Connect with us
Loading...
Loading...

ಪ್ರಚಲಿತ

ಸಾವರ್ಕರರನ್ನೇ ಬಿಡದ ಈಕೆ ಮೋದಿಜಿಯನ್ನು ಬಿಡ್ತಾಳಾ? ಈಕೆಯ ರಾಜಕೀಯ ಹಪಹಪಿ ಆ್ಯಕ್ ಥೂ….

Published

on

 • 3
 •  
 •  
 •  
 •  
 •  
 •  
 •  
  3
  Shares

ರಮ್ಯಾ ಬರೆಯೋದು ಸ್ವಲ್ಪ ತಡವಾಯಿತು. ಅತಿ ಕಡಿಮೆ ವಯಸ್ಸಲ್ಲಿ (ರಾಜಕೀಯದಲ್ಲಿ) ಮೇಲೆ ಬಂದ ನೀನು ಮಾಡುತ್ತಿರೋದು ಸರೀನಾ? ಈ ಹಿಂದೆ ಸಾವರ್ಕರರಿಗೆ ನಿಂದಿಸಿದ್ದೆ.‌ ಈಗ ಮೋದಿಯವರನ್ನು ನಿಂದಿಸಿದ್ದೀಯಲ್ಲ. ಪ್ರಧಾನಿಯವರಿಗೆ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ. ಆದರೆ ಒಂದು ದೇಶದ ಅದರಲ್ಲೂ ಭಾವನೆಯ ಆಗರವಾಗಿರುವ ಭಾರತದ ಪ್ರಧಾನಿಯನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ. ಸಾವರ್ಕರರ ಬಗ್ಗೆ ನೀನು ಮಾತನಾಡಿದಾಗ ನಿನಗೆ ಇತಿಹಾಸದ ಪರಿಜ್ಞಾನ ಇಲ್ಲ ಅದಕ್ಕಾಗಿಯೇ ಈ ರೀತಿಯಲ್ಲಿ ಮಾತಾಡಿರಬಹುದು ಸರಿ ಹೋಗ್ತಾಳೆ ಅಂತ ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಂಡೆವು.

ಅಷ್ಟಕ್ಕೂ ಅಂದು ನೀನು ಎಂತಹ ಮಹಾಪುರುಷನನ್ನು ನಿಂದಿಸಿದ್ದೆ ಗೊತ್ತಾ? (ಸಾವರ್ಕರರ ಕುರಿತು)

ಸಾವರ್ಕರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ ಒಬ್ಬ ನಿಸ್ವಾರ್ಥ ನಿಷ್ಠಾವಂತ ದೇಶಭಕ್ತನಿಗೆ ನೀವು ಅಪಮಾನ ಮಾಡಿದ್ದೆಲ್ಲ ಏನೆನ್ನಬೆಕು ನಿನಗೆ? ರಾಜಕೀಯದಲ್ಲಿದ್ದು ದಿನಕ್ಕೊಂದು ಡೊಂಬರಾಟ ಆಡುತಿದ್ದೀಯಾ ಅದೇನಾದರೂ ಇರಲಿ. ಮಾತು ಮಾತಿಗೆ ನಾವು ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರೆಂದು ಬೊಬ್ಬೆ ಹೊಡಿಯುತ್ತಿರುವ ನಿಮ್ಮ ಕಾಂಗ್ರೆಸ್ಸಿನಿಂದ ಎಷ್ಟು ಜನ ಗಲ್ಲಿಗೇರಿದ್ದಾರೆ, ಎಷ್ಟು ಜನ ಅಂಡಮಾನ ಜೈಲಿಗೆ ಹೋಗಿ ಕರಿ ನೀರಿನ ಶಿಕ್ಷೆ ಅನುಭವಿಸಿದ್ದಾರೆ ಹೇಳುವೆಯಾ? ಯಾವುದು ನೀನು ಓದಿರುವ ಇತಿಹಾಸ? ಅಥವಾ ಓದೇ ಇಲ್ವಾ?

