Connect with us
Loading...
Loading...

ಅಂಕಣ

ಹುಟ್ಟು ಹಬ್ಬದ ಶುಭಾಷಗಳು ಸ್ಮೃತಿ ಜೀ!!! ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕಿ ಅಂದು ಮೋದಿಜೀಯ ವಿರುದ್ಧ ಸಿಡಿದೆದ್ದಿದ್ಯಾಕೆ ಗೊತ್ತಾ? ಸ್ಮೃತಿ ಇರಾನಿಯವರ ಬಗೆಗಿನ ಕೆಲ ಇಂಟರೆಸ್ಟಿಂಗ್ ಸಂಗತಿಗಳು!!!

Published

on

 • 4.1K
 •  
 •  
 •  
 •  
 •  
 •  
 •  
  4.1K
  Shares

ಸ್ನೃತಿ ಇರಾನಿ, ಈ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ಸಿನವರಿಗೆ ಉರಿ ತಡೆದುಕೊಳ್ಳಲಾಗುವುದಿಲ್ಲ, ರಾಹುಲ್ ಗಾಂಧಿಯಂತೂ ಒಮ್ಮೆಲೆ ಬೆಚ್ಚಿ ಬೀಳ್ತಾರೆ. ತಾನು ಹಾಗು ತನ್ನ ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನ ಮುನ್ನಡೆಸಲಬಲ್ಲರು ಹೊರತು ಇನ್ಯಾವ ಪಕ್ಷಗಳಾಗಲಿ ಅಥವ ಮೋದಿಯಿಂದಾಗಲಿ ಈ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಅಂತ ಮೊನ್ನೆ ಮೊನ್ನೆಯಷ್ಟೇ ತಮ್ಮ ಕಾಂಗ್ರೆಸ್ ಪಕ್ಷದ ಸಭೆಯೊಂದರಲ್ಲಿ ರಾಹುಲ್ ಹೇಳಿಕೆ ನೀಡಿದ್ದರು.

ಆದರೆ ರಾಹುಲ್ ಗಾಂಧಿಗೆ ಸರಿಸಮಾನಳಾಗಿ ಆತನ ಕ್ಷೇತ್ರ ಉತ್ತರಪ್ರದೇಶದ ಅಮೇಥಿಯಲ್ಲಿ 2014 ರಲ್ಲಿ ಸ್ಮೃತಿ ಇರಾನಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾಗ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗು ಅವರ ಇಡೀ ಪರಿವಾರ ರಾಹುಲ್ ಗಾಂಧಿಯನ್ನ ಸ್ಮೃತಿ ಇರಾನಿ ಎದುರು ಗೆಲ್ಲಿಸಿಕೊಳ್ಳಲು ಹರಸಾಹಸ ಪಟ್ಟಿದ್ದು ಇತಿಹಾಸವೇ ಸರಿ.

ಸ್ಮೃತಿ ಇರಾನಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿ ಸೋನಿಯಾ ಗಾಂಧಿ ಪರಿವಾರಕ್ಕೆ ಈ ರೀತಿಯ ನಡುಕ ಹುಟ್ಟಿಸುತ್ತಾರೆಂದರೆ ನಿಜಕ್ಕೂ ಆಕೆಯ ಧೈರ್ಯಕ್ಕೆ ಸೆಲ್ಯೂಟ್ ಹೇಳಲೇಬೇಕು. ಇನ್ನೇನು ಚುನಾವಣೆಯಲ್ಲಿ ಸೋತೆ ಬಿಡುತ್ತೇನೆ ಎಂದುಕೊಂಡಿದ್ದ ರಾಹುಲ್ ಗಾಂಧಿ ಅಮೇಥ ಕ್ಷೇತ್ರದಲ್ಲಿ ತನ್ನೆಲ್ಲಾ ಬಲಪ್ರಯೋಗವನ್ನ ಸ್ಮೃತಿ ಇರಾನಿಯಂತಹ ಸಾಮಾನ್ಯ ಕಾರ್ಯಕರ್ತೆಯೊಬ್ಬಳ ವಿರುದ್ಧ ಪ್ರಯೋಗಿಸಿ ಅಕ್ರಮವೆಸಗಿ, ಫೇಕ್ ವೋಟ್ ಗಳನ್ನ ಹಾಕಿಸಿ ಗೆದ್ದು ಬಂದದ್ದನ್ನ ಸ್ವತಃ ಸ್ಮೃತಿ ಇರಾನಿ ಹೇಳಿಕೊಂಡು ಕಾಂಗ್ರೆಸ್ ನ ಮೇಲೆ ಕೆಂಡಾಮಂಡಲವಾಗಿದ್ದರು.

