Connect with us
Loading...
Loading...

ಅಂಕಣ

ಹಿಂದೂ ವಿರೋಧಿಗಳ ಷಡ್ಯಂತ್ರ ಬಯಲು ಮಾಡಿ ಶಬರಿಮಲೈ ವಿಚಾರದಲ್ಲಿ ಹಿಂದುಗಳ ಪರ ನಿಂತ ವಿವೇಕ್ ಓಬೇರಾಯ್ ಹೇಳಿದ್ದೇನು ಗೊತ್ತಾ? ಹ್ಯಾಟ್ಸಾಫ್ ಸರ್ 🙏

Published

on

 • 9.7K
 •  
 •  
 •  
 •  
 •  
 •  
 •  
  9.7K
  Shares

ಶಬರಿಮಲೈ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪನ್ನ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ನೀಡಿತ್ತು. ವಿಶೇಷವೆಂದರೆ ಈ ಕುರಿತಾಗಿ ಇದನ್ನ ದೇಶಾದ್ಯಂತ ಹಾಗು ಕೇರಳದಲ್ಲಿ ವಿರೋಧಿಸುತ್ತಿರುವವರು ಪುರುಷರಲ್ಲ ಬದಲಾಗಿ ಮಹಿಳೆಯರೇ ಆಗಿದ್ದಾರೆ‌. ಶಬರಿಮಲೈ ದೇವಸ್ಥಾನಕ್ಕೆ ಪ್ರವೇಶಿಸಿಯೇ ಸಿದ್ಧ ಎಂದು ಅಯ್ಯಪ್ಪನ ಮಹಿಳಾ ಭಕ್ತರು ಎಲ್ಲಿಯೂ ಹೇಳುತ್ತಿಲ್ಲ ಹಾಗು ದೇವಸ್ಥಾನಕ್ಕೆ ತೆರಳುವ ದುಸ್ಸಾಹಸಕ್ಕೂ ಕೈ ಹಾಕುತ್ತಿಲ್ಲ. ಆದರೆ ಕಮ್ಯುನಿಸ್ಟ್, ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರು ಮಾತ್ರ ದೇವಸ್ಥಾನಕ್ಕೆ ನುಗ್ಗಲು ಯತ್ನಿಸುತ್ತಿದ್ದು ಇದರ ಹಿಂದೆ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ದೊಡ್ಡ ಸಂಚೇ ನಡೆಯುತ್ತಿದೆ ಎಂಬುದು ಅರ್ಥವಾಗದ ವಿಷಯವೇನಲ್ಲ ಬಿಡಿ.

ನೆನ್ನೆಯಷ್ಟೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರವರು ಕೂಡ ಶಬರಿಮಲೈ ವಿವಾದದ ಕುರಿತು ಮಾತನಾಡುತ್ತ ನಮ್ಮ ಮಂದಿರಗಳ ಆಚಾರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡೋದು ಸರಿಯಲ್ಲ, ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಇತ್ತೀಚಿನ ಟ್ರೆಂಡ್ ಬದಲಾಗಬೇಕು ಎಂದು ಹೇಳಿದ್ದರು. ರಜನಿಕಾಂತ್ ಗೂ ಮೊದಲೇ ಬಾಲಿವುಡ್ ನಲ್ಲೂ ಇದೇ ರೀತಿಯ ಅಭಿಪ್ರಾಯವನ್ನ ಬಾಲಿವುಡ್ ನ ಖ್ಯಾತ ನಟರೊಬ್ಬರು ವ್ಯಕ್ತಪಡಿಸಿದ್ದರು. ಅವರ ಹೆಸರೇ ವಿವೇಕ್ ಓಬೇರಾಯ್.