ಸಾಮಾನ್ಯವಾಗಿ ರಾಜಕೀಯದಲ್ಲಿದ್ದುಕೊಂಡು ಇತರ ಪಕ್ಷಗಳನ್ನು ವಿರೋಧಿಸುವುದು ರಾಜಕೀಯ ಗುಣ. ಹಾಗಂತ ಜೀವದ ಹಂಗು ತೊರೆದು ಹೋರಾಡಿದವರನ್ನು ತೆಗಳುವ ಕೀಳು ಮಟ್ಟಕ್ಕೆ ಇಳಿದಿದ್ದೆಯಲ್ಲ? ಇದೇನಾ ನಿನ್ನ ರಾಷ್ಟ್ರ ಪ್ರೇಮ? ಅಥವಾ ರಾಜಕಾರಣ ಅಂದರೆ ಹೀಗೆ ಅಂತ ತೋರಿಸುವುದಕ್ಕೆ ಹೊರಟಿದ್ದಿರಾ?. ಇಷ್ಟಕ್ಕೂ ನೀನು ಬರಿ ನಟನೆಯಿಂದ ಮೋಹಕ ತಾರೆಯೆಂಬ ಬಿರುದು ಪಡೆದುಕೊಂಡಿದ್ದೇ.

ನೆನಪಿರಲಿ, ಸಾವರ್ಕರೆಂಬ ರಿಯಲ್ ಹೀರೊ ನಟನೆ ಮಾಡಿದವರಲ್ಲ. ಸ್ವಾತಂತ್ರಕ್ಕಾಗಿ ತನ್ನ ರಕ್ತ ಬಸಿದು “ವೀರ” ಎಂಬ ಬಿರುದು ಪಡೆದಿದ್ದಾರೆ. ಒಂದೇ ಸಲ ಯೋಚಿಸು. ನೀನು ಬಣ್ಣ ಬಿಟ್ಟ ಮೇಲೆ ನಿನ್ನ ಬಿರುದು ಅಳಿಸಿ ಹೋಗಿದೆ. ಈಗ ನಿನ್ನನ್ನು ಯಾರು ಕೂಡ ಮೋಹಕ ತಾರೆ ರಮ್ಯಾ ಎಂದು ಕರೆಯುವುದಿಲ್ಲ.

ಆದರೆ ಸಾವರ್ಕರವರನ್ನು ನೋಡಿ ತಾನಾಗಿಯೇ ಅವರ ಹೆಸರಿನ ಮುಂದೆ “ವೀರ” ಬಂದು ಸೇರಿಕೊಳ್ಳುತ್ತದೆ. ವೀರ ಸಾವರ್ಕರ ಅಂದಾಕ್ಷಣ ಅವರ ಹೆಸರಿಗೆ ಬಾನೆತ್ತರದ ಭಾವನೆ ಹೃದಯದಿಂದ ಬರುತ್ತದೆ. ಮೋಹಕ ತಾರೆ ಎಂದರೆ ಈ ಹಿಂದೆ ಇದ್ದ ನಿನ್ನ ಮೇಲೆ ಯಾವ ಮೋಹವು ಉಕ್ಕಿ ಬರುತ್ತಿಲ್ಲ. ಎಲ್ಲವೂ ಕಳೆದು ಹೋಗಿದೆ. ನಿನಗೂ ಅವರಿಗೂ ಇರುವುದು ಇದೆ ವ್ಯತ್ಯಾಸ.

