Connect with us
Loading...
Loading...

ಪ್ರಚಲಿತ

ಸ್ಪೋಟಕ ಸುದ್ದಿ: ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ; WikiLeaks ನಿಂದ ಬಯಲಾಯ್ತು ಕಾಂಗ್ರೆಸ್ಸಿನ ಪ್ರಭಾವಿ ರಾಜಕಾರಣಿಯ ಮತ್ತೊಂದು ದೇಶದ್ರೋಹಿ ಕೃತ್ಯ..!

Published

on

 • 3.4K
 •  
 •  
 •  
 •  
 •  
 •  
 •  
  3.4K
  Shares

ಕಾಂಗ್ರೆಸ್ ಪಕ್ಷ ಹಾಗು ಅದರ ನಾಯಕರುಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಯಾವ ಮಟ್ಟಿಗೆ ಬೇಕಾದರೂ ಇಳಿಯಬಲ್ಲರು ಎಂಬುದು ಇದೀಗ ಬಟಾಬಯಲಾಗಿದೆ ನೋಡಿ. ಹೌದು ತಮ್ಮ ಸ್ವಾರ್ಥಕ್ಕಾಗಿ ರಾಷ್ಟ್ರೀಯ ಭದ್ರತೆಗೇ ಸಂಚಕಾರ ತರುವಲ್ಲಿ ಕಾಂಗ್ರೆಸ್ಸಿನ ನಾಯಕರು ಮುಂದಾಗಿದ್ದರೆಂಬ ಸ್ಪೋಟಕ ಮಾಹಿತಿಯೊಂದು ಇದೀಗ ಬಯಲಾಗಿದೆ.

ಸದ್ಯದಲ್ಲೇ ನಡೆಯಲಿರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಭರ್ಜರಿಯಾಗಿ ಪ್ರಚಾರವನ್ನ ಮಾಡುತ್ತ, ಒಂದು ವೇಳೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದರೆ ಮುಂದಿನ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಕಮಲನಾಥ್ ಬಗ್ಗೆ ಇದೀಗ ಸ್ಪೋಟಕ ಮಾಹಿತಿಯೊಂದನ್ನ ವಿಕಿಲೀಕ್ಸ್ ಬಹಿರಂಗಪಡಿಸಿದೆ.

ವಿಕಿಲೀಕ್ಸ್ ಕೇಬಲ್ ನಿಂದ ಇದೀಗ ಬಿಡುಗಡೆಯಾಗಿರುವ ದಾಖಲೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ (ಪಶ್ಚಿಮ ಬಂಗಾಳದಲ್ಲಿ ರಾಜೀವ್ ಗಾಂಧಿಯ ಬಹಳ ಹತ್ತಿರದ ನಾಯಕನೆಂದು ಗುರುತಿಸಿಕೊಂಡಿದ್ದ) ಅಮೇರಿಕಾ ವಾಣಿಜ್ಯ ದೂತಾವಾಸಕ್ಕೆ ಭಾರತದ ಮಹತ್ವದ ವರ್ಗೀಕೃತ, ಸಂವೇದನಶೀಲ ವಿಷಯವನ್ನ ಅಂದರೆ ಭಾರತವು ಎರಡು ಪರಮಾಣು ಬಾಂಬ್ ಗಳನ್ನ ತಯಾರಿಸುತ್ತಿರುವ ಪ್ರಕ್ರಿಯೆಯ ಜೊತೆ ಜೊತೆ ‘ಶಾಂತಿಪೂರ್ವಕ ವಿಸ್ಫೋಟ’ ನಡೆಸುವ ಯೋಜನೆಯನ್ನ ರೂಪಿಸಿರುವ ಕುರಿತಾದ ಸೀಕ್ರೆಟ್ ವಿಷಯವನ್ನ ಭಾರತ-ಅಮೇರಿಕಾ ನಡುವೆ ನಡೆದಿದ್ದ ಸಭೆಯಲ್ಲಿ ಕಮಲನಾಥ್ ನೀಡಿದ್ದರು.

ಎಕಾನಾಮಿಕ್ ಟೈಮ್ಸ್ ನ ರಿಪೋರ್ಟಿನ ಪ್ರಕಾರ ಕಮಲನಾಥ್ ದೂತಾವಾಸದ ಅಪಾರ್ಟ್‌ಮೆಂಟ್ ನಲ್ಲಿ ಮಧ್ಯಾಹ್ನದ ವೇಳೆ ಊಟ ಮಾಡಿ ಬಳಿಕ ತಾವು ಹಾಗು ರಾಜೀವ್ ಗಾಂಧಿ ಮಾಡುತ್ತಿರೋ ಪ್ಲ್ಯಾನ್ ಗಳ ಬಗ್ಗೆ ಅಮೇರಿಕಾಗೆ ಮಾಹಿತಿ ನೀಡಿದ್ದರು. ಅದರಲ್ಲಿ ಅವರು ಕಾಂಗ್ರೆಸ್ಸಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಸಿದ್ದಾರ್ಥ್ ಶಂಕರ್ ರೈ ಹಾಗು ಓರಿಸ್ಸಾ ಮುಖ್ಯಮಂತ್ರಿ ನಂದಿನಿ ಸತಪತಿ ಯವರನ್ನ ಅಧಿಕಾರದಿಂದ ಕೆಳಗಿಳಿಸುವ ಯೋಜನೆಯ ಕುರಿತಾಗಿ ಹೇಳಿದ್ದರು, ಕಾರಣ ಸಂಜಯ್ ಗಾಂಧಿಗೆ ಆ ಇಬ್ಬರೂ ಮುಖ್ಯಮಂತ್ರಿಗಳು “ಅಪಾಯಕಾರಿ ಎಡಪಂಥೀಯ” ಎಂಬುದು ಗೊತ್ತಾಗಿತ್ತಂತೆ.

