Connect with us
Loading...
Loading...

ಪ್ರಚಲಿತ

ಕಾಂಗ್ರೆಸ್ಸಿನ ಈ ಪ್ರಭಾವಿ ರಾಜಕಾರಣಿ ಮೋದಿ ಬಜೆಟ್ ಬಗ್ಗೆ ಹಾಡಿ ಹೊಗಳಿದ್ದಾರೆ?!!! ಏನಂತ ಗೊತ್ತಾ?!!

Published

on

 • 3.8K
 •  
 •  
 •  
 •  
 •  
 •  
 •  
  3.8K
  Shares

ವೈರಿ ರಾಷ್ಟ್ರ ಪಾಕಿಸ್ತಾನಕ್ಕೇ ಪಾಕಿಸ್ತಾನವೇ ಮೋದಿಯವರ ಕಾರ್ಯವೈಖರಿ, ನಾಯಕತ್ವವನ್ನು ಹೊಗಳಿದರೂ, ಭಾರತದಲ್ಲಿರುವ ವಿರೋಧ ಪಕ್ಷದವರು ಹೊಗಳುವುದಿಲ್ಲ ಎಂಬಂತಾಗಿತ್ತು. ಆದರೆ ಇದೀಗ ಅಚ್ಚರಿ ಎನಿಸುವ ರೀತಿಯಲ್ಲಿ ಮೋದಿ ಸರ್ಕಾರದ ಬಜೆಟ್ ಗೆ ಸಂಭಂದಿಸಿದಂತೆ ವಿರೋಧ ಪಕ್ಷದ ಪ್ರಭಾವಿ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೌದು ನೆನ್ನೆ ಮೋದಿ ಸರ್ಕಾರದ 2018-19ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಒಳ್ಳೊಳ್ಳೆ ಕೊಡುಗೆಗಳಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿಯ ಬಜೆಟ್ ಹೇಗಿದೆ? ಇದರಿಂದ ಭಾರತೀಯರಿಗೆ ಅನುಕೂಲವಾಗುತ್ತಾ ಎಂಬಂತ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರದಲ್ಲಿ ಹೇಳುವುದಾದರೆ, ವಿರೋಧ ಪಕ್ಷದವರು ಮೆಚ್ವಿದ್ದಾರೆಂದರೆ ಈ ಬಜೆಟ್ ಅದ್ಯಾವ ಮಟ್ಟಿನದ್ದಾಗಿರಬಹುದು ನೀವೇ ಆಲೋಚಿಸಿ. ಸುಮ್ನೆ ಒಂದು ಸಲ ಆಲೋಚಿಸಿ.

ವೈರಿ ರಾಷ್ಟ್ರವೇ ಹೊಗಳಿದರೂ ಈ ವಿರೋಧ ಪಕ್ಷದವರು ಹೊಗಳುವುದಿಲ್ಲ ಅಂತಹುದರಲ್ಲಿ ಈ ಬಾರಿಯ ಬಜೆಟ್ ಕುರಿತಂತೆ ಹೊಗಳಿದ್ದಾರೆಂದರೆ ಬಜೆಟ್ ಅದೆಷ್ಟು ಅನುಕೂಲಕರವಾಗಿರಬಹುದು. ವಿರೋಧ ಪಕ್ಷದವರು ಹೊಗಳುತ್ತಾರೆ ಅಂತ ಊಹಿಸೋಕು ಆಗಲ್ಲ. ಆದರೆ ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಬಜೆಟ್ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಮೋದಿ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ 2022ಕ್ಕೆ ಲಾಭದಾಯಕ ಯೋಜನೆಗಳಿವೆ ಎಂದು ಮೋದಿ ಸರ್ಕಾರದ ಈ ಬಾರಿಯ ಬಜೆಟ್ ಲಾಭದಾಯಕವೆಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಆಳುವ ನಾಯಕನ ಯೋಗ್ಯತೆ, ಆಳುವ ನಾಯಕತ್ವ ಸರಿಯಾಗಿದ್ದರೆ ವಿರೋಧ ಪಕ್ಷದವರು ಹೊಗಳಬಾರದು ಅಂದುಕೊಂಡರೂ ಕೂಡಾ ಹೊಗಳಿಸಿಬಿಡುತ್ತದೆ ಅನ್ನುವುದಕ್ಕೆ ಸೂಕ್ತ ಉದಾಹರಣೆ ಈ ಬಾರಿಯ ಬಜೆಟ್ ಕುರಿತಂತೆ ಖರ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿರೋದು.

