Connect with us
Loading...
Loading...

ಅಂಕಣ

ತಾಜ್ ಮಹಲ್ ನ ರಹಸ್ಯ ಬೇಧಿಸಿದ ಸಂಶೋಧಕ. ವಿವಾದಕ್ಕೆ ಸಿಕ್ಕಿತಾ ಹೊಸ ಟ್ವಿಸ್ಟ್. ಯೋಗಿಜಿಯಿಂದ ತಾಜ್ ಮಹಲ್ ತೇಜೋಮಹಾಲಯವಾಗುತ್ತಾ?

Published

on

  • 5.5K
  •  
  •  
  •  
  •  
  •  
  •  
  •  
    5.5K
    Shares

ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಲೇ ಇಡೀ ಭಾರತ ಖುಷಿ ಪಟ್ಟಿತ್ತು. ಒಬ್ಬ ಸಂತ ರಾಜಕೀಯ ಗದ್ದುಗೆಯ ಮೇಲೆ ಕೂತು ಸನಾತನ ಧರ್ಮವನ್ನು ರಕ್ಷಿಸುತ್ತಾರೆಂದು. ರಾಜಕೀಯ ಗದ್ದುಗೆಗೆ ಏರಿದರೆ ಕೈಯಲ್ಲಿ ಅಧಿಕಾರ ಇರುತ್ತದೆ. ಹೀಗಾಗಿ ಸನಾತನ ಧರ್ಮವನ್ನು ಯೋಗಿಜಿ ಕಾಪಾಡುತ್ತಾರೆ ಎಂದು ಇಡೀ ಹಿಂದೂ ಸಮಾಜ ಖುಷಿ ಪಟ್ಟಿತ್ತು.

ಬರೀ ಹಿಂದೂ ಸಮಾಜ ಮಾತ್ರವಲ್ಲದೆ ಉತ್ತರ ಪ್ರದೇಶದ ಮುಸಲ್ಮಾನರು ಖುಷಿ ಪಟ್ಟಿದ್ದರು. ಯಾಕೆ ಅಂದ್ರೆ ಅವರಿಗೆ ಯೋಗಿಜಿಯ ಬಗ್ಗೆ ಗೊತ್ತಿತ್ತು. ಗೋರಖ ಪುರದಲ್ಲಿದ್ದ ಯೋಗಿಜಿ ಯಾವ ಧರ್ಮದ ದ್ವೇಷಿಯೂ ಅಲ್ಲ ಎಂಬುದು ಗೊತ್ತಿತ್ತು. ಆದ್ದರಿಂದಲೆ ಯೋಗಿಜಿಗೆ ಹಾರೈಸಿದರು.

ತಾಜ್ ಮಹಲ್ ನ ಬಗೆಗೆ ಒಂದಷ್ಟು ನಿರ್ಧಾರಗಳನ್ನು ಯೋಗೀಜಿ ನೇತೃತ್ವದ ಸರ್ಕಾರ ತೆಗೆದುಕೊಂಡಿತ್ತು. ತಾಜ್ ಮಹಲ್ ನ್ನು ಉತ್ತರ ಪ್ರದೇಶದ ಸರ್ಕಾರ ಪ್ರವಾಸೋಧ್ಯಮ ಇಲಾಖೆಯಿಂದ ಕೈಬಿಟ್ಟಿತ್ತು. ಇದಕ್ಕೆ ಯಾರೂ ಕೋಪ ಮಾಡಿಕೊಳ್ಳುವಂತಿಲ್ಲ. ಯಾಕೆ ಗೊತ್ತಾ? ಅದು ದಾಸ್ಯದ ಕುರುಹು. ಹಿಂದೂ ದೇವಾಲಯವಾಗಿದ್ದದ್ದನ್ನು ತಾಜ್ ಮಹಲ್ ಆಗಿ ಮಾಡಿದ್ದು ದಾಸ್ಯದ ಕುರುಹು ಅಲ್ಲದೆ ಮತ್ತಿನ್ನೇನು?

ತಾಜದ ಮಹಲ್ ತೇಜೋಮಹಾಲಯವಾಗಿತ್ತು ಅನ್ನೋಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಅನೇಕ ಸಂಶೋಧಕರು ತಾಜ್ ಮಹಲ್ ನ ರಹಸ್ಯವನ್ನು ಬೇಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರೊಫೆಸರ್ ಪಿ.ಎನ್. ಓಕ್ ಅವರು ಕೂಡಾ ತಾಜ್ ಮಹಲ್ ತೇಜೋಮಹಾಲಯವಾಗಿತ್ತು ಎಂದು ಅವರ ಸಂಶೋಧನೆಯಿಂದ ಬಯಲಿಗೆಳೆದಿದ್ದಾರೆ.