ನಮಗೆ ಗೊತ್ತು.. ರಾಜಕೀಯದಲ್ಲಿರುವ ನಿನೆಗೆ ನಿರಂತರವಾಗಿ ಪ್ರಚಾರ ಬೇಕೆಂಬುವುದು. ಸುದ್ದಿಯಲ್ಲಿರಬೇಕಾದರೆ ಸಾಧನೆ ಮಾಡಿ ಜನರ ಮುಂದೆ ಬಾ. ಜನ ನಿನ್ನನ್ನು ತಾನಾಗಿಯೇ ಒಪ್ಪಿಕೊಳ್ಳುತ್ತಾರೆ. ಆದರೆ ನೀನೇನು ಮಾಡುತಿದ್ದೀಯಾ? ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ಸಿಕ್ಕಿತ್ತೆಂಬ ಹುಮ್ಮಸ್ಸಿನಿಂದ ಒಬ್ಬ ನಿಷ್ಠಾವಂತ ಸ್ವಾತಂತ್ರ್ಯ ಹೋರಾಟಗಾರನಿಗೆ ಅತಿ ಕೀಳು ಮಟ್ಟಕ್ಕಿಳಿದು ಅವಮಾನ ಮಾಡುತಿದ್ದೆ; ಈಗ ದೇಶದ ಪ್ರಧಾನಿಯ ಕುರಿತಂತೆ ಅತೀ ಕೀಳು ಮಟ್ಟದ ಟ್ವೀಟ್ ಮಾಡಿದ್ದೀಯ. ಇದೇನಾ ನಿನ್ನ ನೈತಿಕತೆ? ಇದೇನಾ ನೀನು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರಿಗೆ ಮತ್ತು ದೇಶ ಭಕ್ತ ಮೋದಿಜಿಯವರಿಗೆ ಕೊಡುವ ಗೌರವ? ಇಷ್ಟಕ್ಕೂ ನೀನು ಯಾವ ಇತಿಹಾಸ ಓದಿದ್ದೀಯಾ ಸಾವರ್ಕರರ ವ್ಯಕ್ತಿತ್ವ ಎಂತದ್ದು ಅಂತಾ ಗೊತ್ತಾ ನಿನಗೆ?

ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ 1902ರಲ್ಲಿ 19ನೇ ವಯಸ್ಸಿಗೆ ಹೋರಾಟಕ್ಕೆ ಧುಮುಕಿ, ಮುಂದೆ ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯದ ಹಾಸ್ಟೆಲ್ ನಿಂದ ಹೊರದೂಡಲ್ಪಟ್ಟ ಏಕೈಕ ಮತ್ತು ಮೊದಲ ವಿದ್ಯಾರ್ಥಿ. ನಮ್ಮ ದೇಶದಲ್ಲಿ ವಿದೇಶಿ ಬಟ್ಟೆಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶದ ಅಭಿಮಾನಿ. ಸ್ವದೇಶ, ಸ್ವರಾಜ್ಯ ಎಂದು ಉಚ್ಛರಿಸುವುದೇ ಮಹಾಪರಾಧವಾಗುತ್ತಿದ್ದ ಕಾಲದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು.

ದಾಸ್ಯ ರಕ್ಕಸನ ಎದೆ ಮೆಟ್ಟಲು ಪ್ರಯತ್ನ ಪಟ್ಟುದಕ್ಕಾಗಿ ತಾನು ಗಳಿಸಿದ್ದ ಬಿ.ಎ. ಪದವಿಯನ್ನು ಕಳೆದುಕೊಂಡ ಮೊಟ್ಟಮೊದಲ ಪದವೀಧರ. ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್. ಹಿಂದುಸ್ತಾನದ ಸ್ವಾತಂತ್ರ್ಯದ ಪ್ರಶ್ನೆಯು ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಕೂಡ ಮಹತ್ವ ಪಡೆಯುವಂತೆ ಮಾಡಿದ ಮೊಟ್ಟ ಮೊದಲ ಭಾರತೀಯ ತರುಣ.