ಆ ವಿಷ್ಯ ಹಾಗಿರಲಿ, ಇವತ್ತು ಅದೇ ಫೈರ್ ಬ್ರ್ಯಾಂಡ್ ನಾಯಕಿ ಸ್ಮೃತಿ ಇರಾನಿ ಯವರ ಜನ್ಮದಿನ, ಸ್ಮೃತಿ ಇರಾನಿ ತಮ್ಮ ಜೀವನದಲ್ಲಿ ನಡೆದುಕೊಂಡು ಬಂದ ಹಾದಿ ಹಾಗು ಆಕೆ ಪಟ್ಟ ಕಷ್ಟಗಳು ಬಹುತೇಕ ಜನರಿಗೆ ಗೊತ್ತಿರೋದೆ ಇಲ್ಲ.

ಸ್ಮೃತಿ ಇರಾನಿ ಸ್ವತಃ ಬಿಜೆಪಿ ಪಕ್ಷದವರಾಗಿದ್ದು 2004 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ಧ ನಿಂತಿದ್ದರೆಂದರೆ ನೀವು ನಂಬುತ್ತೀರಾ? ಯೆಸ್ ನಂಬಲೇಬೇಕು.

2004 ರಲ್ಲಿ ಗುಜರಾತಿನ ಸೂರತ್ ನಲ್ಲಿ ಸ್ಮೃತಿ ಇರಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವವರೆಗೆ ಆಮರಣ ಉಪವಾಸ ಮಾಡುತ್ತೇನಂತ ಹೇಳಿದ್ದು ಬಹುಶಃ ಬಹಳ ಜನರಿಗೆ ಗೊತ್ತಿಲ್ಲ.

ಅಷ್ಟಕ್ಕೂ ಅವರು ಹಾಗೆ ಹೇಳಿದ್ದೇಕೆ ಗೊತ್ತಾ?

2002 ರ ಗುಜರಾತಿನ ಗೋಧ್ರಾ ಹಿಂಸಾಚಾರದಲ್ಲಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಕಾರಣವೇನಿತ್ತು ಅನ್ನೋದನ್ನ ಈ ಹಿಂದೆಯೇ ನಾನು ಬರೆದಿದ್ದೇನೆ. ಅದರ ಬಗ್ಗೆ ಮತ್ತೆ ಬರೆಯುವುದು ಬೇಡ ಅನಿಸುತ್ತೆ. ಅದೇ ವಿಷ್ಯವನ್ನಿಟ್ಟುಕೊಂಡು ನರೇಂದ್ರ ಮೋದಿಯವರ ವಿರುದ್ಧ ಪ್ರಿಂಟ್ ಮೀಡಿಯಾ ಸಮೇತ ಎಲೆಕ್ಟ್ರಾನಿಕ್ ಮೀಡಿಯಾಗಳೂ ತಿರುಗಿಬಿದ್ದು ನರೆಂದ್ರ ಮೋದಿಯವರು ಮುಸಲ್ಮಾನರ ಕ್ಷನೆ ಕೋರಬೇಕು ಅನ್ನುವ propaganda ನಡೆಸಿದ್ದರು.