ಅನೇಕರ ಸಂಶೋದಕರು ತಾಜ್ ಮಹಲ್ ತೇಜೋಮಹಾಲಯವಾಗಿತ್ತು ಅನ್ನೋದನ್ನು ಬೇಧಿಸಿದ್ದಾರೆ. ಅದರಲ್ಲಿ ಪ್ರೊಫೆಸರ್ ಪಿ.ಎನ್. ಓಕ್ ಅವರು ಪ್ರಮುಖರು. ಪಿ.ಎನ್. ಓಕ್ ಅವರು ತಾಜ್ ಮಹಲ್ ನ ಕುರಿತು ಸಂಶೋಧನೆ ಮಾಡಿ, ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು ತಾಜದ ಮಹಲ್. ಆ ಪುಸ್ತಕದಲ್ಲಿ ತಾಜ್ ಮಹಲ್ ಒಂದು ಹಿಂದೂ ದೇವಾಲಯವಾಗಿತ್ತು, ಅಲ್ಲಿ ಶಿವನೆಪೂಜಿಸುತ್ತಿದ್ದರೆಂದು ತಮ್ಮ ತಾಜ್ ಮಹಲ್ ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಚ್ವಿಟ್ಟಿದ್ದಾರೆ.

ಪಿ.ಎನ್.ಓಕ್ ರ ತಾಜ್ ಮಹಲ್ ಪುಸ್ತಕದ ಉಲ್ಲೇಖದ ಪ್ರಕಾರ ತಾಜ್ ಮಹಲ್ ಎಂಬುದು ಮುಮ್ತಾಜಳ ಗೋರಿಯಲ್ಲ ಬದಲಿಗೆ ಅದೊಂದು ಹಿಂದೂ ದೇವಾಲಯವಾಗಿತ್ತು. ಆ ದೇವಾಲಯದಲ್ಲಿ ಶಿವನನ್ನು ಪೂಜಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.

ಪಿ.ಎನ್.ಓಕ್ ರು ಹಾಗೆ ಮುಂದುವರೆಯುತ್ತಾ ಇಂದು ತಾಜ್ ಮಹಲ್ ಎಂದು ಕರೆಯಲ್ಪಡುವ ತೇಜೋ ಮಹಲ್( ಶಿವನ ದೇವಾಲಯ)ವನ್ನು ಶಹ ಜಹಾನ್ ಅಂದಿನ ಜೈಪುರುದ ರಾಜನಾಗಿದ್ದ ಜೈ ಸಿಂಗ್ ನಿಂದ ಕಿತ್ತುಕೊಂಡಿದ್ದ.

ಜೈಪುರದ ರಾಜ ಜೈ ಸಿಂಗ್ ನಿಂದ ಕಿತ್ತುಕೊಂಡಿದ್ದರ ಬಗ್ಗೆ ಷಹ ಜಹಾನ್ ತನ್ನ “ಬಾದಶಹನಾಮ“ದಲ್ಲಿ ಉಲ್ಲೇಖಿಸಿದ್ದಾನೆ. ಇಲ್ಲಿ “ಬಾದಶಹನಾಮ” ಅಂದ್ರೆ ಶಹ ಜಹಾನ್ ತನ್ನ ದಾಖಲೆಗಳನ್ನು ಬರೆದಿಡುತ್ತಿದ್ದ ಒಂದು ಹೊತ್ತಿಗೆ(file). ತೇಜೋ ಮಹಾಲಯವನ್ನು ನನಗೆ ಒಪ್ಪಿಸಿ ಶರಣಾಗು ಎಂದು ಶಹ ಜಹಾನ್ ರಾಜಾ ಜೈ ಸಿಂಗ್ ನಿಗೆ ಪತ್ರ ಬರೆದಿದ್ದನಂತೆ. ಅದರ ಕುರಿತಾದ ದಾಖಲೆಗಳು ಈಗಲೂ ರಹಸ್ಯ ಸಂಗ್ರಹಣೆಯಲ್ಲಿ ಇವೆ ಎಂದು ಹೇಳಲಾಗುತ್ತಿದೆ.