ಪ್ರಕಟಣೆಗೂ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಏಕೈಕ ಲೇಖಕ. ಬ್ರಿಟಿಷರ ನ್ಯಾಯಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ರಾಜಕೀಯ ಆರೋಪಿ. ಜಗತ್ತಿನ ರಾಜಕೀಯ ಇತಿಹಾಸದಲ್ಲೇ, ಹೇಗ್ ಅಂತರರಾಷ್ಟ್ರೀಯ ನ್ಯಾಯಲಯದೆದುರು ತನ್ನ ಮೊಕದ್ದಮೆಯನ್ನು ನಡೆಸುವಂತೆ ಮಾಡಿದ ಮೊಟ್ಟ ಮೊದಲನೆಯ ರಾಜಕೀಯ ಕೈದಿ. ಜಗತ್ತಿನ ರಾಜಕೀಯ ಚರಿತ್ರೆಯಲ್ಲೇ ಐವತ್ತು ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲು ರಾಜಕೀಯ ಸೆರೆಯಾಳು.

ಬರವಣಿಗೆಗೆ ಅಗತ್ಯವಾದ ಸಾಮಗ್ರಿ ಸೌಲಭ್ಯಗಳಾಗಲಿ ಇಲ್ಲದಿದ್ದರೂ, ಖೈದಿಗಳಿಗೆ ಬರೆಯುವುದನ್ನು ನಿಷೇಧಿಸಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿಪಾಠ ಮಾಡಿ ಹದಿನಾಲ್ಕು ವರ್ಷದ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ! ಇಷ್ಟೆಲ್ಲಾ ಓದದಿದ್ದರೂ ಚಿಂತೆಯಿಲ್ಲ. ಟ್ವೀಟ್ ಮಾಡುವ ಮೊದಲು ಒಂದೇ ಒಂದು ಸಾರಿ ಸಾವರ್ಕರ್ ಬಗ್ಗೆ ಇಂದಿರಾಗಾಂಧಿಯವರ ಅಭಿಪ್ರಾಯವನ್ನಾದರೂ ಅರಿತಿದ್ದರೆ ಚೆನ್ನಾಗಿರುತಿತ್ತು. ಮೋದಿಜಿಯವರ ಬಗ್ಗೆ ಟ್ವೀಟ್ ಮಾಡುವ ಮುನ್ನ ಆತ ಭಾರತೀಯರ ಮನಸ್ಸಿನಲ್ಲಿ ಯಾವ ಸ್ಥಾನದಲ್ಲಿದ್ದಾರೆಂದು ಅರಿತುಕೊಳ್ಳಬೇಕಿತ್ತು.

ವಸಾಹತುಶಾಹಿ ಕಾಲಘಟ್ಟದಲ್ಲಿ ಭಾರತೀಯರನ್ನು ಭೌದ್ಧಿಕ ಗುಲಾಮರನ್ನಾಗಿ ಸೃಷ್ಠಿಸಲೆಂದೇ ಆರಂಭವಾದ ಶೈಕ್ಷಣಿಕ ಪದ್ಧತಿಯನ್ನು ಸ್ವಾತಂತ್ರ್ಯ ಗಳಿಸಿಕೊಂಡ ನಂತರವೂ ಅದನ್ನೇ ಬುದ್ಧಿಜೀವಿ ಪಡೆ ಮುಂದುವರೆಸಿಕೊಂಡು ಬಂದಿದೆ. ಅತಿ ಬುದ್ಧಿವಂತರೆನಿಸಿಕೊಂಡ ಕೆಲವು ಗಂಜಿ ಗಿರಾಕಿಗಳು ಅದನ್ನೇ ತಮ್ಮ ಬಂಡವಾಳ ಮಾಡಿಕೊಂಡಿದಲ್ಲದೇ ಶುದ್ಧ ಇತಿಹಾಸ ತಿರುಚಿ ಹೊಟ್ಟೆ ತುಂಬಿಸಿಕೊಳ್ಳುತ್ತ ಪ್ರಜ್ಞಾವಂತರ ದಾರಿ ತಪ್ಪಿಸುತ್ತಿದ್ದಾರೆ.

