Connect with us
Loading...
Loading...

ಪ್ರಚಲಿತ

ಓಮನ್ ನಲ್ಲಿ ಮೋದಿಜೀ ಹೇಳಿದ ಆ 6 ಸೂತ್ರಗಳು ಯಾವು ಗೊತ್ತೆ?! ಅಲ್ಲಿ ಆದ 8 ಒಪ್ಪಂದಗಳ ಬಗ್ಗೆ ನಿಮಗೆಷ್ಟು ಗೊತ್ತು?!!

Published

on

 • 2
 •  
 •  
 •  
 •  
 •  
 •  
 •  
  2
  Shares

ಮೋದಿಯವರ ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ಕೊನೆಯ ಹಂತದಲ್ಲಿದೆ. ಮೊದಲು ಹೋಗಿದ್ದು ಇಸ್ಲಾಂ ರಾಷ್ಟ್ರದಲ್ಲಿ ಹಿಂದೂ ದೇವಾಲಯದ ಉದ್ಘಾಟನೆಗೆ. ಹೌದು ಇದು ಎಲ್ಲರಿಗೂ ಗೊತ್ತಿರುವ ಹಾಗೂ ಹೆಮ್ಮೆಯ ವಿಚಾರ. ಅಬುದಾಬಿಯಲ್ಲಿ ಹಿಂದೂ ದೇವಾಲಯದ ಶಂಕು ಸ್ಥಾಪನೆಯನ್ನು ನರೇಂದ್ರ ಮೋದಿಯವರು ಮುಗಿಸಿದ್ದಾರೆ.

ಫೆಬ್ರವರಿ 9ರಿಂದ 12ವರೆಗೆ ಪಶ್ಚಿಮ ಏಷ್ಯಾ ಪ್ರವಾಸದಲ್ಲಿರುವ ಮೋದಿಯವರು ಪ್ಯಾಲೆಸ್ತೇನ್‌, ಯುಎಇ ಮತ್ತು ಓಮನ್‌ಗೆ ಭೇಟಿ ನೀಡುವ ಯೋಜನೆ ಹಾಕಿ. ಫೆಬ್ರುವರಿ 9ಕ್ಕೆ ಅಬುದಾಬಿಗೆ ಹೋಗಿ ಹಿಂದೂ ದೇವಾಲಯದ ಶಂಕು ಸ್ಥಾಪನೆ ಮಾಡಿದ್ದರು. ಇದರ ಮೂಲಕ ಇಸ್ಲಾಂ ರಾಷ್ಟ್ರದಲ್ಲೂ ಶಂಖ, ಜಾಗಟೆ ಶಬ್ದ ಮೊಳಗುವಂತಾಗಿ, ಅಲ್ಲಿ ನೆಲೆಸಿರುವ ಹಿಂದುಗಳಿಗೆ ಈ ವಿಷಯವಂತೂ ತುಂಬಾ ಸಂತೋಷವನ್ನುಂಟು ಮಾಡಿರುತ್ತದೆ.

ಮೋದಿಯವರು ಪ್ರಧಾನಿಯಾದ ಬಳಿಕ 2015ರಲ್ಲಿ ಮೊದಲ ಬಾರಿಗೆ ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಅಬುದಾಬಿ ಸರ್ಕಾರ ಮೋದಿಯವರಿಗೆ ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣದ ಕುರಿತು ಭರವಸೆ ಕೊಟ್ಟು, ದೇವಸ್ಥಾನ ನಿರ್ಮಾಣಕ್ಕೆ ಅಲ್ಲಿನ ಸರಕಾರ ಅಬು ದಾಬಿಯಲ್ಲಿ ಜಾಗವನ್ನು ಗೊತ್ತು ಮಾಡಿತ್ತು. ಗೊತ್ತು ಮಾಡಿದ ಆ ಜಾಗ ಬರೋಬ್ಬರಿ 20,000 ಚದರ ಮೀಟರ್‌ ದೊಡ್ಡದಾಗಿತ್ತು. ಆ ಭರವಸೆಯಂತೆ ಈಗ ದೇವಾಲಯದ ಶಂಕು ಸ್ಥಾಪನೆಗೆ ಮೋದಿಯವರನ್ನು ಕರೆಸಿತ್ತು. ಅತೀವ ಗೌರವದಿಂದ ಮೋದಿಯವರನ್ನು ಅಬುದಾಬಿಯ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸ್ವಾಗತಿಸಿದ್ದರು.