ಆಗ ಮುಸ್ಲಿಂ ಆಢಳಿತದಲ್ಲಿ ಒಂದು ವಿಚಿತ್ರ ಪದ್ದತಿ ಇತ್ತು. ಅದೇನೆಂದರೆ ಮುಸ್ಲಿಂ ದೊರೆಗಳು ತಾವು ದಾಳಿ ಮಾಡಿ ವಶಪಡಿಸಿಕೊಂಡ ಅರಮನೆಗಳನ್ನು ಸತ್ತ ಪ್ರಜೆಗಳ ಶವ ಸಂಸ್ಕಾರಕ್ಕಾಗಿ ಬಳಸುತ್ತಿದ್ದರು. ಹಾಗೆಯೇ ತೇಜೋ ಮಹಾಲಯವನ್ನು ಶಹ ಜಹಾನ್ ವಶಪಡಿಸಿಕೊಂಡು ತನ್ನ ಹೆಂಡತಿ ಮುಮ್ತಾಜಳ ಗೋರಿ ಕಟ್ಟಲು ಬಳಸಿದ ಎಂದೇ ಹೇಳಬಹುದು.

ಪ್ರೊಫೆಸರ್ ಪಿ.ಎನ್. ಓಕ್ ಅವರು ಹೇಳ್ತಾರೆ. ಸಾಮಾನ್ಯವಾಗಿ ಮುಸ್ಲಿಂ ರಾಷ್ಟ್ರಗಳ ಉದಾಹರಣೆ ತೆಗೆದುಕೊಂಡರೆ ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿ ಕಟ್ಟಡವನ್ನು “ಮಹಲ್” ಎಂದು ಕರೆಯೋದಿಲ್ಲ. ಹಾಗಾದರೆ ತಾಜ್ ಗೆ ಮಹಲ್ ಎಂಬ ಹೆಸರು ಹೇಗೆ ಬಂತು? ಕೆಲ ಸುಳ್ಳು ಇತಿಹಾಸಕಾರರು ಹೇಳುವ ಪ್ರಕಾರ “ತಾಜ್ ಮಹಲ್ “ ಎನ್ನುವ ಪದವು “ “ಮುಮ್ತಾಜ್ ಮಹಲ್ “ ಎನ್ನುವ ಪದದಿಂದ ಬಂದಿದೆ ಎಂದು ಹೇಳುತ್ತಾರೆ. ಆ ಸುಳ್ಳು ಇತಿಹಾಸಕಾರರ ಈ ಸುಳ್ಳನ್ನು ಪ್ರೊಫೆಸರ್ ಓಕ್ ಅವರು ತಮ್ಮ ವಾದಗಳಿಂದ ಬಯಲಿಗೆಳೆಯುತ್ತಾರೆ.

ಸುಳ್ಳು ಇತಿಹಾಸಕಾರರು ಮುಮ್ತಾಜಳ ನಿಜವಾದ ಹೆಸರು “ಮುಮ್ತಾಜ್-ಉಲ್- ಝಮಾನಿ“ ಹೀಗಾಗಿ ಮುಮ್ತಾಜ್ ಮಹಲ್ ಹೆಸರಿನಿಂದ ತಾಜ್ ಮಹಲ್ ಹೆಸರು ಬಂತೆಂದು ಹೇಳುತ್ತಾರೆ. ಅದಕ್ಕೆ ಪ್ರೊಫೆಸರ್ ಓಕ್ ಅವರು (ಮುಮ್ತಾಜ್) ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎಂದಿಡುತ್ತಾರೆಯೇ? ಎಂಬ ಪ್ರಶ್ನೆಯನ್ನು ಪ್ರೊಫೆಸರ್ ಓಕ್ ಅವರು ಕೇಳುತ್ತಾರೆ. ಇದಕ್ಕೆ ಸುಳ್ಳು ಇತಿಹಾಸಕಾರರು ಬೆಪ್ಪನಂತೆ ವಾದ ಮಂಡಿಸಲಾಗದೆ ಓಡಿ ಹೋಗುತ್ತಾರೆ.

ತಾಜ್ ಮಹಲ್ ಎಂಬ ಹೆಸರು ತೇಜೋ ಮಹಾಲಯದ ವಿಕೃತ ಹೆಸರು. ಅದು ಬಿಟ್ಟು ಬೇರೇನೂ ಇಲ್ಲ. ಶಹ ಜಹಾನ್ ತೇಜೋ ಮಹಾಲಯದ ಮೇಲೆ ದಾಳಿ ಮಾಡಿ ಅದಕ್ಕೆ ತಾಜ ಮಹಲ್ ಎಂಬ ಹೆಸರಿಟ್ಟದ್ದಾನೆ ಅಷ್ಟೇ.