ಅತಿ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಟಿಸಿ ಬೇರೆಯವರಿಂದ ದುಡ್ಡು ಹೊಂದಿಸಿ ಉಚಿತ ವಿತರಣೆ ಮಾಡಿ ಬೌದ್ಧಿಕ ದಾಳಿ ಮಾಡುತ್ತಿರುವುದಲ್ಲದೆ, ಅಹಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ನಮ್ಮ ವರ್ತಮಾನದ ಯುವಕರು ಇಂದು ಮಾನಸಿಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಸ್ವಂತಿಕೆಯನ್ನು ಬಿಟ್ಟು ಮಾರಕ ಸಿದ್ಧಾಂತಗಳ ಗುಲಾಮರಾಗುತ್ತಿದ್ದಾರೆ.

ಈಗ ರಮ್ಯಾ ಕೂಡಾ ತನ್ನ ರಾಜಕೀಯ ಹಪಹಪಿಗೋ ಅಥವಾ ತನ್ನ ಮುಠ್ಠಾಳತನಕ್ಕೋ ಹುಚ್ಚು ಹುಚ್ಚಾಗಿ ಬರೆದುಕೊಳ್ಳುತ್ತಿದ್ದಾಳೆ. ನೀನು ನಟನೆಯಿಂದ ರಾಜಕೀಯಕ್ಕೆ ಬಂದವಳು. ಅರ್ಥಾತ್‌ ಸುಳ್ಳಿಗೆ ಬಣ್ಣದ ಲೇಪನ ಮಾಡಿ ಪ್ರಚಾರಗೊಂಡವಳು. ಅದೇ ಬಣ್ಣವನ್ನು ವಾಸ್ತವ ಇತಿಹಾಸದ ಮೇಲೆ ಚೆಲ್ಲಿ ಸತ್ಯ ಮರೆಮಾಚಬೇಡ.

ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿಕೊಂಡ ಭವ್ಯ ಭಾರತದ ಪ್ರಧಾನಿಯ ಕುರಿತು ಬರೆಯುವ ಮುನ್ನ ತುಂಬಾ ಆಲೋಚನೆ ಮಾಡು. ಯಾಕಂದ್ರೆ ಆತ ದೇಶವನ್ನು ಕಟ್ಟಲೆಂದೇ ಬಂದವನು, ಭಾರತವನ್ನು ವಿಶ್ವಗುರುವಾಗಿಸಲೆಂದೇ ಬಂದವನು.

ಇಡೀ ವಿಶ್ವವೇ ನಮ್ಮ ಪ್ರಧಾನಿಯನ್ನು ಕೊಂಡಾಡುತ್ತಿದೆ. ನೀನು ಕೊಂಡಾಡು ಅಂತ ನಾವು ಹೇಳಲ್ಲ. ಹಾಗೆ ಪ್ರಶ್ನಿಸಬೇಡವೆಂದು ನಾವು ಹೇಳಲ್ಲ. ಆದರೆ ನಿಂದಿಸೋ ಹಕ್ಕು ಯಾರಿಗೂ ಇಲ್ಲ.

ನರೇಂದ್ರ ಮೋದಿಯವರು ಬಂದದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ. ಅವರಿಗೆ ಕಾಂಗ್ರೆಸ್ಸಿನಿಂದ ದೇಶಪ್ರೇಮದ ಪಾಠ ಕಲಿಯುವ ಅಗತ್ಯವೇ ಇಲ್ಲ. ದೇಶದಲ್ಲಿ ಯಾವುದೇ ರೀತಿಯ ಅವಘಡವಾದರೂ ಮೊದಲು ನೆನಪಾಗೋದು ಸೇನೆ. ಎರಡನೇಯದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈ ದೇಶದ ಎರಡನೇ ಸೇನೆಯೆಂದರೆ ತಪ್ಪಾಗಲಿಕ್ಕಿಲ್ಲ. ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. ದೇಶದಲ್ಲಿ ಎಲ್ಲೇ ಏನೇ ಅವಘಡವಾದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಲ್ಲಿಗೆ ಧಾವಿಸಿ ನಿಸ್ವಾರ್ಥದಿಂದ ನೆರವಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿದ್ದು 1925ರಲ್ಲಿ. ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ.ಕೇಶವ ಬಲಿರಾಮ ಹೆಡಗೆವಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು. ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಹೆಮ್ಮರವಾಗಿದೆ.

