Connect with us
Loading...
Loading...

ಪ್ರಚಲಿತ

ವಿಶ್ವದಲ್ಲಿ ಭಾರತದ ತಲೆ ತಗ್ಗಿಸುವಂತೆ ಮಾಡುತ್ತಿರುವ ಆ ಪಕ್ಷ ಯಾವುದು ಗೊತ್ತಾ? ಅಷ್ಟಕ್ಕೂ ಅದು ಏನು ಮಾಡಿದೆ ಗೊತ್ತಾ?

Published

on

 • 1.6K
 •  
 •  
 •  
 •  
 •  
 •  
 •  
  1.6K
  Shares

ಮೊದಲನೆಯದಾಗಿ ನನ್ನ ದೇಶವನ್ನು ಭ್ರಷ್ಟಾಚಾರವೆಂಬ ಪೆಡಂಭೂತದ ಕಾರಣದಿಂದ ಜಗತ್ತಿನೆದುರಿಗೆ ತಲೆ ತಗ್ಗಿಸುವಂತೆ ಮಾಡಿದವರಿಗೆ ನನ್ನ ಧಿಕ್ಕಾರವಿದೆ.

ಭ್ರಷ್ಟಾಚಾರ ಭ್ರಷ್ಟಾಚಾರ ಭ್ರಷ್ಟಾಚಾರ!!! ರಾಜಕೀಯ ಅನ್ನೋದು ಹೊಲಸು ಅಂತ ಕರೆಯೋದಕ್ಕೆ ಕಾರಣವಾಗಿರೋದೆ ಭ್ರಷ್ಟಾಚಾರ. ರಾಜಕಾರಣದಲ್ಲಿ ಭ್ರಷ್ಟಾಚಾರ ಮಾಮೂಲಿ ಎಂಬಂತಾಗಿದೆ. ಇನ್ನೂ ಅಚ್ಚರಿಯ ವಿಷಯವೇನೆಂದರೆ ವಿಶ್ವದ ಟಾಪ್ 10 ಭ್ರಷ್ಟಚಾರ ರಾಷ್ಟ್ರಗಳಲ್ಲಿ ಭಾರತದ ಒಂದು ಪಕ್ಷವೂ ಇದೆ ಎನ್ನುವುದು ಮಾತ್ರ ವಿಪರ್ಯಾಸ. ಜಗತ್ತಿಗೆ ಒಳ್ಳೆಯದನ್ನು ಕೊಟ್ಟ ನಾವು ಈ ಭ್ರಷ್ಟಾಚಾರ ಎನ್ನುವ ಪೆಡಂ ಎನ್ನುವ ಭೂತದಿಂದ ತಲೆ ತಗ್ಗಿಸುವಂತಾಗಿದೆ. ತಮ್ಮ ರಾಜಕೀಯ ಹಪಹಪಿಗೆ ನನ್ನ ರಾಷ್ಟ್ರವನ್ನು ಜಗತ್ತಿನ ಎದುರಿಗೆ ತಲೆ ತಗ್ಗಿಸುವಂತೆ ಮಾಡಿದವರಿಗೆ ನನ್ನ ಧಿಕ್ಕಾರವಿದೆ.

ಜಗತ್ತು ಭಾರತವನ್ನು ಪೂಜನೀಯ ಭಾವದಿಂದ ನೋಡುತ್ತಿತ್ತು.
ಜಗತ್ತು ತಾನು ಏನು ಅಂತ ಅರಿಯುವ ಮುನ್ನವೇ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಉತ್ತುಂಗ ಸ್ಥಿತಿಯಲ್ಲಿತ್ತು. ಜಗತ್ತು ಕಣ್ಣುಬಿಡುವ ಮುಂಚೆಯೇ ಭಾರತದಲ್ಲಿ ವೇದದ ಅಧ್ಯಯನ, ಉಪನಿಷತ್, ಶಸ್ತ್ರ ಚಿಕಿತ್ಸೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾವು ಉತ್ತುಂಗದಲ್ಲಿದ್ದೆವು. ಇವುಗಳ ಹೊರಾತಾಗಿಯೂ ಭಾರತ ಶ್ರೀಮಂತಿಕೆಯಲ್ಲಿ ಸಂಪದ್ಭರಿತವಾಗಿತ್ತು. ಭಾರತ ಸಂದ್ಭರಿತವಾಗಿದ್ದರಿಂದಲೇ ವಿದೇಶಿಗರು ಭಾರತದ ಮೇಲೆ ದಾಳಿ ಮಾಡಿ ದೋಚಿದರು.

