Connect with us
Loading...
Loading...

ಪ್ರಚಲಿತ

ತನಗೆ ತಕ್ಕಂತೆ ಕಾಂಗ್ರೆಸ್ಸನ್ನ ಮೋದಿಜೀ ಈ ರೀತಿ ಕುಣಿಸುತ್ತಿದ್ದಾರೆ!!! ಹೇಗೆ ಗೊತ್ತಾ?

Published

on

 • 5
 •  
 •  
 •  
 •  
 •  
 •  
 •  
  5
  Shares

ಮೊದಲ ಬಾರಿಗೆ ಕಾಂಗ್ರೆಸ್ಸನ್ನು ತನ್ನ ಇಚ್ಛೆಗೆ ತಕ್ಕಂತೆ ಕುಣಿಸಬಲ್ಲ ಶಕ್ತಿಯೊಂದು ಉದಯಿಸಿದೆ. ಅದು ನರೇಂದ್ರ ಮೋದಿಯವರ ರೂಪದಲ್ಲಿ.

ಮೊದಲ ಬಾರಿಗೆ ಕಾಂಗ್ರೆಸ್ಸಿಗೆ ನಡುಕ ಶುರುವಾಗಿದ್ದು ಕಳೆದ ಚುನಾವಣೆಯಲ್ಲಿ ಮೋದಿಯವರು ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆಯಾದಾಗ. ತಮಗೆ ಸವಾಲಾಗಬಹುದಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ.

ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಡಿತ್ತು. ಅಟಲ್ ಬಿಹಾರಿ ವಾಜಪೇಯಿರವರನ್ನು ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಮಾತ್ರ ಪಕ್ಕಾ ಪತರುಗುಟ್ಟಿದೆ.

ಈಗ ಅದಕ್ಕೊಂದು ಸಮರ್ಥ ಸವಾಲು ಎದುರಾಗಿದೆ. ತಮ್ಮ ಪ್ರತಿಯೊಂದು ದಾಳಿಯನ್ನು ಮೊದಲೇ ಊಹಿಸಿ ಅದಕ್ಕೆ ಪೂರ್ವ ನಿಯೋಜಿತ ಪ್ರತಿದಾಳಿ ರೂಪಿಸುವ ನರೇಂದ್ರ ಮೋದಿಯನ್ನು ಹೇಗೆ ಎದುರಿಸುವುದೆಂಬ ತಿಣುಕಾಟ ಪ್ರತಿ ಕಾಂಗ್ರೆಸ್ಸಿಗರ ಮುಖದಲ್ಲೂ ಎದ್ದು ಕಾಣುತ್ತಿದೆ.

ಕೆಲವರು ಪೂರ್ವ ಪುಣ್ಯದಿಂದ ನಾಯಕರಾಗಿ ಬಿಡುತ್ತಾರೆ. ಕೆಲವರು ನಾಯಕರಾಗಿ ಆಳಲೆಂಬ ಹಂಬಲ ಸಮಾಜದಿಂದ ಕೇಳಿಬರುತ್ತದೆ. ಇನ್ನೂ ಕೆಲವರು ಮಾತ್ರ ಭಗವಂತನ ಇಚ್ಛೆಯಿಂದ ನಾಯಕರಾಗಿ ದೀರ್ಘಕಾಲ ಧರೆಗೆ ಒಡೆಯರಾಗುತ್ತಾರೆ.

ಚಂದ್ರಗುಪ್ತನಂಥವರ ಬಳಿ ಯಾವ ಹಿನ್ನಲೆಯೂ ಇರಲಿಲ್ಲ. ಭಗವಂತನ ಇಚ್ಛೆಯಿಂದಲೇ ಆತ ಚಕ್ರವರ್ತಿಯಾದ. ಶಿವಾಜಿ ಮಹಾರಾಜರು ಛತ್ರಪತಿಯಾಗಲೆಂದು ಕನಸನ್ನು ಕಾಡಿನ ಜನರು ಕಂಡಿದ್ದರು.

ಹಾಗೆ ನೋಡಿದರೆ ಮೋದಿಯವರಿಗೆ ಈ ಮೂರು ಇದೆ. ಟೀ ಮಾರುತ್ತಿದ್ದ ಹುಡುಗ ಗದ್ದುಗೆಯೇರಿ ಕುಳಿತ. ಅದು ಪೂರ್ವಸುಕೃತ. ಜಾತಿ-ಮತ-ಪಂಥಗಳನ್ನು ಮರೆತು ಜನ ಒಕ್ಕೊರಲಿಂದ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಇದು ದೈವೆಚ್ಛೆಯೂ ಆಗಿತ್ತು.

