Connect with us
Loading...
Loading...

ಪ್ರಚಲಿತ

“ವಂದೇ ಮಾತರಂ, ಭಾರತ್ ಮಾತಾ ಕೀ ಜೈ” ಎಂದಾತನನ್ನ ಕೊಂದ ಮತಾಂಧರು!!! ಯೋಗಿ ಸರ್ಕಾರ ಜಿಹಾದಿಗಳ ವಿರುದ್ಧ ಶುರುವಾಗಿದೆ ಸಮರ!!

Published

on

 • 2K
 •  
 •  
 •  
 •  
 •  
 •  
 •  
  2K
  Shares

ಜನವರಿ 26ರಂದು ನಾವೆಲ್ಲಾ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದರೆ ಅತ್ತ ಉತ್ತರ ಪ್ರದೇಶದಲ್ಲಿ ಮತಾಂಧರು ಅಟ್ಟಹಾಸವನ್ನು ಮೆರೆದಿದ್ದರು. ನಮ್ಮ ಸಂಭ್ರಮಾಚರಣೆಯಲ್ಲಿ ಮತಾಂಧರು ಮೆರೆದಿದ್ದ ಅಟ್ಟಹಾಸ ಗೊತ್ತಾಗಲೇ ಇಲ್ಲ. ಇಡೀ ದೇಶಕ್ಕೆ ದೇಶವೇ ರಾಜಪಥ್ ನಲ್ಲಿ ನಡೆಯುತ್ತಿರು ಗಣರಾಜ್ಯೋತ್ಸವದ ಆಚರಣೆ, ಪರೇಡ ನೋಡುತ್ತಿದ್ದೆವು. ನಾವೆಲ್ಲಾ ಸಂಭ್ರಮಾಚರಣೆಯಲ್ಲಿ ಇರುವುದರಿಂದಲೋ ಏನೋ ಉತ್ತರ ಪ್ರದೇಶದಲ್ಲಿ ಗಲಭೆ ಎಬ್ಬಿಸಿ ನಮ್ಮ ಸಂಭ್ರಮಾಚರೆಣೆಯನ್ನು ಮುರಿಯಲು ಮತಾಂಧರು ಪ್ರಯತ್ನಿಸಿದ್ದರು.

ಅಷ್ಟಕ್ಕೂ ಅಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು ಏನು ಗೊತ್ತಾ?

ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಘೋಷಣೆಯು ದೇಶಭಕ್ತರ ರಕ್ತ ಸಂಚಲನವನ್ನುಂಟು ಮಾಡಿತ್ತು. ಅದೇ ಒಂದೇ ಒಂದು ಘೋಷಣೆಯಿಂದ ಸುಮಾರು 6.5 ಜನ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಅಗ್ನಿಗೆ ಹವಿಸ್ಸಾಗಿ ತಮ್ಮ ಪ್ರಾಣಾರ್ಪಣೆ ಮಾಡಿ ಕೊನೆಗೂ ನಮಗೆ ಸ್ವಾತಂತ್ರ್ಯವನ್ನು ಅರ್ಪಿಸಿ ಮಣ್ಣಲ್ಲಿ ಮಣ್ಣಾದರು.

ಭಾರತ ಮಾತಾಕೀ ಜೈ ಮತ್ತು ವಂದೇ ಮಾತರಂ ಘೋಷಣೆಯಿಂದ ಸ್ಪೂರ್ತಿ ಪಡೆದು ಸ್ವಾತಂತ್ರ್ಯ ಹೋರಾಟದ ನೊಗಕ್ಕೆ ಹೆಗಲುಕೊಟ್ಟು ಪ್ರಾಣಾರ್ಪಣೆ ಮಾಡಿದ ಸೇನಾನಿಗಳು ಸೋ ಕಾಲ್ಡ್ ಸೆಕ್ಯುಲರ್ ಹೋರಾಟಗಾರರ ಅರಚಾಟದಲ್ಲಿ ಕಣ್ಮರೆಯಾದಂತಾದರು. ಅವರ ಹೆಸರು ಕೂಡಾ ಇತಿಹಾಸದಲ್ಲಿ ಮರೆಯಾಗುವಂತೆ ಷಡ್ಯಂತ್ರ ಮಾಡಲಾಯಿತು.