ಜಗತ್ತಿನಲ್ಲೇ ಅತೀ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ಸುಮ್ಮನೆ ಬೆಳೆದು ನಿಂತಿಲ್ಲ. ಸಂಘಕ್ಕೆ ಅನೇಕ ಅವಮಾನ, ಅಪಮಾನಗಳಾಗಿವೆ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಬೆಳೆದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತುಳಿಯಲು ತುಂಬಾ ಜನ, ತುಂಬಾ ವರ್ಷಗಳಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅವುಗಳನ್ನೆಲ್ಲಾ ಮೆಟ್ಟಿ ನಿಂತು ಈಗ ಹೆಮ್ಮರವಾಗಿ ಬೆಳೆದಿದೆ.

ಸಂಘದ ಕಣಕಣದಲ್ಲೂ ದೇಶಪ್ರೇಮ ಅಡಗಿದೆ. ಸಂಘದ ಕಾರ್ಯಕರ್ತರಲ್ಲಿ ಯಾವುದೇ ಸ್ವಾರ್ಥವಿಲ್ಲ. ಇಡೀ ಜಗತ್ತು ಸಂಘಟನೆ ನೋಡಿ ಬೆಕ್ಕಸ ಬೆರಗಾಗಿದೆ. ಏಕೆ ಗೊತ್ತಾ? ಈ ಸಂಘಾನೆ ಅದ್ಯಾವ base ಮೇಲೆ ನಿಂತಿದೆ? ಅದ್ಹೇಗೆ ಇಷ್ಟು ಹೆಮ್ಮರವಾಗಿದೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ತಮ್ಮಲ್ಲಿ ತಾವೇ ಕೇಳಿಕೊಂಡು ಬೆರಗಾಗಿದ್ದಾರೆ. ಅದ್ಯಾವ base ಮೇಲೆ ಸಂಘಟನೆ ನಿಂತಿದೆ ಗೊತ್ತಾ? ದೇಶಪ್ರೇಮವೇ ಇದಕ್ಕೆ base. ಹೀಗಾಗಿಯೇ ಒಡೀ ಜಗತ್ತು ಬೆರಗಾಗಿದೆ‌. ಇಂತಹ ಸಂಘಟನೆಯಿಂದ ಮೋದಿಯವರಿಗೆ ಕಾಂಗ್ರೆಸ್ಸಿನಿಂದ ದೇಶಪ್ರೇಮದ ಪಾಠದ ಅವಶ್ಯಕತೆ ಇಲ್ಲ.

ಮೋದಿಯವರು ನಶೆಯಲ್ಲಿ ಮಾತಾಡಿದ್ದಾರೆ ಅಂತ ಹೇಳ್ತಿರೋ ರಮ್ಯ ಅವರೇ ಅಂದು ಗಾಂಜಾ ಕೇಸಿನಲ್ಲಿ ಯಾರು ಸಿಕ್ಕಿಹಾಕೊಂಡಿದ್ದರು ಅಂತ ಗೊತ್ತಿದೆಯಾ? ಹೇಳೋಕೆ ಇಂತಹ ತುಂಬಾ ಪ್ರಕರಣಗಳಿವೆ. ರಮ್ಯ ಪ್ರೀತಿಯಿಂದ ಜನರ ಜೊತೆ ಬೆರೆತು ಜನರ ಮನಸ್ಸು ಗೆಲ್ಲು. ಇಂತಹ ತಪ್ಪುಗಳನ್ನು ಪದೇ ಪದೇ ಮಾಡಿ ಇಕ್ಕಟ್ಟಿಗೆ ಸಿಲುಕಬೇಡ.

– Nationalist Mahi and Shivanand Saidapur

 •  
  3
  Shares
 • 3
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com