Connect with us
Loading...
Loading...

ಪ್ರಚಲಿತ

TikTok ಹಾಗೂ Hello ಆ್ಯಪ್‌ ಸಂಸ್ಥೆಗೆ ನೋಟಿಸ್ ಕೊಟ್ಟ ಮೋದಿ ಸರ್ಕಾರ; ಸದ್ಯದಲ್ಲೇ ಬಂದ್ ಆಗಲಿವೆಯಾ.?

Published

on

  •  
  •  
  •  
  •  
  •  
  •  
  •  
  •  

ಚೀನಾದ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಟಿಕ್‌ಟಾಕ್‌ ಮತ್ತು ಹೆಲೊಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ (ಎಸ್‌ಜೆಎಂ) ನೀಡಿದ ದೂರಿನ ಮೇರೆಗೆ ಈ ನೋಟಿಸ್‌ ನೀಡಲಾಗಿದೆ. ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಈ ತಾಣಗಳು ಬಳಕೆಯಾಗುತ್ತಿವೆ ಎಂದು ಆರೋಪಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ನೋಟಿಸ್‌ ನೀಡಿದ್ದು ಪ್ರತಿಕ್ರಿಯೆ ನೀಡಲು ಇದೇ 22ರ ಗಡುವು ಕೊಡಲಾಗಿದೆ. ಅದರೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ ಈ ಆ್ಯಪ್‌ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಎರಡೂ ಆ್ಯಪ್‌ಗಳನ್ನು ದೇಶವಿರೋಧಿ ಮತ್ತು ಅಕ್ರಮ ಚಟುವಟಿಕೆಗಳು ಬಳಸಲಾಗುತ್ತಿದೆ ಎಂದು ಪ್ರಧಾನಿಯವರಿಗೆ ಎಸ್‌ಜೆಎಂ ಇತ್ತೀಚೆಗೆ ದೂರು ನೀಡಿತ್ತು.

ಈ ಎರಡೂ ಆ್ಯಪ್‌ಗಳು ಚೀನಾದ ಅಂತರ್ಜಾಲ ಸಂಸ್ಥೆ ಬೈಟ್‌ಡಾನ್ಸ್‌ನ ಮಾಲೀಕತ್ವದ್ದಾಗಿದೆ. ಭಾರತವು ತಮ್ಮ ಅತ್ಯಂತ ಪ್ರಬಲ ಮಾರುಕಟ್ಟೆಯಾಗಿದ್ದು ಸರ್ಕಾರದ ಜತೆ ಸಹಕರಿಸುವುದಾಗಿ ಟಿಕ್‌ಟಾಕ್‌ ಮತ್ತು ಹೆಲೊ ತಾಣಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೈಬರ್‌ ಕಾನೂನು ಮತ್ತು ಇ ಭದ್ರತೆ ವಿಭಾಗವು ಸುದೀರ್ಘ ಪ್ರಶ್ನಾವಳಿಯನ್ನು ಜಾಲತಾಣ ಸಂಸ್ಥೆಗಳಿಗೆ ಕಳುಹಿಸಿದೆ. ಆ್ಯಪ್‌ ಮೂಲಕ ಅನಧಿಕೃತ ಮಾಹಿತಿ ಹಂಚಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಅದರಲ್ಲಿ ಸೇರಿದೆ.

 -Team Nationalist views

  •  
  •  
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com