ಜೈ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಹಾಕುತ್ತಾ ನಗು ನಗುತ್ತಾ ನೇಣಿಗೆ ಚುಂಬಿಸಿ ಮಾತೃಭೂಮಿಯ ಮುಕ್ತಿಗಾಗಿ ಹೋರಾಡಿದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ ಗುರು, ಸುಖದೇವ್, ರಾಮ್ ಪ್ರಸಾದ್ ಬಿಸ್ಮಲ್ಲಾ, ಅಶ್ಫಾಖ್ ಉಲ್ಲಾ ಖಾನ್, ಮದನ್ ಲಾಲ್ ಧೀಂಗ್ರಾ ಮುಂತಾದ ಭಾರತಾಂಬೆಯ ಸುಪುತ್ರರ ಹೆಸರು ನಮ್ಮ ಇತಿಹಾಸದ ಮೂಲೆಯಲ್ಲಿ ಬಂದು ಹೋಗುವಂತೆ ಸೋ ಕಾಲ್ಡ್ ಸೆಕ್ಯುಲರ್ ಗಳು ಮಾಡಿಟ್ಟರು.

ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಘೋಷಣೆಗಳು ಬ್ರಿಟಿಷರ ನಿದ್ದೆಗೆಡಿಸಿದ್ದವು. ಸ್ವಾತಂತ್ರ್ಯಾ ನಂತರ ವಂದೇ ಮಾತರಂ ಗೀತೆಯನ್ನೇ ರಾಷ್ಟ್ರೀಯ ಗೀತೆಯನ್ನಾಗಿ ಮಾಡಬೇಕೆಂದು ದೇಶಪ್ರೇಮಿಗಳ ಹಂಬಲವಿತ್ತು. ಆದರೆ ವಂದೇ ಮಾತರಂ ಗೀತೆ ಅನ್ಯ ಧರ್ಮೀಯರಿಗೆ ಇಷ್ಟವಾಗುವುದಿಲ್ಲವೆಂಬ ಟೊಳ್ಳು ಮಾತಿಗೆ ಆ ಗೀತೆಯನ್ನು ಕಡೆಗಣಿಸಿ, ಸ್ವಾತಂತ್ರ್ಯದ ಅಗ್ನಿಗೆ ಹವಿಸ್ಸಾದ ಕ್ರಾಂತಿಕಾರಿಗಳಿಗೆ ಮೋಸ ಮಾಡಿಬಿಟ್ಟರು‌.

ಅಷ್ಟಕ್ಕೂ ಈಗ ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಘೋಷಣೆಯ ವಿಷಯ ಯಾಕೆ ಹೇಳ್ತಿದೀನಿ ಗೊತ್ತಾ?

ಉತ್ತರ ಪ್ರದೇಶದಲ್ಲಿ ನಡೆದ ಗಲಭೆಯೂ ಇದೇ ಘೋಷಣೆಗಾಗಿ‌. ಜನವರಿ 26ರಂದು ಉತ್ತರ ಪ್ರದೇಶದಲ್ಲಿ ದೇಶಭಕ್ತರ ತಂಡವೊಂದು ತಿರಂಗಯಾತ್ರೆಯನ್ನು ಹಮ್ಮಿಕೊಂಡಿದ್ದರು. ತಿರಂಗ ಯಾತ್ರೆ ಹಮ್ಮಿಕೊಂಡದ್ದು ತಪ್ಪಾ? ಗಣರಾಜ್ಯೋತ್ಸವದ ಆಚರಣೆ ಮಾಡುವುದು ತಪ್ಪಾ? ಮತಾಂಧರಿಗೆ ಅದು ತಪ್ಪಾಗಿ ಕಾಣಿಸಿತು. ಕಾರಣವಿಷ್ಟೆ ಅವರು ದೇಶಕ್ಕೆ ನಿಷ್ಠರಾಗಿಲ್ಲ. ದೇಶ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಖಂಡಿತವಾಗಿಯೂ ಇಷ್ಟವಾಗಲ್ಲ.