ಕೆಲವರಿಗೆ ಯೋಗ್ಯತೆಯೇ ಇರದಿದ್ದರೂ ನಾಯಕರಾಗಿ ಬಿಡುತ್ತಾರೆ . ಅಂತಹ ಸಾಲಿನಲ್ಲಿ ಬರುವವರು ನೆಹರು ಕುಟುಂಬದವರು. ನೆಹರೂರಿಂದ ಶುರುಮಾಡಿ ಈಗಿನ ಗಾಂಧಿ ಕುಟುಂಬದವರೆಗೆ ಸ್ವಯಾರ್ಜಿತವೇನೂ ಇಲ್ಲ. ಪೂರ್ವಸುಕೃತವಷ್ಟೇ. ನಾಯಕರಾಗಿಬಿಟ್ಟರು. ಅಸಲಿಗೆ ನೆಹರೂ ಅವರಲ್ಲಿಯೂ ನಾಯಕತ್ವದ ಗುಣವಿರಲಿಲ್ಲ ಅರ್ಥಾತ್ ಯೋಗ್ಯತೆ ಇರಲಿಲ್ಲ. ಆದರೂ ನಮ್ಮ ದೌರ್ಭಾಗ್ಯ ಅವರೇ ನಮ್ಮ ಮೊದಲ ಪ್ರಧಾನಿಯಾದರು.

ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಭಾರತೀಯರು ನೆಹರೂ ಅವರನ್ನು ಪ್ರಧಾನಿ ಅಂತ ಒಪ್ಪಿಕೊಂಡರೇ ಹೊರತು ಬೇರೆ ಕಾರಣವೇ ಇಲ್ಲ. ನೆಹರೂ ಅವರು ಭಾರತದ ಮೊದಲ ಪ್ರಧಾನಿಯಾಗಿದ್ದಕ್ಕೆ ನಾವು ಇಂದಿಗೂ ಅನುಭವಿಸತ್ತಿದ್ದೇವೆ.

ಜಗತ್ತಿನ ಮುಂದೆ ತಲೆ ಎತ್ತಲು ತಿಣುಕಾಡುತ್ತಿದ್ದೇವೆ. ನೆಹರೂ ನಂತರ ಇಂದಿರಾ ಗಾಂಧಿಯವರು ನಾಯಕತ್ವವನ್ನು ವಹಿಸಿಕೊಂಡರು. ಇಂದಿರಾ ಗಾಂಧಿಯವರ ನಂತರ ಸಂಜಯ್ ಗಾಂಧಿ , ಸಂಜಯ್ ಗಾಂಧಿ ನಂತರ ರಾಜೀವ್ ಗಾಂಧಿ , ರಾಜೀವ್ ಗಾಂಧಿ ನಂತರ ಸೋನಿಯಾ ಗಾಂಧಿ , ಸೋನಿಯಾ ಗಾಂಧಿ ನಂತರ ರಾಹುಲ್ ಗಾಂಧಿ.

ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ತನ್ನ ಇಚ್ಛೆಗೆ ತಕ್ಕಂತೆ ಕುಣಿಸಬಲ್ಲ ಶಕ್ತಿಯೊಂದು ಉದಿಸಿದೆ ಅದು ನರೇಂದ್ರ ಮೋದಿ ರೂಪದಲ್ಲಿ. ಇದನ್ನೇ ಅನ್ನೋದು ದೈವಬಲ ಅಂತ. ಪಟೇಲರ ಕಟುತ್ವ , ಲಾಲ್ ಬಹದ್ದೂರರ ಸರಳತೆ , ಅಟಲ್ ಜೀಯವರ ಜನಪ್ರಿಯತೆಗಳ ಸೂಕ್ತ ಮಿಶ್ರಣದಿಂದ ಮೂಡಿದ ಪರಿಪೂರ್ಣ ಮೂರ್ತಿ ನರೇಂದ್ರ ಮೋದಿ.

ಮೋದಿಯವರು ಕಳೆದ ಸುಮಾರು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯವರನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು.

ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅಂತರ್ಜಾಲ ಮಾಧ್ಯಮದಿಂದ ಮೋದಿ ಜಗತ್ತಿಗೆ ಹತ್ತಿರವಾಗಿಬಿಟ್ಟಿದ್ದಾರೆ. ಮೋದಿಯವರ ಅಭಿಮಾನಿ ಬಳಗ ಕಾಂಗ್ರೆಸ್ಸಿನ ಭೂತ ಬಿಡಿಸುವುದಿರಲಿ ಮಾಧ್ಯಮದ ಹುಳುಕನ್ನು ಎತ್ತಿ ಹರಡುವ ಮೂಲಕ ಅವರ ಬಾಯಿಯನ್ನು ಮುಚ್ಚಿಸಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗರು ಅಟಲ್ ಜಿ , ಅಡ್ವಾಣಿ ಎಲ್ಲರನ್ನೂ ಇಶಾರೆಗೆ ತಕ್ಕಂತೆ ಕುಣಿಸಿಬಿಟ್ಟಿದ್ದರು. ಆದರೆ ಇವರು ಮೋದಿಯವರ ಹತ್ತಿರಕ್ಕೂ ಸುಳಿಯುವುದಕ್ಕಾಗುತ್ತಿಲ್ಲ. ಭಾರತದ ಏಕೈಕ ಭ್ರಷ್ಟನಲ್ಲದ ರಾಜಕಾರಣಿ ಎಂಬ ಬಿರುದನ್ನು ವಿಕಿಲೀಕ್ಸ್ ನಿಂದ ಪಡೆದುಕೊಂಡಿರುವ ನಾಯಕನ ಹತ್ತಿರಕ್ಕೆ ಸುಳಿಯಲಿಕ್ಕೆ ಎದೆಗಾರಿಕೆ ಬೇಕೇ ಬೇಕಲ್ಲವೇ?

ಮೋದಿಯ ಮೋಡಿ ನಿಜಕ್ಕೂ ಅಪರೂಪದ್ದು. ಅವರ ಬಳಿ ಹತ್ತು ನಿಮಿಷ ಮಾತಾಡಿದರೂ ಸಾಕು ಪರಿವರ್ತನೆಗೆ ಒಳಗಾಗಿಬಿಡುತ್ತಾರೆ. ಅದು ಅಮಿತಾಬ್ ಬಚ್ಚನ್ ರಿಂದ ಮಿನಾಜ್ ಮರ್ಚಂಟ್ ರವರೆಗೆ , ತಲ್ಪೀನ್ ಸಿಂಗ್ ರಿಂದ ಮಧುಕಿಶ್ವರ ವರೆಗೆ ಅನೇಕರ ಮೇಲೆ ಛಾಯೆ ಬೀರಿದೆ.

ಈ ಎಲ್ಲಾ ಕಾರಣಗಳಿಂದಲೇ ಇಂದು ವಿಶ್ವವೇ ಮೋದಿಯವರನ್ನು ಕೊಂಡಾಡುತ್ತಿದೆ. ಹೀಗಾಗಿಯೇ ವೈರಿ ರಾಷ್ಟ್ರವೂ ಮೋದಿಯವರಿಗೆ ನತಮಸ್ತಕನಾಗಿ ಅದರ ಮಾಧ್ಯಮಗಳಲ್ಲಿ ಮೋದಿಯವರ ಕುರಿತು ಶುರು ಮಾಡಿದ್ದಾರೆ.

ಮೋದಿಯಂತಹ ವರ್ಚಸ್ಸು ಇರುವ, ಪವಾಡಸದೃಶ್ಯ ನಾಯಕ ಒಂದು ವೇಳೆ ಮುಸ್ಲೀಂರಲ್ಲಿ ಇದ್ದಿದ್ದೆ ಆದರೆ, ಅವರಿಗೊಸ್ಕರ ಪ್ರತಿ ಮುಸಲ್ಮಾನ ತಲೆ ಕತ್ತರಿಸಿಕೊಳ್ಳಲು ಸಿದ್ಧನಾಗುತಿದ್ದನೇ ಹೊರತು ಅವರ ತಲೆ ಬಾಗಲು ಬೀಡುತ್ತಿರಲಿಲ್ಲ”. ಎಂದು ಪಾಕಿಸ್ತಾನದ ಮಾಧ್ಯಮಗಳು ಹೇಳುತ್ತಿವೆ.