ಮೋದಿಯವರ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ದುಬೈಯ ಪ್ರಸಿದ್ಧ ಕಟ್ಟಡಗಳು ಶುಕ್ರವಾರ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿದ್ದವು. ಜಗತ್ತಿನ ಅತೀ ಹೆಚ್ಚು ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ, ತೈಲ ಕಂಪೆನಿ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ಒಸಿ) ಹಾಗು ಜಗತ್ತಿನ ಅತೀ ದೊಡ್ಡ ಪಿಕ್ಚರ್ ಫ್ರೇಮ್ ಎಂಬ ಖ್ಯಾತಿಯ ದುಬೈ ಫ್ರೇಮ್ ಭಾರತದ ಧ್ವಜದ ಮೂರು ಬಣ್ಣಗಳಿಂದ ಕಂಗೊಳಿಸಿದ್ದವು. ಆ ವೇಳೆಯಲ್ಲಿ ಮಾತನಾಡಿದ ಮೋದಿಯವರು ಸುಮಾರು 30 ಲಕ್ಷಕ್ಕೂ ಅಧಿಕ ಮಂದಿಗೆ ಯುಎಇನಲ್ಲಿ ಸುರಕ್ಷಿತ ನೆಲೆ ಒದಗಿಸಿದ್ದಕ್ಕೆ ಅವರು ಧನ್ಯವಾದ ಸಮರ್ಪಿಸಿದ್ದರು.

ಫೆಬ್ರಯವರಿ 9ಕ್ಕೆ ಅಬುದಾಬಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದಲೇ ಪ್ಯಾಲೇಸ್ತೀನ್ ದೇಶಕ್ಕೆ ಭೇಟಿ ನೀಡಿದ್ದರು. ಪ್ಯಾಲೇಸ್ತೀನ್ ದೇಶ ಇಸ್ರೇಲಿನ ಬದ್ಧ ವೈರಿ ದೇಶ. ಇಸ್ರೇಲ್ ಜೊತೆ ಒಳ್ಳೆಯ ಸಂಭಂದವನ್ನಿಟ್ಟುಕೊಂಡಿರುವ ಮೋದಿಯವರು ಇಸ್ರೇಲಿನ ವೈರಿ ರಾಷ್ಟ್ರಕ್ಕೆ ಭೇಟಿ ನೀಡಿದ್ದು ಮಾತ್ರ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತ್ತು. ಭಾರತಕ್ಕೆ ಹೇಗೆ ಪಾಕಿಸ್ತಾನ ಪರಮ ಶತ್ರು ರಾಷ್ಟ್ರವೋ, ಹಾಗೆಯೇ ಇಸ್ರೇಲಿನ ಪರಮ ಶತ್ರು ರಾಷ್ಟ್ರ ಪ್ಯಾಲೇಸ್ತೀನ್.