ಅಂದು ದೇಶಭಕ್ತರ ತಂಡವೊಂದು ಉತ್ತರ ಪ್ರದೇಶದ ಕಸ್ಗಂಜ್ ಎಂಬ ನಗರದಲ್ಲಿ ತಿರಂಗಯಾತ್ರೆ ಹಮ್ಮಿಕೊಂಡು, ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಮೊಳಗಿಸುತ್ತಾ ಬೀದಿ ಬೀದಿಗಳಲ್ಲಿ ತಿರಂಗಾಯಾತ್ರೆ ಮಾಡುತ್ತಿದ್ದರು. ಈ ತಿರಂಗಾ ಯಾತ್ರೆ ಮತ್ತು ಘೋಷಣೆಗಳು ಆ ನಗರದಲ್ಲಿನ ಮತಾಂಧರಿಗೆ ಇಷ್ಟವಾಗಲಿಲ್ಲ. ಏಕಾಏಕಿ ಆ ದೇಶದ ಭಕ್ತರ ಮೇಲೆ ಮತಾಂಧರು ದಾಳಿ ನಡೆಸಿಬಿಟ್ಟರು‌.

ಒಮ್ಮೆಲೆ ಮತಾಂಧರ ಗುಂಡಿನ ಶಬ್ದ ಕೇಳಿಸಿತು. ಆ ಗುಂಡು ದೇಶಭಕ್ತ ಚಂದನ ಗುಪ್ತಾನ ಎದೆಗೆ ತಾಗಿತು. ಆ ದೇಶಭಕ್ತ ಯುವಕ ಒಂದೇ ಮಾತರಂ ಘೋಷಣೆಯೊಂದಿಗೆ ನೆಲಕ್ಕುರುಳಿ ತಾಯಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿಬಿಟ್ಟ. ಆಗ ಬ್ರಿಟಿಷರು ಇದೇ ರೀತಿಯಲ್ಲಿ ಕ್ರಾಂತಿಕಾರಿಗಳ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದರು. ವಂದೇ ಮಾತರಂ, ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುವುದೇ ಮಹಾಪರಾಧ ಎನ್ನುವಂತೆ ಬ್ರಿಟಿಷರು ಮಾಡಿಬಿಟ್ಟಿದ್ದರು‌.

ಆದರೆ ಈಗ ನಾವು ಸ್ವಾತಂತ್ರ್ಯದ ಗಾಳಿಯನ್ನು ಸೇವಿಸುತ್ತದ್ದೇವೆ. ಈಗಲೂ ಬ್ರಿಟಿಷರ ಹಾಗೆ ಮತಾಂಧರು ವಂದೇ ಮಾತರಂ, ಭಾರತ ಮಾತಾ ಕೀ ಜೈ ಘೋಷಣೆ ಕೇಳಿದರೆ ಉರಿದುಬೀಳ್ತಾರೆ. ಉರಿದು ಬಿದ್ದರೆ ಉರಿದು ಬೀಳಲಿ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಗುಂಡಿನ ಮಳೆ ಸುರಿಸಿದಂತೆ ಇಂದು ಮತಾಂಧರು ಗುಂಡಿನ ಮಳೆ ಸುರಿಸುತ್ತಿದ್ದಾರೆ ಅನ್ನುವುದೇ ವಿಪರ್ಯಾಸ.