ಇನ್ನೊಂದು ಮಹತ್ವ ವಿಚಾರ ಹೇಳಲೇಬೇಕು‌. ಸುಳ್ಳು ಇತಿಹಾಸಕಾರರು ಹೇಳುವಂತೆ ತಾಜ್ ಮಹಲ್ ಒಂದು ಪೇಮ ಸೌಧ. ಅದು ಮುಮ್ತಾಜ್ ಮತ್ತು ಶಹ ಜಹಾನ್ ರ ಪ್ರೇಮಕ್ಕೆ ಸಾಕ್ಷಿ. ಆದರೆ ಶಹ ಜಹಾನನ ಕಾಲದ ಅವನ ಆಸ್ಥಾನದ ಯಾವುದೇ ದಾಖಲೆಗಳಲ್ಲಿ. ಅಂದ್ರೆ ಕೆಲ ಸುಳ್ಳು ಇತಿಹಾಸಕಾರರು ಇತಿಹಾಸವನ್ನು ಮುಚ್ಚಿ ಹಾಕಲು ಕಥೆ ಕಟ್ಟಿದ್ದಾರೆ.

ತಾಜ್ ಮಹಲ್ ತೇಜೋಮಹಲ್ ಹೊರತು ಬೇರೇನೂ ಅಲ್ಲ. ಅಲ್ಲಿ ಶಿವನನ್ನು ಆರಾಧಿಸುತ್ತಿದ್ದರು. ತೇಜೋಮಹಲ್ ದಾಳಿಗೊಳಗಾಗಿ ತಾಜ್ ಮಹಲ್ ಆಗಿದೆ ಎಂಬುದಕ್ಕೆ ಹಲವಾರು ದಾಖಲೆಗಳನ್ನು ಪ್ರೊಫೆಸರ್ ಓಕ್ ಅವರು ನೀಡುತ್ತಾರೆ. ಉದಾಹರಣೆಗೆ,

1.ನ್ಯೂಯಾರ್ಕಿನ ಪ್ರೊಫೆಸರ್ ಮರ್ವಿನ್ ಮುಲ್ಲರ್ ಎಂಬುವರು ತಾಜ್ ಮಹಲ್ ಕಟ್ಟಡದ ಬಾಗಿಲಿನ ಅವಶೇಷಗಳನ್ನು ತೆಗೆದುಕೊಂಡು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿಂತ 300 ವರ್ಷ ಪುರಾತನದ್ದು ಎಂದು ಸಾಬೀತಾಗಿದೆ. ಇದರರ್ಥ ತಾಜ್ ಮಹಲ್ ಆಗುವ 300 ವರ್ಷಗಳ ಮುಂಚೆ ಅಲ್ಲೊಂದು ಕಟ್ಟಡವಿತ್ತು .ಅದು ಬೇರಾವುದು ಅಲ್ಲ “ತೇಜೋಮಹಲ್”.

2.ಯುರೋಪ್ ಪ್ರವಾಸಿಗನೊಬ್ಬ ಮುಮ್ತಾಜಳ ಸಾವಿನ ಕೇವಲ ಏಳು ವರ್ಷಗಳ ನಂತರ ಅಂದರೆ 1638ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ್ದ. ಆ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಪ್ರವಾಸದ ಬಗ್ಗೆ, ಸ್ಥಳದ ಬಗ್ಗೆ, ಜನ-ಜೀವನದ ಬಗ್ಗೆ ಬರೆದು ಕೊಂಡಿದ್ದಾನೆ. ಆದರೆ ಅವನು ಬರೆದುಕೊಂಡ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಉಲ್ಲೇಖಿಸಿಲ್ಲ. ಇದರರ್ಥ ಅಲ್ಲಿ ಆಗ ತಾಜ್ ಮಹಲ್ ಇರಲೇ ಇಲ್ಲ.

3.ಬ್ರಿಟೀಷ್ ಪ್ರವಾಸಿಗ ಪೀಟರ್ ಮುಂಡೆ ಆಗ್ರಾಕ್ಕೆ ಮುಮ್ತಾಜ್ ಮರಣದ ಒಂದು ವರ್ಷದೊಳಗೆ ಭೇಟಿ ನೀಡಿದ್ದ. ಆತ ತನ್ನ ಟಿಪ್ಪಣಿಯಲ್ಲಿ ಶಹ ಜಹಾನ್ ಸಮಯಕ್ಕಿಂತ ಮೊದಲಿನಿಂದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆಂಬುದನ್ನು. ಉಲ್ಲೇಖಿಸುತ್ತಾನೆ. ಶಹ ಜಹಾನ್ ನ ಮುಂಚೆ ಅಲ್ಲೊಂದು ಕಟ್ಟಡವಿತ್ತು ಅದುವೆ ತೇಜೋ ಮಹಲ್.