ಎಲ್ಲರ ಬಾಯಲ್ಲೂ ಹರಿದಾಡೋ ಒಂದೇ ಒಂದು ವಾಕ್ಯವೆಂದರೆ, ವಿಜಯ ನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿಟ್ಟು ಶೇರುಗಳಲ್ಲಿ ಮಾರುತ್ತಿದ್ದರಂತೆ. ಈ ಮಾತು ಭಾರತೀಯ ಪ್ರಜೆಯ ಪ್ರತಿಯೊಬ್ಬರ ಬಾಯಲ್ಲೂ ಹರದಾಡಿರುತ್ತೆ. ಅದರಲ್ಲೂ ಕನ್ನಡಿಗರು ಪದೇ ಪದೇ ಈ ಮಾತನ್ನು ಹೇಳುತ್ತಲೇ ಇರುತ್ತಾರೆ. ಯಾಕೆಂದರೆ ಇದು ಕನ್ನಡಿಗರ ಹೆಮ್ಮೆಯ ವಿಜಯ ನಗರ ಸಾಮ್ರಾಜ್ಯದ ಶ್ರೀಮಂತಿಕೆಯ ವಿಚಾರ.

ಜಗತ್ತೇ ಬೆಕ್ಕಸ ಬೆರಗಾಗುವ ರೀತಿಯಲ್ಲಿ ಭಾರತ ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನ, ಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಸಂಪದ್ಭರಿತ ರಾಜಧಾನಿಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು ಹೀಗೆ ಹಲವಾರು ಕ್ಷೇತ್ರದಲ್ಲಿ ಉತ್ತುಂಗದಲ್ಲಿತ್ತು. ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!

ಯಾವಾಗ ಭಾರತ ಸಂಪದ್ಭರಿತ ರಾಷ್ಟ್ರವೆಂದು ವಿದೇಶಿಗರು ಅರಿತರೋ ಆಗಲೇ ಭಾರತದ ಮೇಲೆ ದಾಳಿಗಳು ಶುರುವಾದವು. ಮೊಹಮದ್ ಘೋರಿ ಅಷ್ಟು ಸಲ ದಂಡಯಾತ್ರೆಗೆ ಬಂದ, ಮೊಹಮದ್ ಘಜ್ನಿ ಇಷ್ಟು ಸಲ ಭಾರತದ ಮೇಲೆ ದಂಡಯಾತ್ರೆಗೆ ಬಂದ ಅಂತ ನಾವೆಲ್ಲಾ ಓದುತ್ತಲೇ ಬೆಳೆದಿರುವೆವು. ದಂಡಯಾತ್ರೆ ಅಂದ್ರೆ ನಮ್ಮ ಸಂಪತ್ತನ್ನೂ ಸೂರೆಗಯ್ಯಲು ವಿದೇಶಿಗರು ದಾಳಿ ಮಾಡಿದ್ದು.

ವಿದೇಶಿಗಳು ದಾಳಿ ಮಾಡಿ ನಮ್ಮ ಸಂಪತ್ತನ್ನು ಸೂರೆಗೈದರು. ಅವರು ಹೋದಮೇಲೂ ನಮ್ಮಲ್ಲಿನ ಸಂಪತ್ತಿಗೆ ರಕ್ಷಣೆ ಸಿಗಲಿಲ್ಲ. ನಮಗೆ ಗೊತ್ತಾಗದಂತೆ ನಮ್ಮಲ್ಲಿ, ನಮ್ಮವರೇ ನಮ್ಮ ಸಂಪತ್ತನ್ನು ಸೂರೆಗೈದರು‌. ಅವರಿಗೆಲ್ಲಾ ಜಾಗೃತ ಭಾರತೀಯನ ಧಿಕ್ಕಾರವಿದೆ.