ಆದೆ ಮೋದಿಯವರು ಇಸ್ರೇಲಿನ ಪರಮ ಶತ್ರು ರಾಷ್ಟ್ರಕ್ಕೆ ಭೇಟಿ ನೀಡಿದ್ದು. ಆ ಎರಡು ರಾಷ್ಟ್ರಗಳ ಸಂಭಂದವನ್ನು ವೃದ್ಧಿಗೊಳಿಸಲು. ಅಷ್ಟೇ ಯಾಕೆ ಮೋದಿಯವರು ಪ್ಯಾಲೇಸ್ತೀನ್ ಗೆ ಹೋಗುವಾಗ ಇಸ್ರೇಲ್ ರಕ್ಷಣೆಯೊಂದಿಗೆ ಹೋಗಿರೋದು ಸೋಜಿಗದ ಸಂಗತಿ. ಇತ್ತ ಜೋರ್ಡಾನ್, ಪ್ಯಾಲೇಸ್ತೀನ್ ಮತ್ತು ಇಸ್ರೇಲ್ ಮೂರು ರಾಷ್ಟ್ರಗಳು ಮೋದಿಯವರ ರಕ್ಷಣೆಗೆ ಕಟಿಬದ್ಧರಾಗಿದ್ದವು. ನಮ್ಮ ಮತ್ತು ಪಾಕಿಸ್ತಾನದ ನಡುವೆ ಜಮ್ಮು-ಕಾಶ್ಮೀರದ ವಿವಾದ ಹೇಗಿದೆಯೋ ಹಾಗೆಯೇ ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ನಡುವೆ ಜೆರುಸಲೇಮ್ ಪಟ್ಟಣದ ವಾದಗಳಿವೆ. ಆ ಜೆರಸಲೇಮ್ ತನಗೆ ಸೇರಬೇಕೆಂದು ಎರಡು ರಾಷ್ಟ್ರಗಳು ವಾದಿಸುತ್ತವೆ. ಇದರಿಂದಾಗಿ ಅವೆರಡು ರಾಷ್ಟ್ರಗಳು ಬದ್ಧ ವೈರಿಗಳು. ಹೀಗಾಗಿಯೇ ಅವೆರಡೂ ರಾಷ್ಟ್ರಗಳ ನಡುವೆ ಸಂಭಂದವನ್ನು ವೃದ್ಧಿಸಲು ಮೋದಿಯವರು ಪ್ರಯತ್ನಿಸಿದ್ದರು.

ಪ್ಯಾಲೇಸ್ತೀನ್ ಭೇಟಿ ಬಳಿಕ ಮೋದಿಯವರು ನೇರವಾಗಿ ಹೋಗಿದ್ದು ಓಮನ್ ಗೆ. ಈ ಭೇಟಿ ಕೊನೆಯ ಹಂತದ ಮಧ್ಯಪ್ರಾಚ್ಯ ದೇಶಗಳ ಪ್ರವಾಸ. ಓಮನ್ ಗೆ ಭೇಟಿ ನೀಡಿದ್ದು ಒಂದೊಳ್ಳೆ ಉದ್ದೇಶದಿಂದಲೇ. ಓಮನ್ ನ ಅಧ್ಯಕ್ಷ ಸುಲ್ತಾನ್​ ಖಾಬೂಸ್​ ಬಿನ್​ ಸೈದ್​ ಅಲ್​ ಸೈದ್​ ಅವರೊಂದಿಗೆ ಮೋದಿಯವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ಯಾಲೇಸ್ತೀನ್ ಪ್ರವಾಸ ಮುಗಿಸಿದ ಮೋದಿಯವರು ರವಿವಾರ ಓಮನ್ ಗೆ ತಲುಪಿ ಅಲ್ಲಿ ಸುಲ್ತಾನ್​ ಖಾಬೂಸ್​ ಬಿನ್​ ಸೈದ್​ ಅಲ್​ ಸೈದ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಆ ಮಾತುಕತೆಯಲ್ಲಿ ಬಂಡವಾಳ ಹೂಡಿಕೆ, ಇಂಧನ, ರಕ್ಷಣೆ ಮತ್ತು ಸುರಕ್ಷಣೆ, ಆಹಾರ ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಚರ್ಚೆಯಾಗಿದೆ.