ತಾಜ್ ಕಟ್ಟಡ ಹಿಂದೂ ದೇವಾಲಯವಾಗಿತ್ತು ಎನ್ನುವುದಕ್ಕೆ ಆ ಕಟ್ಟಡದಲ್ಲಿ ಇಂದಿಗೂ ಅನೇಕ ಹಿಂದೂ ಸಂಪ್ರದಾಯದ ಸಾಕ್ಷಿಗಳಿವೆ.

1) ತಾಜ್ ಕಟ್ಟಡದ ಗುಮ್ಮಟದ ಮೇಲೆ ಕಲಶದ ಚಿತ್ರವಿದೆ. ಸಭಾಂಗಣದ ಗೋಡೆಯಲ್ಲೂ ಕಲಶದ ಚಿತ್ರ ಬಿಡಿಸಲಾಗಿದೆ. ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆಂಪು ಕಮಲದ ಚಿತ್ರವಿದೆ. ಗೋಡೆಗಳ ಮೇಲೆ ಬರೆಯಲಾದ ಹೂಗಳ ಚಿತ್ರ ಬಿಡಿಸಲಾಗಿದೆ. ಅದು ಅಲ್ಲದೆ ಆ ಹೂಗಳ ಚಿತ್ರದ ನಡುವೆ “ ಓಂ“ ಸಂಕೇತವೂ ಇದೆ. ಈ ಎಲ್ಲಾ ಕುರುಹುಗಳು ವೈದಿಕ ಶೈಲಿಯ ರೂಪದಲ್ಲಿವೆ. ಹಾಗಾದರೆ ತಾಜ್ ಮಹಲ್ ವೈದಿಕ ದೇವಾಲಯವೆಂದಾಯ್ತಲ್ವಾ? ಅದು ತಾಜ್ ಮಹಲದ ಅಲ್ಲ ತೇಜೋಮಹಲ್(ಶಿವನ ದೇವಾಲಯ).

2) ತಾಜ್ ಕಟ್ಟಡದ ಕೆಲವು ಕೋಣೆಗಳನ್ನು ಇವತ್ತಿಗೂ ಬೀಗ ಹಾಕಲಾಗಿದೆ. ಅವುಗಳು ಶಹ ಜಹಾನನ ಕಾಲದಿಂದಲೂ ಬೀಗ ಹಾಕಲ್ಪಟ್ಟಿದ್ದು,ಇವಾಗಲೂ ಬೀಗ ಹಾಗೆಯೇ ಇವೆ. ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗೆ ಇರುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೋಣೆಯೊಳಗಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಇದೆ. ಪ್ರೊಫೆಸರ್ ಓಕ್ ಅವರು ಹೇಳುವ ಪ್ರಕಾರ ಆ ಬೀಗ ಹಾಕಿರುವ ಕೋಣೆಗಳಲ್ಲಿ ಭಗ್ನಗೊಂಡ ಶಿವನ ಮೂರ್ತಿ ಹಾಗೂ ಹಿಂದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಇರಬಹುದು ಎಂದಿದ್ದಾರೆ.

ಪ್ರೊಫೆಸರ್ ಓಕ್ ಅವರ ಸಂಶೋಧನೆಯಿಂದ ತಾಜ್ ಮಹಲ್ ಇತಿಹಾಸ ಬೆಳಕಿಗೆ ಬರುತ್ತಿದೆ. ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ತಾಜ್ ಮಹಲ್ ಶಿವನ ದೇವಾಲಯವಾಗಿತ್ತೆಂದು ಸ್ಪಷ್ಠವಾಗಿ ಹೇಳಬಹುದು.

ಸುಮಾರು ಸಂಶೋಧನೆಗಳು ತಾಜ್ ಮಹಲ್ ತೇಜೋಮಹಾಲಯವಾಗಿತ್ತೆಂದು (ಶಿವನ ದೇವಾಲಯ) ಸಾಬೀತು ಮಾಡಿವೆ. ಪ್ರಖರ ಹಿಂದುವಾದಿ ಬೇರೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾರೆ. ಯೋಗಿಜಿಯಂದ ತಾಜ್ ಮಹಲ್ ತೇಜೋಮಹಾಲಯವಾಗುತ್ತಾ ಎಂದು ಕಾದು ನೋಡಬೇಕು.

Source : MissionISI – Blog

– Nationalist Mahi

  •  
    5.5K
    Shares
  • 5.5K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com