ನರೇಂದ್ರ ಮೋದಿಯವರು ದೆಹಲಿಯ ರಾಜಪಥ್ ನಲ್ಲಿ ಆಸಿಯಾನ್ ರಾಷ್ಟ್ರಗಳ 10 ಮುಖ್ಯ ಅತಿಥಿಗಳೊಂದಿಗೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದರೆ, ನಾವೆಲ್ಲಾ ಅದನ್ನೇ ನೋಡುತ್ತಾ ಸಂತೋಷ ಪಡುತ್ತಿದ್ದೆವು. ಆದರೆ ಇತ್ತ ಉತ್ತರಪ್ರದೇಶದಲ್ಲಿ ಮತಾಂಧರು ಅಟ್ಟಹಾಸ ಮೆರೆದು ಬಿಟ್ಟಿದ್ದರು. ಇಡೀ ಉತ್ತರ ಪ್ರದೇಶ ಬೆಚ್ಚಿಬಿದ್ದು, ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಎನ್ನುವುದೇ ತಪ್ಪಾ ಅಂತ ಕೇಳಿದ್ದರು.

ಇಡೀ ರಾಷ್ಟ್ರ ಕೆಲ ತಿಂಗಳುಗಳಿಂದ ಉತ್ತರ ಪ್ರದೇಶದ ಕಡೆ ನೋಡುತ್ತಲಿದೆ. ಕಾರಣವಿಷ್ಟೇ ಸಹೃದಯಿ ಸಂತ ಯೋಗಿ ಆದಿತ್ಯಾನಾಥರು ಉತ್ತರ ಪ್ರದೇಶದಲ್ಲಿ ಹೊಸ ಸಂವಲನ ಮೂಡಿಸಿ ಆ ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ‌. ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂಬ ಘೋಷಣೆಯಿಂದ ದೇಶಭಕ್ತ ಯುವಕ ಮಡಿದಿದ್ದ ಸುದ್ದಿ ಯೋಗಿ ಆದಿತ್ಯಾನಾಥರಿಗೆ ಆಘಾತವನ್ನುಂಟು ಮಾಡಿತ್ತು.

ಆಗಲೇ ನೋಡಿ ಸಹೃದಯಿ ಸಂತ ಹಿಂದೂ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು ಸಿಡಿದೆದ್ದದ್ದು‌. ತಕ್ಷಣವೇ ಮತಾಂಧರು ಯಾವ ಮೂಲೆಯಲ್ಲಿ ಅಡಗಿದ್ದರೂ ಬಿಡಬೇಡಿ ಎಂದು ಆದೇಶ ಕೊಟ್ಟರು. ಯಾವುದೇ ಕಾರಣಕ್ಕೂ ಮತಾಂಧ ಆರೋಪಿಯ ಮೇಲೆ ಕರಣೆ ತೋರಬೇಡಿ, ಆತ ಯಾವ ಬಿಲದಲ್ಲಿ ಅಡಗಿದ್ದರೂ ಒದ್ದು ಬಂಧಿಸಿ, ತಕ್ಕ ಪಾಠ ಕಲಿಸಿ ಎಂಬ ಆದೇಶ ಕೊಟ್ಟರು.

ಮೊದಲೇ ಯೋಗಿ ಆದಿತ್ಯಾನಾಥರು ದೇಶದ್ರೋಹಿಗಳನ್ನು ಕಂಡರೆ ಉರಿದು ಬೀಳುತ್ತಾರೆ. ಅಂತಹುದರಲ್ಲಿ ದೇಶದ್ರೋಹಿಯೊಬ್ಬ ದೇಶಪ್ರೇಮಿಯನ್ನು ಅದು ವಂದೇ ಮಾತರಂ ಘೋಷಣೆಗಾಗಿ ಕೊಂದಿದ್ದಾನೆಂದರೆ ಸುಮ್ಮನಿರುತ್ತಾರಾ? ಈಗಾಗಲೇ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯಾನಾಥರು ಅಧಿಕಾರಕ್ಕೆ ಬಂದಮೇಲೆ ಸರಿಸುಮಾರು 1000ಕ್ಕಿಂತಲೂ ಅಧಿಕ ಗೂಂಡಾಗಳನ್ನು ಎನ್‍ಕೌಂಟರ್ ಮೂಲಕ ಕೊಂದು ಬಿಸಾಕಿದವರು.