ಜಗತ್ತು ಭಾರತವನ್ನು ಯಾವ ರೀತಿ ಪೂಜನೀಯ ಭಾವನೆಯ ರೀತಿಯಲ್ಲಿ ನೋಡುತ್ತಿತ್ತು ಗೊತ್ತೆ? ಜಗತ್ತಿಗೆ ಭಾರತ ಗುರುವಿದ್ದಂತೆ, ಭಾರತದ ಸಂಸ್ಕೃತಿ ಸಂಪ್ರದಾಯ ಜಗತ್ತಿಗೆ ಒಳ್ಳೆಯದನ್ನು ಬಯಸಿವೆ. ಜಗತ್ತಿನಲ್ಲಿ ಇಲ್ಲಿಯವರೆಗೂ ಯಾರ ಮೇಲೂ ದಾಳಿ ಮಾಡಿರದ ಏಕೈಕ ರಾಷ್ಟ್ರ ಭಾರತವಾಗಿತ್ತು. ಅಂತಹ ಭಾರತವನ್ನು ಜಗತ್ತಿನ ಮುಂದೆ ಕೆಲ ರಾಜಕೀಯ ಪಕ್ಷಗಳು ತಲೆ ತಗ್ಗಿಸುವಂತೆ ಮಾಡಿಬಿಟ್ಟವು. ಈಗಲೂ ಮಾಡುತ್ತಿವೆ ಅನ್ನೋದೆ ವಿಷಾದನೀಯ.

ಇಡೀ ಜಗತ್ತಿನ ಅತೀ ಹೆಚ್ಚು ಭ್ರಷ್ಟವಾಗಿರುವ ಟಾಪ್ 10 ಪಕ್ಷಗಳು ಯಾವುವು ? ಅದರಲ್ಲಿ ಭಾರತದ ರಾಜಕೀಯ ಪಕ್ಷ ಯಾವುದಾದರೂ ಇದೆಯಾ ? ಈ ಕುರಿತು ಬಿಬಿಸಿ 10 ಪಕ್ಷಗಳ ಹೆಸರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರ ವರದಿಯನ್ನು ಭಾರತೀಯರೆದುರಿಗೆ ಬಹಿರಂಗ ಪಡಿಸುತ್ತೇನೆ.

1) ಪಾಕಿಸ್ಥಾನ ಮುಸ್ಲಿಂ ಲೀಗ್ ನವಾಜ್ : ಪಾಕಿಸ್ಥಾನ


ನವಾಜ್ ಷರೀಫ್ ನೇತೃತ್ವದ ಪಾಕಿಸ್ಥಾನ್ ಮುಸ್ಲಿಂ ಲೀಗ್ ಪಕ್ಷವೂ ಜಗತ್ತಿನ ಟಾಪ್-1 ಭ್ರಷ್ಟ ಪಕ್ಷವಂತೆ. ಈ ಪಕ್ಷದ ಅನೇಕರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಸ್ವತಃ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರ ಹೆಸರು ಪನಾಮಾ ಲೀಕ್ ಪ್ರಕರಣದಲ್ಲೂ ತಳಕು ಹಾಕಿಕೊಂಡಿದೆ.

2) ನ್ಯಾಶನಲ್ ರೆಸಿಸ್ಟನ್ಸ್ ಮೂವ್‌ಮೆಂಟ್: ಉಗಾಂಡಾ


ಅನೇಕ ವಿವಾದಗಳು ಹಾಗೂ ಹಗರಣಗಳಲ್ಲಿ ಭಾಗಿಯಾಗಿರುವ ನ್ಯಾಶನಲ್ ರೆಸಿಸ್ಟನ್ಸ್ ಮೂವ್‌ಮೆಂಟ್ ಪಕ್ಷವು ಎರಡನೇ ಅತೀ ಹೆಚ್ಚು ಭ್ರಷ್ಟತೆ ಹೊಂದಿದ ಪಕ್ಷವಂತೆ. ವಿಶೇಷವಾಗಿ ಯುದ್ಧ ವಿವಾದಗಳಲ್ಲಿ ಈ ಪಕ್ಷವು ಸಿಲುಕಿದೆಯಂತೆ.