ಇದೇ ವಿಚಾರವನ್ನು ಪೇಪರ್ ಗಳಲ್ಲಿ ಓದಿ ನೊಂದಿದ್ದ ಸ್ಮೃತಿ ಇರಾನಿ ಕೂಡ ಇದನ್ನ ಸತ್ಯವೆಂದುಕೊಂಡು ನರೇಂದ್ರ ಮೋದಿಯವರ ವಿರುದ್ಧ ನಿಂತುಬಿಟ್ಟಿದ್ದರು. ತನ್ನದೇ ಪಕ್ಷದ ನಾಯಕನನ್ನೇ ಅದೇ ಪಕ್ಷದಲ್ಲಿಟ್ಟುಕೊಂಡು ವಿರೋಧ ಮಾಡಿದರೆ ಆ ವ್ಯಕ್ತಿಯ ಗತಿಯೇನಾಗಬಹುದು ಯೋಚಿಸಿ!! ಒಂದೋ ಆ ವ್ಯಕ್ತಿಯನ್ನ ಪಕ್ಷದಿಂದ ಉಚ್ಛಾಟಿಸಬಹುದು ಇಲ್ಲವೆಂದರೆ ಪಕ್ಷದಲ್ಲಿ ಆತನಿಗೆ ಯಾವ ಜವಾಬ್ದಾರಿಯೂ ನೀಡದೆ ಮೂಲೆಗುಂಪಾಗಿಸುವ ಕೆಲಸ ನಡೆಯಬಹುದು. ಆದರೆ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:|
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: ||
(ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ)

ಎಂಬುದನ್ನ ಅರಿತಿರುವ ನರೇಂದ್ರ ಮೋದಿಯವರು ಸ್ಮೃತಿ ಇರಾನಿಯವರ ಮೇಲೆ ಕೆಂಡಾಮಂಡಲವಾಗದೆ, ಪಕ್ಷದಿಂದ ಉಚ್ಛಾಟಿಸದೆ ಅವರ ಜೊತೆ ಮಾತನಾಡಿದ್ದರು.

ಪ್ರಧಾನಿ ಮೋದಿ ಸ್ಮೃತಿ ಇರಾನಿಗೆ ಹೇಳಿದ್ದೇನು ಗೊತ್ತಾ?

ನಮೋ: ನೀವ್ಯಾಕೆ ನನ್ನ ವಿರುದ್ಧ ಇಂತಹ ಗಂಭೀರ ಆರೋಪ ಮಾಡುತ್ತಿದ್ದ್ದೀರಾ?

ಸ್ಮೃತಿ: ಮಾಧ್ಯಮಗಳಲ್ಲೆಲ್ಲಾ ನಿಮ್ಮ ವಿರುದ್ಧದ ಸುದ್ದಿಗಳು ಪ್ರಕಟವಾಗುತ್ತಿವೆ, ಅವುಗಳನ್ನ ನೋಡಿದರೆ ನೀವೇ ತಪ್ಪಿತಸ್ಥರು ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವಿಲ್ಲ.

ನಮೋ: ನೋಡಿ ಸ್ಮೃತಿ ಯವರೇ ಗುಜರಾತ್ ದಂಗೆಗಳ ಸಮಯದಲ್ಲಿ ನಮ್ಮ ಸರ್ಕಾರ ಯಾವ ರೀತಿಯ ಕ್ರಮಗಳನ್ನ ತೆಗೆದುಕೊಂಡು ಅಲ್ಲಿನ ಪರಿಸ್ಥಿತಿ ನಿಭಾಯಿಸಿದ್ದೇವೆ ಅನ್ನೋದನ್ನ ಒಮ್ಮೆ ಪರಿಶೀಲಿಸಿ, ಪತ್ರಿಕೆಗಳ ಫೇಕ್ propaganda ವನ್ನ ನೀವು ನಂಬುತ್ತೀರಾ? ಅಥವ ಸತ್ಯದ ಪರಾಮರ್ಶೆ ನಡೆಸಿ ಅದರ ಆಧಾರದ ಮೇಲೆ ನಿರ್ಣಯ ಕೈಗೊಳ್ಳುತ್ತಿರೋ ಅನ್ನೋದನ್ನ ನೀವೇ ಯೋಚಿಸಿ