ವಿವೇಕ್ ಓಬೇರಾಯ್ ಪಕ್ಕಾ ಅಯ್ಯಪ್ಪ ಭಕ್ತರಾಗಿದ್ದು, ಅವರು ಯಾವ ಮಹಿಳಾವಾದಿಗಳಿಗಿಂತಲೂ ಕಮ್ಮಿಯಿಲ್ಲ ಎಂಬಂತೆ ಈವರೆಗೂ ಅವರು ಸರಿಸುಮಾರು 2000 ಕ್ಕೂ ಅಧಿಕ ಹೆಣ್ಣುಮಕ್ಕಳನ್ನ ವೇಶ್ಯಾವಾಟಿಕೆ ಜಾಲದಿಂದ ಬಂಧಮುಕ್ತ ಮಾಡಿಸಿದ್ದಾರೆ. ತಾನು ಮಹಿಳೆಯರ ಸ್ವಾತಂತ್ರ್ಯಕ್ಕೆ ಹೋರಾಡುತ್ತಿದ್ದೇನೆ ಎಂದು ಬೊಂಬ್ಡಾ ಬಜಾಯಿಸಿಕೊಂಡು ತಿರುಗಾಡುವ ಸೋ ಕಾಲ್ಡ್ ಮಹಿಳಾವಾದಿಗಳಂತೆ ಅಲ್ಲ ವಿವೇಕ್ ಓಬೇರಾಯ್.

ಅಸಲಿಗೆ ಮಹಿಳೆಯರ ಸಬಲೀಕರಣದಕಾಗಿ, ಅವರ ಸಮಸ್ಯೆಗಳ ಸ್ಪಂದನೆಗಾಗಿ ವಿವೇಕ್ ಓಬೇರಾಯ್ ಯಾವ ಫೆಮಿನಿಸ್ಟ್ ಗಳಿಗೂ ಕಮ್ಮಿಯಿಲ್ಲ ಎಂಬಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ವಿವೇಕ್ ಓಬೇರಾಯರ ಜೊತೆ ಜೊತೆಗೆ ಅವರ ಕುಟುಂಬವೂ ಈ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ಹಲವಾರು ಸಾಮಾಜಿಕ ಸಂಘಟನೆಗಳ ಜೊತೆಗೂಡಿ ಮಹಿಳೆಯರ ಹಕ್ಕುಗಳಿಗಾಗಿ, ಅವರ ಸಬಲೀಕರಣಕ್ಕಾಗಿ ದುಡಿಯುತ್ತಿದ್ದಾರೆ.

ಶಬರಿಮಲೈ ಮಂದಿರದಲ್ಲಿ ಯಾವ ಹಿಂದೂ ಮಹಿಳೆಯೂ ಪ್ರವೇಶಿಸುತ್ತಿಲ್ಲ, ಆದರೆ ಮಂದಿರದಲ್ಲಿ ನುಗ್ಗೋಕೆ ಯತ್ನಿಸುತ್ತಿರೋರ ಹೆಸರುಗಳು ಹೀಗಿವೆ ನೋಡಿ, ಸ್ವೀಟಿ ಮೇರಿ(ಕ್ರಿಶ್ಚಿಯನ್), ಫಾತಿಮಾ(ಸುನ್ನಿ ಮುಸ್ಲಿಂ), ಕವಿತಾ ಜಕ್ಕಲ್(ಕ್ರಿಶ್ಚಿಯನ್). ಕೇರಳದ ವಾಮಪಂಥೀಯ ಕಮ್ಯುನಿಸ್ಟ್ ಸರ್ಕಾರ ಅಯ್ಯಪ್ಪನ ಸನ್ನಿಧಿಯಲ್ಲಿ ಈ ಮಹಿಳೆಯರನ್ನ ನುಗ್ಗಿಸಿ ದೇವಸ್ಥಾನದ ಪಾವಿತ್ರ್ಯತೆಯನ್ನ ಹಾಳು ಮಾಡುವ ಸಂಚಿಗೆ ಭರಪೂರ ಬೆಂಬಲ ನೀಡುತ್ತಿದೆ. ಇಷ್ಟೇ ಅಲ್ಲದೆ ಅನ್ಯಧರ್ಮೀಯ ಮತಾಂಧರನ್ನ ದೇವಸ್ಥಾನ ಪ್ರವೇಶಿಸಲು ಪೋಲಿಸ್ ಭದ್ರತೆಯೊದಗಿಸಿ ನಿಜವಾದ ಅಯ್ಯಪ್ಪ ಭಕ್ತರನ್ನ ರಕ್ತಸಿಕ್ತವಾಗುವಂತೆ ಬಡಿಯುತ್ತಿದ್ದಾರೆ.