3) ಪ್ರೊಗ್ರೆಸ್ಸಿವ್ ಆಕ್ಷನ್ ಪಾರ್ಟಿ: ಕ್ಯೂಬಾ


ಫಲ್ಗೆನ್ಸಿಯೊ ಬಟಿಸ್ಟಾ ನೇತೃತ್ವದ ಈ ಪಕ್ಷವೂ ಕಡುಭ್ರಷ್ಟವಾಗಿದ್ದು, 1958ರಲ್ಲೇ ಇದು ನಿಷೇಧಕ್ಕೂ ಒಳಗಾಗಿದೆಯಂತೆ. ಚುನಾವಣಾ ಅಕ್ರಮ, ಅಕ್ರಮ ಹಣ ಗಳಿಕೆ, ಕಾನೂನು ಉಲ್ಲಂಘನೆ, ಅನೇಕ ನಾಗರಿಕರ ಸಾವಿಗೆ ಕಾರಣ ಹೀಗೇ ಅಸಂಖ್ಯ ಅಕ್ರಮಗಳಲ್ಲಿ ಭಾಗಿಯಾಗಿತ್ತಂತೆ ಈ ಪಕ್ಷ.

4) ಇಂಡಿಯನ್ ನ್ಯಾಶನಲ್ ಕಾಂಗ್ರೆಸ್: ಭಾರತ


ಸೋನಿಯಾ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತೀಯ ನ್ಯಾಶನಲ್ ಕಾಂಗ್ರೆಸ್‌ಗೆ 4 ನೇ ಸ್ಥಾನ ನೀಡಿದೆ ಬಿಬಿಸಿ ವರದಿ. 10 ವರ್ಷಗಳಲ್ಲಿ ಮಾಡಿದ ಅನೇಕ ಭಾರಿ ಹಗರಣಗಳು. ಅದರ ಪರಿಣಾಮವೇ ಕಾಂಗ್ರೆಸ್ 2014 ರ ಚುನಾವಣೆಯಲ್ಲಿ ಮಣ್ಣು ಮುಕ್ಕಲು ಕಾರಣ ಎನ್ನಲಾಗಿದ್ದು, ಕೋಟಿಗಟ್ಟಲೇ ಹಣವನ್ನು ದೇಶದ ಬೊಕ್ಕಸದಿಂದ ಕಾಂಗ್ರೆಸ್ ಕೊಳ್ಳೆ ಹೊಡೆದಿದೆ ಎನ್ನಲಾಗಿದೆ.

5) ವಿಯೆಟ್ನಾಂ ಕಮ್ಯುನಿಸ್ಟ್ ಪಾರ್ಟಿ: ವಿಯೆಟ್ನಾಂ


ರೂಲಿಂಗ್ ಆಂಡ್ ಫಂಡಿಂಗ್ ಪಾರ್ಟಿ ಎಂದೇ ಗುರುತಿಸಿಕೊಂಡಿದೆಯಂತೆ ಈ ಪಕ್ಷ. ತಾನೂ ಭ್ರಷ್ಟವಾಗಿದ್ದಲ್ಲದೇ ಜನರನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳುವಲ್ಲಿ ಮುಂಚೂಣಿಯಲ್ಲಿದೆಯಂತೆ. ಕಮ್ಯನಿಸ್ಟೇತರ ಸಾವಿರಾರು ಜನರನ್ನು ಜೈಲಿಗೆ ತಳ್ಳಿದ ಕುಖ್ಯಾತಿಯೂ ಈ ಪಕ್ಷಕ್ಕಿದೆಯಂತೆ. ಕೊನೆಗೆ 1976 ರಲ್ಲಿ ಮಾಡರ್ನ್ ಪಾರ್ಟಿಯಲ್ಲಿ ವಿಲೀನಗೊಂಡಿತಂತೆ.