ರಿಪೋರ್ಟ್ ನ ಪ್ರಕಾರ ಬೆಳಕಿಗೆ ಬಂದಿರುವ ವಿಚಾರವೆಂದರೆ ಕಮಲನಾಥ್ ಇಂತಹದ್ದೊಂದು ಪ್ಲ್ಯಾನ್ ಮಾಡಲು ಕಾರಣವೇನೆಂದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಲ್ಲಿನ ವಿದ್ಯುತ್ ಮಂತ್ರಿಯಾಗಿದ್ದ ಎಬಿಎ ಘನಿ ಖಾನ್ ರನ್ನ ಮಾಡಲು ಬಯಸಿದ್ದರಂತೆ. ಕಾರಣ ಕಮಲನಾಥ್ ಗೆ ಘನಿ ಖಾನ್ ಎಲೆಕ್ಟ್ರಿಕ್ ಕೇಬಲ್ಸ್ ಗಳ ದೊಡ್ಡ ಕಾಂಟ್ರ್ಯಾಕ್ಟ್ ಒಂದನ್ನ ನೀಡಿದ್ದನಂತೆ. ಕಮಲನಾಥ್ ವಿದ್ಯುತ್ ಕೇಬಲ್ ನಿರ್ಮಾಣ ಮಾಡುವ ಕಂಪೆನಿಯ ಮಾಲೀಕನಾಗಿದ್ದ.

ಅಮೇರಿಕಾದ ರಾಜತಾಂತ್ರಿಕ ವ್ಯಕ್ತಿಗಳ ಜೊತೆ ಮಧ್ಯಾಹ್ನದ ಭೋಜನದ ಸಂದರ್ಭದಲ್ಲಿ ಕಮಲನಾಥ್ ರಾಷ್ಟ್ರದ ಸುರಕ್ಷತೆಗೆ ಸಂಬಂಧಿಸಿಸಿದ ಮಹತ್ವದ, confidential ವಿಷಯಗಳನ್ನ ತಿಳಿಸಿದ್ದನಂತೆ. ಇಂಡಿಯಾ ಟುಡೇ ರಿಪೋರ್ಟಿನ ಪ್ರಕಾರ ಕಮಲನಾಥ್ ಎರಡನೆಯ ಪರಮಾಣು ಉಪಕರಣವನ್ನ ಸ್ಪೋಟಗೊಳಿಸುವ ಭಾರತದ ರಹಸ್ಯ ಯೋಜನೆಯನ್ನೂ ತಿಳಿಸಿದ್ದರಂತೆ.

ವಿಕಿಲೀಕ್ಸ್ ಕೇಬಲ್ ನಲ್ಲಿ ಬಯಲಾದ ಮತ್ತೊಂದು ವಿಚಾರವೆಂದರೆ ಭಾರತದ ಪರಮಾಣು ಕಾರ್ಯಕ್ರಮದಂತಹ ಸಂವೇದನಶೀಲ ಹಾಗು ರಹಸ್ಯ, confidential ವಿಚಾರ ತನಗೆ ತಿಳಿದಿದೆ ಎಂದು ಪ್ರಮುಖ ಕಾಂಗ್ರೆಸ್ ರಾಜಕಾರಣಿ ಕಮಲನಾಥ್ ತುಂಬಾ ಖುಷಿಯಾಗಿದ್ದರಂತೆ. ವಿಕಿಲೀಕ್ಸ್ ಕೇಬಲ್ ನಲ್ಲಿ ಎದುರಿಗೆ ಹೊರಬಂದ ಮತ್ತೊಂದು ವಿಷಯವೆಂದರೆ ಕಾಂಗ್ರೆಸ್ ಪಕ್ಷದ ಪ್ರಭಾವಿಯೊಬ್ಬರೇ ಹೇಳಿರುವ ಪ್ರಕಾರ ಪರಮಾಣು ಒಪ್ಪಂದಕ್ಕಾಗಿ ಬೆಂಬಲ ಸೂಚಿಸುವವರಿಗೆ ವಿಮಾನ, ಜೆಟ್ ಪ್ಲೇನ್ ಗಳನ್ನ ಲಂಚದ ರೂಪದಲ್ಲಿ‌ ನೀಡಿದ್ದರಂತೆ.