ಅದೇ ವೇಳೆಯಲ್ಲಿ ಭಾರತ ಮತ್ತು ಓಮನ್ ನಡುವೆ 8 ಒಪ್ಪಂಗಳಿಗೆ ಸಹಿ ಬಿದ್ದಿವೆ. ಆ ಒಪ್ಪಂದಗಳಲ್ಲಿ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಕಾನೂನಾತ್ಮಕ ಸಹಕಾರ ನೀಡುವುದು, ಆರೋಗ್ಯ, ಪ್ರವಾಸೋದ್ಯಮ, ರಾಜತಾಂತ್ರಿಕ ಮತ್ತು ವಿಶೇಷ ಪಾಸ್​ಪೋರ್ಟ್​ ಹೊಂದಿರುವವರಿಗೆ ವೀಸಾ ನಿಯಮಾವಳಿಗಳನ್ನು ಸಡಿಲಿಸುವ ವಿಷಯ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತಾನಡಿದ ಮೋದಿಯವರು, ಭಾರತದ ಶೇ.65 ಜನಸಂಖ್ಯೆಯು 35ರ ವಯೋಮಿತಿಯ ಒಳಗೆ ಇದೆ. ಈ ಯುವಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸಿ ‘ನವ ಭಾರತ’ ಸೃಷ್ಟಿಸಲು ಸಾಧ್ಯವೆಂದು ಹೇಳಿದ್ದಾರೆ. ಇದೇ ವೇಳೆ ಅಭಿವೃದ್ಧಿಗಾಗಿ ಆರು ‘ಆರ್’ಗಳ ಸೂತ್ರವನ್ನು ಮೋದಿ ಹೇಳಿದರು.

ಓಮನ್ ನಲ್ಲಿ ಭಾನುವಾರ ನಡೆದ ವಿಶ್ವ ಸರ್ಕಾರಿ ಶೃಂಗದಲ್ಲಿ ಪ್ರಧಾನ ಭಾಷಣ ಮಾಡಿದ ಮೋದಿಯವರು, ರೆಡ್ಯೂಸ್ (ಕಡಿಮೆ ಬಳಕೆ), ರೀ ಯೂಸ್ ಹಾಗೂ ರೀಸೈಕಲ್ (ಮರುಬಳಕೆ), ರಿಕವರ್ (ಮರುವಶ), ರೀಡಿಸೈನ್ (ಮರು ವಿನ್ಯಾಸ), ರೀ ಮ್ಯಾನುಫ್ಯಾಕ್ಚರ್ (ಮರು ಉತ್ಪಾದನೆ) ಎಂಬುದೇ ಈ 6 ‘ಆರ್’ ಮಂತ್ರಗಳು. ಇವುಗಳು ನಿಮಗೆ ‘ಆನಂದ’ ತರುತ್ತವೆ ಎಂದು ಪ್ರಧಾನಿ ಮೋದಿಯವರು ಅಲ್ಲಿನ ಭಾರತೀಯರನ್ನು ಕುರಿತು ಹೇಳಿದ್ದಾರೆ. ಹಾಗೆಯೇ ಅಲ್ಲಿನ ಜನಸಾಗರವನ್ನು ಕಂಡು ಇಂದು ಒಮನ್ ನಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.

ಒಟ್ಟಿನಲ್ಲಿ ಮೋದಿಯವರು ವಿದೇಶ ಪ್ರವಾಸ ಮಾಡುತ್ತಿರುವುದು ಸುಖಾ ಸುಮ್ಮನೆ ಅಲ್ಲ. ಪ್ರತಿ ವಿದೇಶ ಪ್ರವಾಸದಲ್ಲೂ ಒಂದಷ್ಟು ಒಪ್ಪಂದಗಳು ಹಾಗೂ ಯೋಜನೆಗಳನ್ನು ಮಾಡುತ್ತಿದ್ದಾರೆ.

– Team Nationalist Views

©2018 Copyrights Reserved

 •  
  2
  Shares
 • 2
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com