ನಿಮ್ಮಲ್ಲಿ ಅದ್ಭುತವಾದ ಕೌಶಲ್ಯವಿದೆ, ಅಪಾರ ಜ್ಞಾನವಿದೆ, ನಿಮ್ಮಿಂದ ಜನರಿಗೆ ಒಳಿತಾಗಲಿ ಅನ್ನೋದೆ ನನ್ನ ಆಶಯ, ಇದಕ್ಕೂ ಹೆಚ್ಚು ನಾನೇನು ಹೇಳಬಲ್ಲೆ

ಎಂದು ನರೇಂದ್ರ ಮೋದಿ ಹೇಳಿದಾಗ ಹಾಗು ಪಕ್ಷದ ಹಿರಿಯ ಮುಖಂಡರು ಸ್ಮೃತಿ ಇರಾನಿಯವರಿಗೆ ಮೋದಿ ವಿರೋಧಿಗಳ, ವಿರೋಧ ಪಕ್ಷಗಳ ಹಾಗು ನ್ಯೂಸ್ ಟ್ರೇಡರ್ಸ್ ಗಳ ಹುನ್ನಾರದ ಬಗ್ಗೆ ಮನವರಿಕೆ ಮಾಡಿದಾಗ ಬೆಳಿಗ್ಗೆ ಆಮರಣ ಉಪವಾಸ ಘೋಷಿಸಿದ್ದ ಸ್ಮೃತಿ ಇರಾನಿ ಸಂಜೆ ನರೇಂದ್ರ ಮೋದಿಯವರಿಗೆ ಕ್ಷಮೆ ಯಾಚಿಸಿ ತಾನು ಅಪಾರ್ಥ ಮಾಡಿಕೊಂಡಿದ್ದೆ, ನನ್ನನ್ನ ಕ್ಷಮಿಸಿ ಅಂತ ಕೇಳಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದರು.

ಆ ವಿವಾದದ ಬಗ್ಗೆ ಸ್ಮೃತಿ ಇರಾನಿ ಆಪ್ ಕಿ ಅದಲಾತ್ ನಲ್ಕಿ ಹೇಳಿದ್ದ ವಿಡಿಯೋ ಇಲ್ಲಿದೆ ನೋಡಿ

Smriti_Irani_described_Modi_apology_episode_and_why_she_later_retracted_in_Aap_K

ನಂತರ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡ ಸ್ಮೃತಿ ಇರಾನಿ ಪಕ್ಷ ಕ್ಕಾಗಿ ಸಾಕಷ್ಟು ದುಡಿದು ತಮ್ಮದೇ ಆದ ಇಮೇಜನ್ನ ಪಕ್ಷದಲ್ಲಿ ಬೆಳೆಸಿಕೊಂಡರು.

ನಂತರ ಅಂದರೆ ಮೋದಿ 2014 ರಲ್ಲಿ ಪ್ರಧಾನಿಯಾದ ನಂತರ ಮೋದಿಯವರ ಸಂಪುಟದಲ್ಲಿ ಕಿರಿಯ ವಯಸ್ಸಿನ ಸಂಸದೆಯಾಗಿ ಮಂತ್ರಿಯಾಗಿ ಅಧಿಕಾರ ಸ್ವೀಕರಿದರು.