6) ಕೌಮಿನಿತಂಗ್ : ಚೈನಾ


ಇದು ಚೈನಾದ ಬಹು ಪ್ರಬಲ ಪಕ್ಷ. ಮಾರ್ಷಲ್ ಕಾನೂನನ್ನು ಅನುಸರಿಸುವಂತೆ ಇಲ್ಲಿನ ಸರ್ಕಾರ ಒತ್ತಾಯಪೂರ್ವಕವಾಗಿ ಜನರ ಮೇಲೆ ಹೇರುತ್ತಂತೆ. ಆದರೆ ಸಾಕಷ್ಟು ಜನ ಇದನ್ನು ವಿರೋಧಿಸುತ್ತಾರೆ.

7) ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ: ಇಟಲಿ


ಬೆನಿಟೊ ಮುಸಲೋನಿಯಿಂದ ಆರಂಭವಾಯಿತಂತೆ ಈ ಪಾರ್ಟಿ. ಹಿಟ್ಲರ್ ಹಾಗೂ ಮುಸಲೋನಿ ಆಡಳಿತ ತೀರ ದಬ್ಬಾಳಿಕೆಯಿಂದ ಕೂಡಿತ್ತಂತೆ. ಸ್ಮಗ್ಲಿಂಗ್‌ನಂತಹ ಅನೇಕ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಈ ಪಕ್ಷವು, ಭ್ರಷ್ಟಾಚಾರದಲ್ಲಿ ಮುಳುಗಿತ್ತಂತೆ.

8) ನಾಜಿ ಪಾರ್ಟಿ: ಜರ್ಮನಿ


ನ್ಯಾಶನಲ್ ಸೋಷಿಯಾಲಿಸ್ಟ್ ಜರ್ಮನ್ ವರ್ಕರ್ಸ ಪಾರ್ಟಿಯು ನಾಜಿ ಪಾರ್ಟಿ ಎಂದು ಗುರುತಿಸಿಕೊಂಡಿದೆ. ಯಹೂದಿ ವಿರೋಧಿ ಅಜೆಂಡಾ ಹಾಗೂ ಭಾರೀ ಭ್ರಷ್ಟಾಚಾರ ಈ ಪಕ್ಷದ ಪ್ರಮುಖ ಲಕ್ಷಣಗಳಂತೆ.

9) ಕಮ್ಯನಿಸ್ಟ್ ಪಾರ್ಟಿ ಆಫ್ ಚೈನಾ: ಚೈನಾ


ಇದೊಂದು ಪ್ರಮುಖ ಹಾಗೂ ಪ್ರಬಲ ಆಡಳಿತ ಪಕ್ಷ. ಈ ಪಕ್ಷದ ಆಡಳಿತವು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವನ್ನೇ ನೀಡುವುದಿಲ್ಲ. ನಾಗರಿಕರ ಅಭಿಪ್ರಾಯಗಳಿಗೆ ಅಲ್ಲಿ ಬೆಲೆಯೇ ಇಲ್ಲವಂತೆ. ಅದೊಂದು ರೀತಿ ನಿರಂಕುಶ ಪ್ರಭುತ್ವವಂತೆ.