ಪಾಕಿಸ್ತಾನದ ಬುದ್ಧಿಜೀವಿಯೂ ಮೋದಿಯವರ ಕುರಿತು ಮಾತನಾಡಿದ್ದಾನೆ.

ನಮ್ಮ ನೆರೆಯ ರಾಷ್ಟ್ರ ಹಿಂದೂಸ್ಥಾನ (ಭಾರತ ) ತುಂಬಾ ಅದೃಷ್ಟ ಮಾಡಿದೆ. ಏಕೆಂದರೆ ಅದರ ನಾಯಕತ್ವ “ನರೇಂದ್ರ ಮೋದಿ ” ಯಂಥ ಮಹಾನ್ ವ್ಯಕ್ತಿಯ ಕೈಯಲ್ಲಿ ಇದೆ. ಇಂತಹ ನಾಯಕನ ಜನನವನ್ನು ನಾವು ಪಾಕಿಸ್ತಾನದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲ!

ಈ ಹೇಳಿಕೆಯನ್ನು ಕೊಟ್ಟದ್ದು ಪಾಕಿಸ್ತಾನದ ಬುದ್ಧಿಜೀವಿ. ವಾವ್!! ಇದೇ ಅಲ್ವಾ ಭಾರತದ ಹೆಮ್ಮೆ?

ಇನ್ನೊಂದು ಅಚ್ಚರಿ ಅನಿಸುವುದು ಏನೆಂದರೆ. ನರೇಂದ್ರ ಮೋದಿಯವರು ಅಷ್ಟು ಕೂಲಾಗಿ ಹೇಗೆ ಇರ್ತಾರೆ ಅಂತ. 65 ವರ್ಷಗಳ ಕಾಲ ಕುತಂತ್ರಕ್ಕೆ ಬಲಿಯಾಗಿದ್ದ ರಾಷ್ಟ್ರವನ್ನು ಮುನ್ನಡೆಸಬೇಕು , ಜೊತೆಗೆ ಒಳಗಿನ ಕೆಲವರ ವಿರೋಧ.ಇಷ್ಟೆಲ್ಲಾ ಇದ್ದರೂ ಆತ ಆ ಪರಿ ಮನೋಹರ ಭಾಷಣ ಮಾಡಿತ್ತಾರಲ್ಲ ಹೇಗೆ ಸಾಧ್ಯ.

ನರೇಂದ್ರ ಮೋದಿ ಅಪರೂಪದ ಮನುಷ್ಯ. ಭಾರತ ವಿಶ್ವಗುರುವಾಗಲಿದೆ. ಭಾರತದ ಯುವಶಕ್ತಿ ಜಗತ್ತನ್ನು ಬೆಳಗಲಿದೆ ಹಾಗಂತ ಗೂಗಲ್ ಹ್ಯಾಂಗ್ ಔಟ್ ನ ಮೊದಲ ಪ್ರಶ್ನೆಗೆ ಉತ್ತರಿಸುವಾಗ ಅವರ ಕಂಗಳಲ್ಲಿನ ಹೊಳಪು ನೋಡಬೇಕಿತ್ತು. ಮುಷ್ಟಿ ಕಟ್ಟಿದ ಕೈಗಳಲ್ಲಿ ಅಡಗಿದ ತಾಕತ್ತು ನೋಡಬೇಕಿತ್ತು.

ಆತ ದೇಶವಾಳಬೇಕೆಂಬುದು ದೈವಿಚ್ಛೆಯಾಗಿತ್ತು.
ಆ ಭಗವಂತನ ಇಚ್ಛೆಯಿಂದ ಧರೆಗೆ ನಾಯಕನಾಗಿ ಆಳಲು ಬಂದವನು.

ಒಟ್ಟಿನಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ತನ್ನ ಇಚ್ಛೆಗೆ ತಕ್ಕಂತೆ ಕುಣಿಸಬಲ್ಲ ಶಕ್ತಿಯೊಂದು ಉದಿಸಿದೆ ಅದು ನರೇಂದ್ರ ಮೋದಿ ರೂಪದಲ್ಲಿ. ಇದನ್ನೇ ಅನ್ನೋದು ದೈವಬಲ ಅಂತ.

 

 •  
  5
  Shares
 • 5
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com