ಹಿಂದೆಯೂ ಇಂತಹದ್ದೆ ಒಬ್ಬ ನಾಯಕ ಭಾರತವನ್ನು ಆಳಿ ಹೋಗಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಅವರು ಯಾವ ಪಕ್ಷದವರು ಅಂತ ಪ್ರಶ್ನೆಯೇ ಬರೋದಿಲ್ಲ. ಆ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ. ಮಹಾನ್ ದೇಶ ಭಕ್ತ, ಸರಳ ಜೀವಿ, ಅತ್ಯಂತ ಪ್ರಾಮಾಣಿಕ ಪ್ರಧಾನಿ. ಆ ನಾಯಕ ಕಾಂಗ್ರೆಸ್ ಪಕ್ಷದವರು. ಆದರೆ ಅವರ ಬಗ್ಗೆ ಮಾತನಾಡುವಾಗ ಯಾವ ಪಕ್ಷದವರು ಅಂತ ಬೇಧ ಮಾಡದೇ ಮಾತನಾಡುತ್ತೇವೆ. ಕಾರಣವಿಷ್ಟೇ ಆ ನಾಯಕನ ವ್ಯಕ್ತಿತ್ವ ಅಷ್ಟು ಎತ್ತರದಲ್ಲಿತ್ತು. ನಿಸ್ವಾರ್ಥಿ, ದೇಶಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸುವವರನ್ನು ಭಾರತೀಯರು ಅತ್ಯಂತ ಗೌರವದಿಂದ ಕಾಣುತ್ತಾರೆ ಎನ್ನುವುದಕ್ಕೆ ಉದಾಹರಣೆ ಲಾಲ್ ಬಹದ್ದೂರ್ ಶಾಸ್ತ್ರಿ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಾಮಾಣಿಕರಾಗಿದ್ದರಿಂದಲೋ, ದೇಶಪ್ರೇಮಿಯಾಗಿದ್ದರಿಂದಲೋ ಏನೋ ಕಾಂಗ್ರೆಸ್ಸಿಗರು ಅವರ ಬಗ್ಗೆ ಮಾತಾನಾಡುವುದು ಅಪರೂಪ. ಆದರೆ ದೇಶಭಕ್ತರು ಮಾತ್ರ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮರೆತಿಲ್ಲ, ಮರೆಯುವುದು ಇಲ್ಲ. ಬಿಜೆಪಿಯವರು ಕೂಡಾ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ತುಂಬಾ ಗೌರವಿಸುತ್ತಾರೆ. ಯಾಕಂದ್ರೆ ಆ ವ್ಯಕ್ತಿಯ ವ್ಯಕ್ತಿತ್ವ, ನಿಸ್ವಾರ್ಥ ದೇಶ ಸೇವೆ ಆ ಮಟ್ಟದಲ್ಲಿ ನಿಲ್ಲಿಸಿತ್ತು.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಾಭಾಯ್ ಪಟೇಲ್ ರ ಬಗ್ಗೆ ಮಾತಾನಾಡುವಾಗಲೂ ಅವರು ಯಾವ ಪಕ್ಷದವರು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಕಾರಣವಿಷ್ಟೇ ಆ ವ್ಯಕ್ತಿಯ ವ್ಯಕ್ತಿತ್ವ ಮತ್ತು ದೇಶಪ್ರೇಮ. ವಿರೋಧ ಪಕ್ಷದವರು ಪಕ್ಷ ಬೇಧ ಮರೆತು ಗೌರವಿಸುವ ವ್ಯಕ್ತಿ ಸರ್ದಾರ್ ವಲ್ಲಾಭಾಯ್ ಪಟೇಲ್. ಕಠೋರ ದೇಶಪ್ರೇಮಿಗಳಿಗೆ ಆದರ್ಶ ಸರ್ದಾರ್ ವಲ್ಲಾಭಾಯ್ ಪಟೇಲ್‌. ದೇಶಪ್ರೇಮಿಗಳು ಸರ್ದಾರ ವಲ್ಲಾಭಾಯ್ ಪಟೇಲ್ ರ ಸ್ಪೂರ್ತಿಯಾಗಬೇಕಾದರೆ ಅವರು ಯಾವ ಪಕ್ಷದವರು ಅಂತ ಯಾವತ್ತಿಗೂ ಪ್ರಶ್ನೆ ಮಾಡಲಿಲ್ಲ. ಇಲ್ಲಿ ಪಕ್ಷ ಮುಖ್ಯವಾಗಲೇ ಇಲ್ಲ. ಬದಲಿಗೆ ಆ ವ್ಯಕ್ತಿ ದೇಶಕ್ಕೆ ಏನೇನು ಮಾಡಿದ ಅನ್ನುವುದರ ಆಧಾರದ ಮೇಲೆ ವ್ಯಕ್ತಿತ್ವ ರೂಪುಗೊಂಡಿದೆ.