ಆದರೆ ಸ್ಮೃತಿ ಇರಾನಿ ಬೆಳೆದು ಬಂದ ಹಾದಿ ಮಾತ್ರ ಸುಗಮವಾಗಿರಲಿಲ್ಲ, ಅದು ಕಲ್ಲು ಮುಳ್ಳಯಗಳಿಂದ ಕೂಡಿದ್ದ ಕಠಿಣ ಹಾದಿಯಾಗಿತ್ತು ಅವರ ಜೀವನ. ಸ್ಮೃತಿ ಇರಾನಿ ಒಂದು ಹೊತ್ತಿನ ಊಟಕ್ಕಾಗಿ ಮುಂಬಯಿ ನ ಬಾಂದ್ರಾ ದಲ್ಲಿರುವ ಮೆಕ್ ಡೊನಾಲ್ಡ್ಸ್(McDonald’s) ನಲ್ಲಿ ಹೆಲ್ಪಿಂಗ್ ಸ್ಟಾಫ್ ಆಗಿ ಕೆಲಸ ಮಾಡಿದ್ದರು .

1994 ರಲ್ಲಿ ಟಿವಿ ಪರದೆಯ ಮೇಲೆ ಮಿಂಚಲು ಅವಕಾಶ ಸಿಕ್ಕಾಗ ಸ್ನೃತಿ ಇರಾನಿ ‘ಆತಿಶ್’, ‘ಹಮ್ ಹೈ ಕಲ್ ಆಜ್ ಔರ್ ಕಲ್’ ಧಾರವಾಹಿಗಳಲ್ಲಿ ಪಾತ್ರ ನಿರ್ವಹಿಸುವುದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಬಂದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥೀ’ ಧಾರವಾಹಿ ಮೂಲಕ ಸ್ನೃತಿ ಇರಾನಿ ಹೆಂಗಳೆಯರ ಮನಗೆದ್ದು ಮನೆಮತಾಗಿದ್ದು ಇತಿಹಾಸ.

ನಂತರ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಸ್ಮೃತಿ ಇರಾನಿ 1998 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಗಳ ವರೆಗೂ ಪೈಪೋಟಿ ನೀಡಿದ್ದರು

2003 ರಲ್ಲಿ ಭಾರತೀಯ ಜನತಾ ಪಕ್ಷವನ್ನ ಸೇರಿದ ಸ್ಮೃತಿ 2004 ರಲ್ಲಿ ಮಹಾರಾಷ್ಟ್ರದ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು.

ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಮೃತಿ ಪಾರಸಿ ಸಮುದಾಯದ ಜುಬೇನ್ ಇರಾನಿಯವರನ್ನ ಮದುವೆಯಾದರು.

2014 ರಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ಮೃತಿ ಇರಾನಿ ತನ್ನ ಸಭೆ ಸಮಾರಂಭಗಳಲ್ಲಿ ಹೆಂಗಳೆಯರಿಗೆ ಕೇಸರಿ ಸೀರೆಯನ್ನುಟ್ಟುಕೊಳ್ಳುವಂತೆ ಮಾಡಿ ಇಡೀ ಪ್ರಚಾರವನ್ನು ಕೇಸರಿಕರಣಗೊಳಿಸಿದ್ದು ಅದ್ಭುತ ದೃಶ್ಯವೇ ಸರಿ

ಮುಂದೆ ಮೇ 26, 2014 ರಂದು ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಸ್ಮೃತಿ‌ ಇರಾನಿ HRD ಮಿನಿಸ್ಟ್ರಿಯ ಸಚಿವೆಯಾಗಿ ಕಾರ್ಯ ನಿರ್ವಹಿಸಿ‌ ಸದ್ಯ ಮಾಹಿತಿ ಮತ್ತು ಪ್ರಸಾರ ಹಾಗು ಜವಳಿ ಖಾತೆಯನ್ನ ನಿರ್ವಹಿಸುತ್ತಿದ್ದಾರೆ.

Vinod Hindu Nationalist

Nationalist Views ©2018 Copyrights Reserved

 •  
  4.1K
  Shares
 • 4.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com