ಈ ರೀತಿಯ ಸ್ಪೋಟಕ ಮಾಹಿತಿಗಳು, ರಾಷ್ಟ್ರೀಯ ಹಿತಾಸಕ್ತಿಯನ್ನೇ ಬಲಿಕೊಡಲು ಮುಂದಾದ ಕಾಂಗ್ರೆಸ್ ಪಕ್ಷ ಹಾಗು ಅದರ ನಾಯಕರ ಬಗ್ಗೆ ಬಹಿರಂಗವಾದ್ದು ಇದೇ ಮೊದಲೇನಲ್ಲ. ಇದಕ್ಕೂ ಮೊದಲೂ ವಿಕಿಲೀಕ್ಸ್ ಸ್ಪೋಟಕ ವರದಿಯೊಂದನ್ನ ಬಹಿರಂಗಗೊಳಿಸಿತ್ತು. ಆ ರಿಪೋರ್ಟಿನಲ್ಲಿ ಸೋನಿಯಾ ಗಾಂಧಿ ಹೇಗೆ ಬಾಂಗ್ಲಾದೇಶಿ ಅಕ್ರಮ ನಿವಾಸಿಗಳನ್ನ ಭಾರತೀಯ ನಾಗರಿಕರನ್ನಾಗಿ ಪರಿವರ್ತಿಸಲು ಸಂಚು ನಡೆಸಿದ್ದರು ಹಾಗು ಅವರನ್ನ ದೇಶದಿಂದ ಹೊರದಬ್ಬದಿರಲು ಬಿಲ್ ನಲ್ಲಿ ಬದಲಾವಣೆ ತಂದು ಬಾಂಗ್ಲಾದೇಶಿ ಮುಸಲ್ಮಾನರನ್ನ ದೇಶದೊಳಗೇ ಇಟ್ಟುಕೊಳ್ಳಲು ಯತ್ನಿಸಿದ್ದರು.

ಭಾರತದ ಸುರಕ್ಷತೆಗೆ ಅಕ್ರಮ ಬಾಂಗ್ಲಾ ವಲಸಿಗರಿಂದ ಎಂಥಾ threat ಇದೆಯಂತ ಗೊತ್ತಿದ್ದರೂ ಸೋನಿಯಾ ಗಾಂಧಿ ಅವರನ್ನ ತನ್ನ ವೋಟಬ್ಯಾಂಕ್ ಗಾಗಿ ಸಮರ್ಥಿಸಿಕೊಂಡು ಭಾರತದಲ್ಲೇ ಇರಿಸಿ ಅವರನ್ನ ಭಾರತೀಯ ನಾಗರಿಕರನ್ನಾಗಿ ಮಾಡಲು ಅವರಿಗೆ ವೋಟರ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಡುವಲ್ಲಿಯೂ ಸೋನಿಯಾ ಗಾಂಧಿ ಷಡ್ಯಂತ್ರ ಮಾಡಿದ್ದರು ಎಂಬುದು ಬಹಿರಂಗವಾಗಿತ್ತು‌.


ಮಧ್ಯಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿವೆ ಹಾಗು 2019 ರ ಲೋಕಸಭಾ ಚುನಾವಣೆಗೂ ಹೆಚ್ಚು ದಿನಗಳು ಬಾಕಿಯಿಲ್ಲ‌. ಇಂಥಾ ಸಂದರ್ಭದಲ್ಲಿ ನೀವು ರಾಷ್ಟ್ರದ ಹಿತಾಸಕ್ತಿಯನ್ನ ಕಾಪಾಡಲು ಯಾರಿಗೆ ಮತ ಹಾಕಬೇಕು ಅಂತ ನೀವೇ ತೀರ್ಮಾನಿಸಬೇಕು. ನೀವು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಷ್ಟ್ರದ ಭದ್ರತೆಯನ್ನೇ ಪಣಕ್ಕಿಡುವ ರಾಷ್ಟ್ರದ ಈ ವಿರೋಧಿಗಳನ್ನ ಸಮರ್ಥಿಸುವಿರೋ ಇಲ್ಲ ದೇಶವನ್ನ ಜಗದ್ಗುರು ಮಾಡಲು ಹಾಗು ಜಗತ್ತಿನ ಸೂಪರ್ ಪವರ್ ರಾಷ್ಟ್ರವನ್ನಾಗಿ ಮಾಡಲು ಹಗಲಿರುಖು ಶ್ರಮಿಸುತ್ತಿರೋ ಪ್ರಧಾನಿ ಮೋದಿಯವರನ್ನ ಬೆಂಬಲಿಸುವಿರೋ ಆಯ್ಕೆ ನಿಮಗೆ ಬಿಟ್ಟಿದ್ದು.

– Team Nationalist Views

Nationalist Views ©2019 Copyrights Reserved

 •  
  3.4K
  Shares
 • 3.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com