1965ರ ಯುದ್ಧದಲ್ಲಿ ನಮ್ಮ ಸೇನೆ ಪಾಕಿಸ್ತಾನದೊಳಕ್ಕೆ ನುಗ್ಗಿ ಲಾಹೋರ್ ತನಕ ಹೋದಾಗ, ಪಾಕಿಸ್ತಾನ ಅಮೆರಿಕಾದ ಕಾಲಿಗೆ ಬಿದ್ದು ಗೋಗರೆಯಿತು. ಆಗ ಅಮೆರಿಕಾ ನಮಗ ಎಚ್ಚರಿಕೆ ಕೊಡುವ ಉದ್ದೇಶದಿಂದ, ನೀವು ಪಾಕಿಸ್ತಾನದ ಜೊತೆ ಯುದ್ಧ ನಿಲ್ಲಿಸದೇ ಇದ್ದರೆ ನಾವು ನಿಮಗೆ ಗೋಧಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕಾ ನಮಗೆ ಹೇಳುತ್ತದೆ. ಆಗ ಭಾರತದ ಚುಕ್ಕಾಣಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕೈಯಲ್ಲಿತ್ತು. ಹೀಗಾಗಿ ಶಾಸ್ತ್ರಿಯವರು ಅಮೆರಿಕಾದ ಗೊಡ್ಡು ಬೆದರಿಕೆಗೆ ಹೆದರದೆ ಅಮೆರಿಕಾಕ್ಕೆ ಮರುತ್ತರ ಕೊಟ್ಟಿತು. ನೀವು ಕೊಡುವ ಗೋಧಿಯನ್ನು ನಮ್ಮ ಹಂದಿಗಳು ತಿನ್ನೋದಿಲ್ಲ ಅಂತಹುದರಲ್ಲಿ ಅವುಗಳನ್ನು ತೊಗೊಂಡು ಏನು ಮಾಡೋಣ ಎಂದು ಘರ್ಜಿಸಿದರು.

ಅದು ಯುದ್ಧದ ಸಮಯ. ಭಾರತದ ಆಗಿನ ಪರಿಸ್ಥಿತಿ ಬೇರೆ ಸರಿ ಇರಲಿಲ್ಲ‌.ಶಾಸ್ತ್ರೀಯವರು ಘರ್ಜಿಸಿದ್ದರು, ಹೀಗಾಗಿ ಅವತ್ತು ರೇಡಿಯೋ ಮುಖಾಂತರ ಭಾರತೀಯರಿಗೆ ಕೇಳಿಕೊಂಡರು. ಅಮೆರಿಕಾ ಗೋಧಿ ಕೊಡುವುದನ್ನು ನಿಲ್ಲಿಸಿದೆ, ಅತ್ತ ಗಡಿಯಲ್ಲಿ ಯುದ್ಧ ನಡೆದಿದೆ. ಹೀಗಾಗಿ ನಾವೆಲ್ಲಾ ಸೋಮವಾರ ಉಪವಾಸ ಮಾಡಿ, ಆದಿನ ಉಳಿದಿದ್ದನ್ನು ದೇಶಕ್ಕೆ ಅರ್ಪಿಸೋಣ ಎಂದು ಕೇಳಿಕೊಂಡಾಗ ಇಡೀ ದೇಶವೇ ಅವರ ಮಾತಿಗೆ ಓಗೊಟ್ಟು ಪ್ರತಿ ಸೋಮವಾರ ಉಪವಾಸ ಮಾಡಿತ್ತು. ಆಗ ಸೋಮವಾರ ಉಪವಾಸ ಮಾಡುತ್ತಿರುವುದನ್ನು ರೂಢಿ ಮಾಡಿಕೊಂಡವರು ಈಗಲೂ ಕೆಲವು ಜನರಿದ್ದಾರೆ. ಇದರ ತಾತ್ಪರ್ಯವಿಷ್ಟೇ ಕೇಳುವ ನಾಯಕನ ವ್ಯಕ್ತಿತ್ವ ನೋಡಿ ಜನ ಆತನ ಮಾತು ಕೇಳುತ್ತಾರೆ. ಆತನ ಮೇಲೆ ನಂಬಿಕೆ ಇಡುತ್ತಾರೆ. ಆತನ ಕಾರ್ಯಗಳನ್ನು ಶ್ಲಾಘಿಸುತ್ತಾರೆ. ಆತನ ಪಕ್ಷದ ಬಗ್ಗೆ ಪ್ರಶ್ನೆಯೇ ಮಾಡುವುದಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕೂಡಾ ಹೈದರಾಬಾದ್ ಭಾರತದ ಜೊತೆ ವಿಲೀನವಾಗಿರಲಿಲ್ಲ‌. ಹೈದರಾಬಾದಿನ ನಿಜಾಮ ಭಾರತದೊಂದಿಗೆ ವಿಲೀನವಾಗಲ್ಲವೆಂದು ಹಠ ಮಾಡುತ್ತಿದ್ದಾಗ ಆತನನ್ನು ಅಟ್ಟಾಡಿಸಿ ಹೊಡೆದು, ಹೈದರಾಬಾದ್ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನ ಮಾಡಿದವರು‌ ಸರ್ದಾರ್ ವಲ್ಲಾಭಾಯ್ ಪಟೇಲರು. ಅವರು ಯಾವುದೇ ಪಕ್ಷದವರಾಗಲಿ ದೇಶದ ಹಿತಾಸಕ್ತಿಯನ್ನು ಬಯಸುವವರಾಗಿದ್ದರೆ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಬೇಕು. ಎಲ್ಲ ದೇಶಪ್ರೇಮಿಗಳಿರೋದು ಹಾಗಯೇ.

ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಸರ್ದಾರ್ ವಲ್ಲಾಭಾಯ್ ಪಟೇಲರು ದೇಶಪ್ರೇಮಿಗಳಾಗಿದ್ದರಿಂದಲೋ ಏನೋ ಈ ಕಾಂಗ್ರೆಸ್ಸಿಗರು ಅವರನ್ನು ಮೂಲೆಗುಂಪು ಮಾಡಿದರು. ಆದರೆ ಏನಾಯ್ತು ದೇಶಭಕ್ತರ ಎದಯಲ್ಲಿ ಅವರಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರೀಯವರ ಪ್ರಾಮಾಣಿಕತೆ, ದೇಶಪ್ರೇಮ, ಸರ್ದಾರ್ ವಲ್ಲಾಭಾಯ್ ಪಟೇಲ್ ಕಠೋರತನ ಇವುಗಳೆಲ್ಲವೂ ಮೋದಿಯವರಲ್ಲಿವೆ. ಹೀಗಾಗಿಯೇ ಇಡೀ ದೇಶಕ್ಕೆ ದೇಶವೇ ಅವರನ್ನು ನಂಬಿದೆ. ಅವರು ದೇಶದ ಹಿತಾಸಕ್ತಿಗೆ ಏನು ಬೇಕೋ ಅದನ್ನೇ ಮಾಡುತ್ತಾರೆ.

ಈ ಬಾರಿಯ ಬಜೆಟ್ ಕೂಡಾ ದೇಶದ ಹಿತಾಸಕ್ತಿಯ ದೃಷ್ಟಿಯಿಂದಲೇ ಇರುತ್ತೆ. ಏನಾದರೂ ಇರಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆಯವರು ಈ ಬಾರಿಯ ಬಜೆಟ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರೆ ಆ ಬಜೆಟ್ ಮಾತ್ರು ಬಂಪರ್ ಇದೆ ಅಂತಾಯ್ತು.

ಮೋದಿಯವರು ಏನೇ ಮಾಡಿದರೂ ದೇಶದ ಹಿತಾಸಕ್ತಿಗಾಗಿ ಮಾಡುತ್ತಾರೆಂಬುದಂತು ನಿಜ. ಯಾಕಂದ್ರೆ ಅವರಿಗೆ ದುಡ್ಡು ಕೂಡಿಡಲು ಮಗನು ಇಲ್ಲ, ಅಳಿಯನು ಇಲ್ಲ. ಅವರು ಬಂದಿರೋದು ದೇಶವನ್ನು ಕಟ್ಟಲು ಅಷ್ಟೇ. ಅವರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸೋಕೆ ಆಗದೆ ಹೋದರೆ ಪರವಾಗಿಲ್ಲ ಆದರೆ ಸುಖಾ ಸುಮ್ಮನೆ ತೆಗಳುವುದನ್ನು ಬಿಟ್ಟುಬಿಡಿ. ಅವರ ಪಾಡಿಗೆ ಅವರು ದೇಶ ಕಟ್ಟುವ ಕೆಲಸ ಮಾಡಲಿ.

 •  
  3.8K
  Shares
 • 3.8K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com