10) ಕಮ್ಯುನಿಸ್ಟ್ ಪಾರ್ಟಿ ಆಫ್ ಸೋವಿಯತ್ ಯೂನಿಯನ್: ರಷ್ಯಾ

ರಷ್ಯಾದಲ್ಲಿ ಇದು ಪ್ರಬಲ ಪಕ್ಷವಾಗಿದೆ. ಇದೊಂದು ಏಕಸ್ವಾಮ್ಯ ಹೊಂದಿದ ಪಕ್ಷವಾಗಿದ್ದು, ಅಲ್ಲಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಲಕ್ಷಾನುಗಟ್ಟಲೇ ನಿವಾಸಿಗಳ ಮೇಲೆ ನಿಯಂತ್ರಣ ಹೊಂದಿದೆಯಂತೆ. ಈ ಪಕ್ಷವು ಸಾಂವಿಧಾನಿಕ ಹಾಗೂ ಕಾನೂನಾತ್ಮಕ ದಾಖಲೆಗಳನ್ನೂ ಕೂಡಾ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತಂತೆ. ಪರಿಣಾಮ 1991 ರಲ್ಲಿ ಈ ಪಕ್ಷವು ನಿಷೇಧಕ್ಕೊಳಗಾಯಿತು ಎನ್ನಲಾಗಿದೆ.

ಸ್ವಿಸ್ ಬ್ಯಾಂಕಿನಲ್ಲಿ ಭಾರತದ ಎಷ್ಟು ಹಣವಿದೆ ಗೊತ್ತಾ?

ಭಾರತದಲ್ಲಿ ‘ಕಪ್ಪುಹಣ’ ಸಮಸ್ಯೆಯು ಇತ್ತೀಚೆಗೆ ತೀವ್ರವಾಗಿ ಚರ್ಚಿತವಾಗುತ್ತಿರುವ ವಿಷಯವಾಗಿದ್ದು, ಭಾರತದ ಒಟ್ಟು ಕಪ್ಪು ಹಣದ ಸೃಷ್ಟಿಯು ನಮ್ಮ ದೇಶದ ಜಿ.ಡಿ.ಪಿ.ಯ ಶೇಕಡಾ 6 ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ.

ವಿದೇಶಗಳಲ್ಲಿ ಭಾರತದ ಕಪ್ಪುಹಣದಲ್ಲಿ 12ನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೇರಿಕ ದೇಶವಿದ್ದು, ಎರಡನೇ ಸ್ಥಾನದಲ್ಲಿ ಇಂಗ್ಲೇಡ್ ರಾಷ್ಟ್ರಗಳಿವೆ ಈ ಮುಂದುವರಿದ ದೇಶಗಳಲ್ಲಿ ಕೂಡಾ ಕಪ್ಪು ಹಣದ ಸೃಷ್ಟಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಭಾರತದ ಕಪ್ಪು ಹಣವು ಸ್ವಿಸ್ವ್ ಬ್ಯಾಂಕ್ ಮಾಹಿತಿ ಬಹಿರಂಗ ಹೊರಡಿಸಿರುವ ಪ್ರಕಾರ 2013-14 ಸಾಲಿನಲ್ಲಿ ದಶಲಕ್ಷ ಕೋಟಿ ಇದೆ ಎಂದು ಹೇಳಿತ್ತು, ಅದೇ ರೀತಿ 2012-13 ಸಾಲಿನಲ್ಲಿ 1547 ದಶಲಕ್ಷ ಕೋಟಿ ಇದೆ ಎಂದು ಹೇಳಿತ್ತು.

ವಿಶ್ವದ ಟಾಪ್ 10 ಭ್ರಷ್ಟಾಚಾರ ಪಕ್ಷಗಳಲ್ಲಿ ಭಾರತದ ರಾಜಕೀಯ ಪಕ್ಷವಾದ ಕಾಂಗ್ರೆಸ್ ಕೂಡಾ ಇದೆ. ಅದು ಟಾಪ್ 4 ಸ್ಥಾನದಲ್ಲಿದೆ. ಛೇ!!! ನಾಚಿಕೆಯಾಗಬೇಕು. ನನ್ನ ದೇಶವನ್ನು ವಿಶ್ವದ ಎದುರಿಗೆ ತಲೆ ತಗ್ಗಿಸುವಂತೆ ಮಾಡಿದ ರಾಜಕೀಯ ಪಕ್ಷಕ್ಕೆ ನನ್ನದೊಂದು ಧಿಕ್ಕಾರ!!!.

Source: http://www.foxnewspoint.com/top-10-most-corrupt-political-party-in-the-world-2017/

 •  
  1.6K
  Shares
 • 1.6K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com