿ ಬೇಡುತ್ತಿದ್ದೇನೆ, ನೀವು ಕುಡಿದು ದಣಿವಾರಿಸಿಕೊಂಡು ಉಳಿದ ಸ್ವಲ್ಪ ನೀರನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇನೆ. ಇದು ಅಹಿಂಸೆಯನ್ನು ಕಲಿಸಿಕೊಟ್ಟ ಗಾಂಧೀಜಿ ಹುಟ್ಟಿದ ನಾಡು. ನಾವು ಪರಸ್ಪರ ಸ್ನೇಹದಿಂದಿರಬೇಕಾಗಿದೆ. ನಿಜಸ್ಥಿತಿಯನ್ನು ನೋಡುವುದಾದರೆ, ಕನ್ನಡಿಗರಿಗೆ ಕುಡಿಯಲು ಸಮರ್ಪಕ ನೀರಿಲ್ಲ, ಇನ್ನು ಅವರು ನಮಗೆ ಕೊಡಲು ಹೇಗೆ ಸಾಧ್ಯ ಎಂದು ಸಿಂಬು ಪ್ರಶ್ನಿಸಿದ್ದಾರೆ.


ಹೋರಾಟದ ಬದಲು ಕರ್ನಾಟಕದಲ್ಲಿರುವ ನಮ್ಮ ಮಾತೆಯರನ್ನು ಕೇಳೋಣ. ನಿಮ್ಮ ಮಕ್ಕಳಿಗೆ ಕುಡಿಸಿ ಉಳಿದ ನೀರನ್ನ ನಮಗೆ ಕೊಡಿ ಎಂದು ಮನವಿ ಮಾಡೋಣ. ಅದರು ಅವರ ಮನಸ್ಸು ಕರಗಿಲ್ಲ ಎಂದರೆ ನಮ್ಮ ಕಣ್ಣೀರಿಗೆ ಅವರ ಮನಸು ಕರಗುತ್ತದೆ. ಈ ರೀತಿಯ ಹೋರಾಟ ಬೇಡ. ಶಾಂತ ರೀತಿಯಲ್ಲಿ ಅವರನ್ನು ಕೇಳೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಭೂಮಿ ಅಂತ ಅಂದರೆ ಅದು ಭಾರತ ಆಗಿರಬಹುದು, ಕರ್ನಾಟಕ ಆಗಿರಬಹುದು, ತಮಿಳುನಾಡು ಆಗಿರಬಹುದು ಮೊದಲಿಗೆ ನಾವು ಈ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿದ್ದೀವಿ. ಈಗ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕು. ಇನ್ನೂ ಎಷ್ಟು ದಿನ ಈ ಜಾತಿ, ಧರ್ಮ, ಪಂಗಡ ಅನ್ನೋ ಹೆಸರಿನಲ್ಲಿ ಬೇರೆ ಮಾಡ್ತಾ ಇರ್ತೀರಿ?


ಯಾರೋ ಅಧಿಕಾರಕ್ಕೆ ಬರುವುದಕ್ಕೋಸ್ಕರ ನಮ್ಮನ್ನು ನಾನಾ ಕಾರಣಕ್ಕೆ ಹೀಗೆ ಒಡೆದು ಬೇರೇ ಬೇರೆ ಮಾಡಿ ಆಳುತ್ತಿದ್ದಾರೆ. ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುತ್ತಿಲ್ಲ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯ ಮಾಡೋದಿಕ್ಕೋಸ್ಕರ ನಾನಿಲ್ಲಿಗೆ ಬಂದಿಲ್ಲ. ಆ ಕೆಲಸ ಮಾಡೋದಕ್ಕೆ ಬಹಳಷ್ಟು ಜನ ಇದ್ದಾರೆ.


ತಮಿಳು ನಾಡಿನ ಕೆಲವು ಪ್ರಭುದ್ಧ ನಟರೇ ಕಾವೇರಿ ವಿಚಾರದಲ್ಲಿ ಅಪ್ರಭುದ್ಧವಾಗಿ ಮಾತನಾಡಿದ್ದಾರೆ ಆದರೇ ಸಿಲಂಬರಸನ್ ಅಲಿಯಾಸ್ ಸಿಂಬು ಮಾನವೀಯ ಅಂತಃಕರಣದಿಂದ ಕನ್ನಡಿಗರಿಗೆ ಗೌರವದ ಮಾತುಗಳನ್ನಾಡಿದ್ದಾನೆ. ಇದೇ ಮನೋಭಾವ ತಮಿಳುನಾಡಿನ ಇತರೆ ರಾಜಕಾರಣಿಗಳಿಗೂ ಮತ್ತು ನಟರಿಗೂ ಬರಲಿ.

ಸಿಂಬು ಮಾತಾಡಿದ ವಿಡಿಯೋ ನೋಡಿ,

– Team Nationalist Views

Nationalist Views ©2018 Copyrights Reserved

 •  
  1.9K
  Shares
 • 1.9K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com