ವಿವೇಕ್ ಓಬೇರಾಯ್ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು, ಈ ಸಮಯದಲ್ಲಿ ಪತ್ರಕರ್ತರೊಬ್ಬರು ಅವರನ್ನ “ಶಬರಿಮಲೈ ವಿಚಾರದಲ್ಲಿ ನಿಮ್ಮ ಸ್ಟ್ಯಾಂಡ್ ಏನು ಸರ್?” ಎಂದು ಕೇಳಿದಾಗ ವಿವೇಕ್ ಓಬೇರಾಯ್ ಹತ್ತಿರತ್ತಿರ ಐದು ನಿಮಿಷಗಳ ಕಾಲ ಆ ಪ್ರಶ್ನೆಗೆ ಉತ್ತರಿಸಿ ಹಿಂದುಗಳ ಪೆವಾಗಿ, ಅಯ್ಯಪ್ಪ ಸ್ವಾಮಿಯ ಭಕ್ತರ ಪರವಾಗಿ ಹಾಗು ಧರ್ಮವಿರೋಧಿಗಳ ಕರಾಖ ಮುಖದ ಬಗ್ಗೆ ಎಕ್ಸಪೋಸ್ ಮಾಡುತ್ತ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ‌.

ವಿವೇಕ್ ಓಬೇರಾಯ್ ಮಾತನಾಡುತ್ತ “ಪ್ರತಿಯಿಬ್ಬ ವ್ಯಕ್ತಿಗೂ ತನ್ನ ಮನೆಯಲ್ಲಿ, ಸಮಾಜದಲ್ಲಿ ನೀತಿ ನಿಯಮಗಳನ್ನ ರೂಪಿಸುತ್ತಾನೆ ಹಾಗು ಇದೇ ರೀತಿಯಲ್ಲಿ ದೇವಸ್ಥಾನಗಳನ್ನ ಕಟ್ಟಿದ ಬಳಿಕ ದೇವಸ್ಥಾನಗಳದ್ದೂ ಅದರದ್ದೇ ಆದ ನಿಯಮಗಳನ್ನ ರೂಪಿಸಲಾಗಿರುತ್ತದೆ‌, ಅದೇ ರೀತಿ ಶಬರಿಮಲೈ ಮಂದಿರದಲ್ಲೂ ನೀತಿ ನಿಯಮಗಳಿವೆ ಹೊರತು ಅದು ಮಹಿಳಾ ವಿರೋಧಿ ಅಲ್ಲವೇ ಅಲ್ಲ.

ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಹಲವಾರು ಮಂದಿರಗಳಿವೆ, ಉದಾಹರಣೆಗೆ ಕನ್ಯಾಕುಮಾರಿಯ ಭಗವತಿ ಮಂದಿರದಲ್ಲಿ ಪುರುಷರಿಗೆ ಪ್ರವೇಶವಿಲ್ಲ ಹಾಗೆಂದ ಮಾತ್ರಕ್ಕೆ ಅದು ಪುರುಷ ವಿರೋಧಿ ಮಂದಿರವೆಂದು ಹೇಳುತ್ತೀವ? ಭಾರತದ 99.99% ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಯಾರು ಬೇಕಾದರೂ ಹೋಗಬಹುದು ಅಲ್ಲಿ ಪುರುಷರು, ಮಹಿಳೆಯರು ತೆರಳುವಂತಿಲ್ಲ ಎಂಬ ಯಾವ ನಿಯಮಗಳೂ ಇಲ್ಲ. ಆದರೆ ಕೆಲ ಮಂದಿರಗಳಲ್ಲಿ ವಿಶೇಷ ನಿಯಮಗಳಿವೆ, ಕೆಲವುದರಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲವಾದರೆ ಇನ್ನು ಕೆಲವುದರಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಹೀಗೆಂದ ಮಾತ್ರಕ್ಕೆ ಅದು ಪುರುಷರ ಅಥವ ಮಹಿಳಾ ವಿರೋಧಿ ಎಂದು ಹೇಳೋಕಾಗುತ್ತಾ?