ಯೋಗಿ ಆದಿತ್ಯಾನಾಥರು ಆ ಮತಾಂಧ ದೇಶದ್ರೋಹಿಯ ಹೆಡೆಮುರಿಕಟ್ಟಲು ಹೇಗೆ ಕಾರ್ಯಾಚರಣೆಗೆ ಆದೇಶ ಕೊಟ್ಟಿದ್ದಾರೆ ಗೊತ್ತಾ?

ಒಬ್ಬ ದ್ರೋಹಿಯನ್ನು ಹುಡುಕಲು ಯಾವ ರೀತಿ ಪೊಲೀಸ್ ಪಡೆಯನ್ನು ಉಪಯೋಗಿಸುತ್ತಿದ್ದಾರೆ ಎಂದರೆ, ತನ್ನ ಸರ್ಕಾರದ ಅರೆ ಮಿಲಿಟರಿ ಪಡೆಯನ್ನೇ ಹಂತಕನ ಬಂಧನಕ್ಕೆ ನಿಯೋಜಿಸಿದ್ದಾರೆ. ಕಪ್ರ್ಯೂ ಜಾರಿಗೊಳಿಸಿದ ಸಂದರ್ಭದಲ್ಲಿ ಈ ಪಡೆಯನ್ನು ನಿಯೋಜಿಸುವು ಸಾಮಾನ್ಯ. ಆದರೆ ಓರ್ವ ಹಂತಕನನ್ನು ಬಂಧಿಸಲು ಈ ರೀತಿ ಸೈನ್ಯವನ್ನೇ ನಿಯೋಜಿಸುವುದು ಭಾರೀ ಅಪರೂಪ.

ಚಂದನ್ ಗುಪ್ತಾ ಹತ್ಯೆಯ ಆರೋಪಿಗಳ ಪತ್ತೆಹಚ್ಚಲು ತನ್ನ ಸೈನ್ಯವನ್ನೇ ಆ ನಗರದಲ್ಲಿ ಇರಿಸಿಬಿಟ್ಟಿದೆ. ಕಸ್ಗಂಜ್ ಎಂಬ ನಗರದಲ್ಲಿರುವ ಪೇಟೆಯಲ್ಲಿರುವ ಗಲ್ಲಿ ಗಲ್ಲಿಯನ್ನೂ ಬಿಡದೆ ಹಂತಕನಿಗೆ ಬಲೆ ಬೀಸಿದ್ದಾರೆ. ಆ ಗಲ್ಲಿಯಿಂದ ಆರೋಪಿ ತಪ್ಪಿಸಿಕೊಂಡು ಹೊರಹೋಗದಂತೆ ನೋಡಿಕೊಳ್ಳಲು ಡ್ರೋನ್ ಕ್ಯಾಮರಾವನ್ನು ಉಪಯೋಗಿಸುತ್ತಿದ್ದಾರೆ. ಹಂತಕ ಯಾವ ಮೂಲೆಯಲ್ಲೇ ಅವಿತಿದ್ದರೂ ನಾವು ಬಿಡೋದಿಲ್ಲ ಎಂಬ ಸಂದೇಶವನ್ನೇ ಯಾರಿದ್ದಾರೆ.

ಸ್ವಾತಂತ್ರ್ಯಾ ನಂತರವೂ ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಹೇಳುವುದು ಮಹಾಪಾರಾಧ ಎನ್ನುವುದು ಮಾತ್ರ ವಿಪರ್ಯಾಸ‌. ಆ ಮತಾಂಧ ದೇಶದ್ರೋಹಿಯನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ, ಮುಂದೆ ಇಂತಹ ದೇಶದ್ರೋಹಿಗಳು ಬಾಲ ಬಿಚ್ಚದಂತೆ ಮಾಡಬೇಕು.

– Team Nationalist Views

 •  
  2K
  Shares
 • 2K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com