ಶಬರಿಮಲೈ ಮಂದಿರಕ್ಕೆ ನಾನು ಹಲವಾರು ಬಾರಿ ಹೋಗಿದ್ದೇನೆ, ಕೇರಳದಲ್ಲಿ ನಮಗೆ ಪ್ರವೇಶ ಸಿಕ್ಕಿಲ್ಲ ಎಂದು ಯಾವ ಮಹಿಳೆಯೂ ಹೇಳಿದ್ದನ್ನ ನಾನು ಕೇಳಿಲ್ಲ. ಇವಾಗ ಯಾರು ಶಬರಿಮಲೈ ದೇವಸ್ಥಾನ ಮಹಿಳಾ ವಿರೋಧಿ ಎಂದು ಹೇಳಿತ್ತಿದ್ದಾರೋ ಅವರು ತಮ್ಮದೇ ಆದ ಅಜೆಂಡಾ ನಡೆಸುತ್ತಿದ್ದಾರೆ. ಯಾವ ಅಯ್ಯಪ್ಪ ಭಕ್ತರೂ ಅದು ಪುರುಷರಾಗಲಿ‌ ಮಹಿಳೆಯರಾಗಲಿ ದೇವಸ್ಥಾನದ ನಿಯಮಗಳನ್ನ ಗಾಳಿಗೆ ತೂರುವ ಕೆಲಸವನ್ನ ಮಾಡುತ್ತಿಲ್ಲ.

ಈ ದೇಶದಲ್ಲಿ ಕೆಲವರು ತಮ್ಮನ್ನ ತಾವು ಮಹಿಳಾವಾದಿಗಳು ಎಂದು ಹೇಳಿಕೊಳ್ಳುತ್ತಾರೆ ಆದರೆ ಅದರಲ್ಲಿ ಬಹುತೇಕರಿಗೆ ಮಹಿಳೆಯರ ಅಧಿಕಾರ, ರಕ್ಷಣೆಯ ಬಗ್ಗೆ ಯಾವುದೇ ಕಾಳಜಿಯಾಗಲಿ ಗಂಧ ಗಾಳಿಯೂ ಇರುವುದಿಲ್ಲ.

ಕೇರಳದಲ್ಲಿ ಕೆಂಪು (ವಾಮಪಂಥೀಯ ಕಮ್ಯುನಿಸ್ಟ್) ಸರ್ಕಾರವಿದೆ ಅದೇ ಕೇರಳದ ಬಾಸ್, ದೆಹಲಿಯಲ್ಲಿ ಸುಪ್ರೀಂಕೋರ್ಟ್ ಬಾಸ್ ಇದೆ, ಆದರೆ ಎಲ್ಲರಿಗಿಂತಲೂ ದೊಡ್ಡ ಬಾಸ್ ಅಯ್ಯಪ್ಪ ಅನ್ನೋದನ್ನ ಈ ಜನರಿಗೆ ಇನ್ನೂ ಅರ್ಥವಾಗಿಲ್ಲ ಅನ್ಸತ್ತೆ‌. ದೇವಸ್ಥಾನಗಳನ್ನ ಮಹಿಳಾ ವಿರೋಧಿ ಎಂದು ಹಿಂದೂ ಧರ್ಮದ ಕುರಿತಾಗಿ ಟೀಕೆ ಟಿಪ್ಪಣಿ ಮಾಡುವವರು ಬೇರೆ ಯಾವ ಧರ್ಮದಲ್ಲಿ ಮಹಿಳೆಯರಿಗೆ ಇಷ್ಟು ಸ್ವಾತಂತ್ರ್ಯ, ಸಮ್ಮಾನ, ಗೌರವ ಕೊಡುತ್ತಾರೆ ಅನ್ನೋದನ್ನೂ ಹೇಳಬೇಕು” ಎಂದಿದ್ದಾರೆ ವಿವೇಕ್ ಓಬೇರಾಯ್

ಅವರು ಹೇಳಿದ್ದೇನು ಇಲ್ಲಿದೆ ಅದರ ವಿಡಿಯೋ

– Team Nationalist Views

Nationalist Views ©2018 Copyrights Reserved

 •  
  9.7K
  Shares
 • 9.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com